ಮುಂಬೈ: ಟೀಂ ಇಂಡಿಯಾ ಮಾತ್ರವಲ್ಲದೇ ಐಪಿಎಲ್‌ನಲ್ಲೂ ನಾಯಕತ್ವವನ್ನು ತ್ಯಜಿಸಿರುವ ವಿರಾಟ್ ಕೊಹ್ಲಿ 2021ರಲ್ಲಿ ಭಾರತದ ಅತ್ಯಂತ ಮೌಲ್ಯಯುತ ನಂಬರ್ 1 ಸೆಲೆಬ್ರಿಟಿ ಎಂಬ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ವಿರಾಟ್ ಅವರ ಬ್ರ್ಯಾಂಡ್ ಮೌಲ್ಯವು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.22 ರಷ್ಟು ಕಡಿಮೆಯಾಗಿ 185.7 ಮಿಲಿಯನ್‌ಗೆ ಡಾಲರ್‌ಗೆ ತಲುಪಿದೆ (ಅಂದಾಜು 1,400 ಕೋಟಿ ರೂ.) ಎಂದು ಪ್ರಸಿದ್ಧ ಬ್ರ್ಯಾಂಡ್ ಡಫ್ ಮತ್ತು ಫೆಲ್ಪ್ಸ್ ತಿಳಿಸಿದೆ. ಅತ್ಯಂತ ಮೌಲ್ಯಯುತ ಸೆಲೆಬ್ರಿಟಿ ಸ್ಥಾನದಲ್ಲಿ ಕೊಹ್ಲಿ ಸತತ ಐದನೇ ವರ್ಷವೂ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.
ವಿರಾಟ್‌ರಿಂದ ಟೀಂ ಇಂಡಿಯಾ ನಾಯಕತ್ವವನ್ನು ಪಡೆದಿರುವ ರೋಹಿತ್ ಶರ್ಮಾ ಅವರ ಬ್ರಾಂಡ್ ಮೌಲ್ಯ 243 ಕೋಟಿ ರೂಪಾಯಿಗಳಿದ್ದು, 13ನೇ ಸ್ಥಾನದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಸಚಿನ್ 8 ವರ್ಷಗಳ ನಂತರವೂ ಈ ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿದ್ದಾರೆ. ಇವರ ಬ್ರಾಂಡ್ ಮೌಲ್ಯ 358 ಕೋಟಿ ರೂಪಾಯಿ ಇದೆ.
ಮತ್ತೊಬ್ಬ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ 462 ಕೋಟಿ ರೂ.ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ಬಾಲಿವುಡ್ ನಟರಾದ ರಣವೀರ್ ಸಿಂಗ್ (1,196 ಕೋಟಿ ರೂ.) ಮತ್ತು ಅಕ್ಷಯ್ ಕುಮಾರ್ (1055 ಕೋಟಿ ರೂ.) ಪಟ್ಟಿಯಲ್ಲಿ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ. ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು 166 ಕೋಟಿ ರೂಪಾಯಿಗಳೊಂದಿಗೆ 20ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: 'IPLನಲ್ಲಿ ಆರ್ಸಿಬಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾದರೆ, ಅದರ ಶ್ರೇಯ ಎಬಿಡಿಗೂ ಸಲ್ಲುತ್ತದೆ'