ಲಖನೌ: ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಭಾರತ ತಂಡ ಮೊದಲ ಪಂದ್ಯದಲ್ಲಿ ಶ್ರೀಲಂಕಾಗೆ 200 ರನ್ಗಳ ಬೃಹತ್ ಮೊತ್ತದ ಗುರಿ ನೀಡಿದೆ. 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಭಾರತಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು.
ಇನ್ನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಮತ್ತು ಇಶಾನ್ ಕಿಶನ್ ಶ್ರೀಲಂಕಾದ ಮೊನಚಿಲ್ಲದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದರು. ಈ ಜೋಡಿ ಮೊದಲ ವಿಕೆಟ್ಗೆ 111ರನ್ಗಳ ಜೊತೆಯಾಟ ನೀಡಿ ಭರ್ಜರಿ ಆರಂಭ ಒದಗಿಸಿಕೊಟ್ಟಿತು.
-
A 56 ball 89 from @ishankishan51 followed by a 57* off 28 from @ShreyasIyer15 propels #TeamIndia to a formidable total of 199/2 on the board.
— BCCI (@BCCI) February 24, 2022 " class="align-text-top noRightClick twitterSection" data="
Sri Lanka chase underway.
Scorecard - https://t.co/RpSRuIlfLe #INDvSL @Paytm pic.twitter.com/xNGtggaIWK
">A 56 ball 89 from @ishankishan51 followed by a 57* off 28 from @ShreyasIyer15 propels #TeamIndia to a formidable total of 199/2 on the board.
— BCCI (@BCCI) February 24, 2022
Sri Lanka chase underway.
Scorecard - https://t.co/RpSRuIlfLe #INDvSL @Paytm pic.twitter.com/xNGtggaIWKA 56 ball 89 from @ishankishan51 followed by a 57* off 28 from @ShreyasIyer15 propels #TeamIndia to a formidable total of 199/2 on the board.
— BCCI (@BCCI) February 24, 2022
Sri Lanka chase underway.
Scorecard - https://t.co/RpSRuIlfLe #INDvSL @Paytm pic.twitter.com/xNGtggaIWK
32 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ರೋಹಿತ್ 44 ರನ್ಗಳಿಸಿ ಲಹಿರು ಕುಮಾರಗೆ ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್ 56 ಎಸೆತಗಳಲ್ಲಿ 10 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ 89 ರನ್ಗಳಿಸಿ ಶನಕ ಬೌಲಿಂಗ್ನಲ್ಲಿ ಲಿಯಾನಗೆ ಅವರಿಗೆ ಕ್ಯಾಚ್ ನೀಡಿ ಚೊಚ್ಚಲ ಶತಕ ಸಿಡಿಸುವ ಅವಕಾಶ ತಪ್ಪಿಸಿಕೊಂಡರು.
3ನೇ ಕ್ರಮಾಂಕದಲ್ಲಿ ಬಡ್ತಿಪಡೆದಿದ್ದ ಶ್ರೇಯಸ್ ಅಯ್ಯರ್ ಕೇವಲ 28 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಅಜೇಯ 57 ರನ್ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು.