ಬ್ರಿಡ್ಜ್ಟೌನ್: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಪೂರ್ವಭಾವಿಯಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್ ಜೇಸನ್ ರಾಯ್ 36 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ.
ಬಾರ್ಬಡೊಸ್ ಅಧ್ಯಕ್ಷರ XI ವಿರುದ್ಧ ನಡೆದ ನಡೆದ ಅಭ್ಯಾಸ ಪಂದ್ಯದಲ್ಲಿ ಜೇಸನ್ ರಾಯಲ್ 47 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್ ಮತ್ತು 9 ಬೌಂಡರಿಗಳ ಸಹಿತ 115 ರನ್ ಸಿಡಿಸಿ ಪರಾಕ್ರಮ ಮೆರೆದಿದ್ದಾರೆ. ಇವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 231ರನ್ಗಳಿಸಿತ್ತು.
ಜೇಸನ್ ರಾಯ್ಗೆ ಸಾಥ್ ನೀಡಿದ ಟಾಮ್ ಬಾಂಟನ್ 23 ಎಸೆತಗಳಲ್ಲಿ32, ಜೇಮ್ಸ್ ವಿನ್ಸ್ 29 ಎಸೆತಗಳಲ್ಲಿ 40 ಮಾರ್ಗನ್ 12 ಎಸೆತಗಳಲ್ಲಿ 22 ರನ್ಗಳಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
232 ರನ್ಗಳ ಗುರಿ ಬೆನ್ನತ್ತಿದ ಬಾರ್ಬಡೊಸ್ ಅಧ್ಯಕ್ಷರ ಇಲೆವೆನ್ ಕೇವಲ 137 ರನ್ಗಳಿಗೆ ಆಲೌಟ್ ಆಗುವ ಮೂಲಕ 94 ರನ್ಗಳ ಸೋಲು ಕಂಡಿತು. ಶಮರ್ ಸ್ರಿಂಗರ್ 36, ಕೆವಿನ್ ಸ್ಟೌಟ್ 18 , ಶಿಯಾನ್ ಬ್ರಾಥ್ವೇಟ್ 22 ರನ್ಗಳಿಸಿದರು.
ತೈಮಲ್ ಮಿಲ್ಸ್ 25ಕ್ಕೆ 3, ಆದಿಲ್ ರಶೀದ್ 9ಕ್ಕೆ2, ಕ್ರಿಸ್ ಜೋರ್ಡನ್ 22ಕ್ಕೆ 2, ರೀಸ್ ಟಾಪ್ಲೆ, ಸಕಿಬ್ ಮಹ್ಮೂದ್ ಮತ್ತು ಲಿಯಾಮ್ ಡಾಸನ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:ವೆಂಕಟೇಶ್ ಅಯ್ಯರ್ಗೆ ಬೌಲಿಂಗ್ ನೀಡದ ಕಾರಣ ಬಹಿರಂಗ ಪಡಿಸಿದ ಶಿಖರ್ ಧವನ್!