ಆಸ್ಟ್ರೇಲಿಯಾದಲ್ಲಿ ಟಿ20 ಲೀಗ್ನ ಬಿಗ್ ಬ್ಯಾಷ್ ಪಂದ್ಯಗಳು ನಡೆಯುತ್ತಿವೆ. ಬುಧವಾರ ಪರ್ತ್ ಸ್ಕ್ರ್ಯಾಚರ್ಸ್ ಮತ್ತು ಹೊಬರ್ಟ್ ಹರಿಕೇನ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದ ಕಮೆಂಟರಿ ನೀಡುತ್ತಿದ್ದ ವೇಳೆ ಡಬಲ್ ಮೀನಿಂಗ್ ಮಾತೊಂದು ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಸಂಭಾಷಣೆ ವೈರಲ್ ಆಗಿದೆ.
ಪಂದ್ಯದ ವೇಳೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯಡಂ ಗಿಲ್‌ಕ್ರಿಸ್ಟ್ ಹಾಗೂ ಇಂಗ್ಲೆಂಡ್‌ನ ಮಾಜಿ ಆಟಗಾರ್ತಿ ಇಸಾ ಗುಹಾ ಕಾಮೆಂಟರಿ ನೀಡುತ್ತಿದ್ದರು. ಈ ವೇಳೆ ಗಿಲ್‌ಕ್ರಿಸ್ಟ್ ಜೊತೆಗಿದ್ದ ಕಾಮೆಂಟರಿ ನೀಡುವ ಮತ್ತೊಬ್ಬ ವ್ಯಕ್ತಿ ಕ್ರಿಕೆಟ್ನಲ್ಲಿ ಕೇರಂ ಬಾಲ್ ಬೌಲಿಂಗ್ ಬಗ್ಗೆ ವಿವರಣೆ ನೀಡುತ್ತಿದ್ದರು.
Isa Guha Commentary : ಮಧ್ಯದ ಬೆರಳು ಉದ್ದವಿರುವ ಆಟಗಾರರು ಕೇರಂ ಬಾಲ್ ಬೌಲಿಂಗ್ ಉತ್ತಮವಾಗಿ ಎಸೆಯಲು ಸಾಧ್ಯವಾಗುತ್ತದೆ. ಮಧ್ಯದ ಬೆರಳು ಉದ್ದವಿರುವ ಆಟಗಾರರನ್ನು ಗುರ್ತಿಸಿ, ಅವರಿಗೆ ಕೇರಂ ಬೌಲಿಂಗ್ ಎಸೆಯಲು ತರಬೇತುದಾರರು ತರಬೇತಿ ನೀಡುತ್ತಾರೆ ಎಂದು ಆ ವ್ಯಕ್ತಿ ಹೇಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಇಸಾ ಗುಹಾ 'ನಿಮ್ಮದು ಎಷ್ಟು ದೊಡ್ಡದು?' (ಮಧ್ಯದ ಬೆರಳು) ಎಂದು ಡಬಲ್ ಮೀನಿಂಗ್ ಪ್ರಶ್ನೆ ಕೇಳಿದ್ದಾರೆ.
-
A reasonable question from @isaguha
— Alexandra Hartley (@AlexHartley93) December 12, 2021 " class="align-text-top noRightClick twitterSection" data="
👀😂😂😂😂😂😂
pic.twitter.com/Tzu5F2emUg
">A reasonable question from @isaguha
— Alexandra Hartley (@AlexHartley93) December 12, 2021
👀😂😂😂😂😂😂
pic.twitter.com/Tzu5F2emUgA reasonable question from @isaguha
— Alexandra Hartley (@AlexHartley93) December 12, 2021
👀😂😂😂😂😂😂
pic.twitter.com/Tzu5F2emUg
ಒಂದು ಕ್ಷಣ ಆ್ಯಡಂ ಗಿಲ್‌ಕ್ರಿಸ್ಟ್ ಮತ್ತು ಮತ್ತೊಬ್ಬ ಕಾಮೆಂಟೇಟರ್ ಶಾಕ್ ಆಗಿದ್ದು, ಜೋರಾಗಿ ನಕ್ಕು, ನಂತರ ತಮ್ಮ ವ್ಯಾಖ್ಯಾನವನ್ನು ಮುಂದುವರೆಸಿದ್ದಾರೆ. ಈ ವಿಡಿಯೋವನ್ನು ಕ್ರಿಕೆಟ್ ಮಾಜಿ ಆಟಗಾರ್ತಿ ಅಲೆಕ್ಸಾಂಡ್ರಾ ಹಾರ್ಟ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
ಇದನ್ನೂ ಓದಿ: ಚಿನ್ನದ ಹುಡುಗಿ ಹುಟ್ದಬ್ಬ.. Happy Birthday Geeta Phogat