ETV Bharat / sports

'ಈ ಸಲ ಕಪ್ ಆರ್​ಸಿಬಿಯದ್ದೇ'.. ಭವಿಷ್ಯ ನುಡಿದ ಹರ್ಭಜನ್ ಸಿಂಗ್​ - ಹರ್ಭಜನ್ ಸಿಂಗ್ ಆರ್​ಸಿಬಿ

15ನೇ ಆವೃತ್ತಿ ಐಪಿಎಲ್​​ನಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್​​ ಆಗಿ ಹೊರಹೊಮ್ಮಲಿದೆ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಹರ್ಭಜನ್ ಸಿಂಗ್ ಭವಿಷ್ಯ ನುಡಿದಿದ್ದಾರೆ.

Harbhajan Singh on RCB
Harbhajan Singh on RCB
author img

By

Published : May 27, 2022, 6:25 PM IST

ಅಹಮದಾಬಾದ್​: ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವನವಾಸ ಅಂತ್ಯಗೊಳ್ಳಲು ಕೇವಲ ಎರಡು ಹೆಜ್ಜೆ ಮಾತ್ರ ಬಾಕಿ ಉಳಿದಿದೆ. ಇಂದು ನಡೆಯುವ ಕ್ವಾಲಿಫೈಯರ್ ಹಾಗೂ ಭಾನುವಾರದ ಫೈನಲ್ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದರೆ, ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಲಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಸ್ಪಿನ್ನರ್​ ಹರ್ಭಜನ್ ಸಿಂಗ್ ಮಹತ್ವದ ಭವಿಷ್ಯ ನುಡಿದಿದ್ದಾರೆ.

15ನೇ ಆವೃತ್ತಿ ಐಪಿಎಲ್​ನಲ್ಲಿ ಈಗಾಗಲೇ ಗುಜರಾತ್ ಟೈಟನ್ಸ್​ ಫೈನಲ್​ಗೆ ಲಗ್ಗೆ ಹಾಕಿದ್ದು, ಇಂದಿನ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ಹಾಗೂ ಬೆಂಗಳೂರು ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್​ಗೆ ಲಗ್ಗೆ ಹಾಕಲಿದೆ. ಹರ್ಭಜನ್ ಸಿಂಗ್ ಅವರ ನುಡಿದಿರುವ ಭವಿಷ್ಯದ ಪ್ರಕಾರ ಈಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್​ ಆಗಿ ಹೊರಹೊಮ್ಮಲಿದೆ ಎಂದಿದ್ದಾರೆ.

ಇದನ್ನೂ ಓದಿ: IPL ನೀತಿ ಸಂಹಿತೆ ಉಲ್ಲಂಘಿಸಿದ ದಿನೇಶ್​ ಕಾರ್ತಿಕ್​.. ವಾಗ್ದಂಡನೆಗೆ ಗುರಿಯಾದ ಆರ್​ಸಿಬಿ ಪ್ಲೇಯರ್​!

ಆರ್​ಸಿಬಿ ತಂಡದಲ್ಲಿ ಅತ್ಯುತ್ತಮ ಪ್ಲೇಯರ್ಸ್ ಇದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ ಲೈನ್ ಉತ್ತಮವಾಗಿದೆ. ತಂಡಕ್ಕಾಗಿ ಕಪ್​ ಗೆದ್ದುಕೊಡಬಲ್ಲ ಆಟಗಾರರು ಆರ್​ಸಿಬಿಯಲ್ಲಿರುವ ಕಾರಣ, ಈ ಸಲ ಚೊಚ್ಚಲ ಟ್ರೋಫಿಗೆ ಮುತ್ತಿಕ್ಕಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆರ್​ಸಿಬಿ ತಂಡ ಆವೃತ್ತಿ 1ರಿಂದಲೂ ಆಡುತ್ತಾ ಬಂದಿದ್ದೆ. ಇದೀಗ ಎಲ್ಲ ವಿಭಾಗ ಬಹಳ ಬಲಿಷ್ಠವಾಗಿದ್ದು, ಆ ತಂಡವನ್ನ ಸೋಲಿಸುವುದು ಅಷ್ಟೊಂದು ಸುಲಭವಲ್ಲ ಎಂದು ಭಜ್ಜಿ ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರಾಜಸ್ಥಾನ ಮತ್ತು ಬೆಂಗಳೂರು ತಂಡ 26 ಸಲ ಮುಖಾಮುಖಿಯಾಗಿದ್ದು, ಆರ್​ಆರ್​ 11 ಹಾಗೂ ಆರ್​ಸಿಬಿ 13ರಲ್ಲಿ ಜಯ ಸಾಧಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.