ETV Bharat / sports

ಲಕ್ನೋ ಸ್ಟಾರ್​ ಬೌಲರ್​ ಮಾರ್ಕ್​ ವುಡ್​ ಮೇ ತಿಂಗಳಲ್ಲಿ ಐಪಿಎಲ್​ಗೆ ಅಲಭ್ಯ

author img

By

Published : Apr 25, 2023, 9:38 PM IST

ಕೌಟುಂಬಿಕ ಕಾರಣದ ಹಿನ್ನಲೆ ಲಕ್ನೋ ಸೂಪರ್​ ಜೈಂಟ್ಸ್​ನ ಸ್ಟಾರ್​ ಬೌಲರ್​ ಮಾರ್ಕ್​ ವುಡ್​ ಮೇ ತಿಂಗಳಲ್ಲಿ ತವರಿಗೆ ಮರಳಲಿದ್ದಾರೆ.

Etv Bharat
Etv Bharat

ಲಕ್ನೋ ಸೂಪರ್ ಜೈಂಟ್ಸ್‌ನ ಪ್ರಮುಖ ಬೌಲರ್ ಮಾರ್ಕ್ ವುಡ್ ಅವರು ಮೇ ಅಂತ್ಯದಲ್ಲಿ ತಮ್ಮ ಮಗುವಿನ ಜನನದ ಸಮಯದಲ್ಲಿ ಹಾಜರಾಗಲು ಇಂಡಿಯನ್​ ಪ್ರೀಮಿಯರ್​ ಲೀಗ್​ 2023 ರ ಕೊನೆಯ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ವರದಿಯಾಗಿದೆ. ಇಂಗ್ಲಿಷ್ ಆಟಗಾರ ತಮ್ಮ ಅನಾರೋಗ್ಯದ ಕಾರಣ ಲಕ್ನೋ ಸೂಪರ್​ ಜೈಂಟ್ಸ್​ನ ಕೊನೆಯ ಎರಡು ಪಂದ್ಯಗಳಲ್ಲಿ ಆಡಲಿಲ್ಲ. ಮಾರ್ಕ್ ಬೌಲಿಂಗ್ ಲೈನ್‌ಅಪ್‌ನಲ್ಲಿ ಎಲ್‌ಎಸ್‌ಜಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 14 ರನ್​ ಬಿಟ್ಟುಕೊಟ್ಟು 5 ವಿಕೆಟ್​ ಪಡೆದಿದ್ದರು ಹಾಗೂ ನಾಲ್ಕು ಪಂದ್ಯಗಳಲ್ಲಿ 11 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ವುಡ್ ಮತ್ತು ಅವರ ಪತ್ನಿ ಮೇ ಅಂತ್ಯದಲ್ಲಿ ತಮ್ಮ ಎರಡನೇ ಮಗುವನ್ನು ಸ್ವಾಗತಿಸಲಿದ್ದಾರೆ. ತನ್ನ ಮಗುವಿನ ಜನನದ ಸಮಯದಲ್ಲಿ ಹಾಜರಿರಲು. ಮುಂಬರುವ ವಾರಗಳಲ್ಲಿ ತವರಿಗೆ ಮರಳಲಿದ್ದಾರೆ ಎಂದು ಹೇಳಲಾಗಿದೆ.

ವುಡ್ ಅನುಪಸ್ಥಿತಿಯಲ್ಲಿ, ಲಕ್ನೋ ಅಫ್ಘಾನ್ ವೇಗಿ ನವೀನ್-ಉಲ್-ಹಕ್ ಅವರನ್ನು ಆಡಿಸುತ್ತಿದೆ. ಎರಡು ಪಂದ್ಯದಲ್ಲಿ ನವೀನ್​ ಉತ್ತಮ ಬೌಲಿಂಗ್​ ಪ್ರದರ್ಶಿಸಿದ್ದಾರೆ. ತಮ್ಮ ಮೊದಲ ಪಂದ್ಯವನ್ನು ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿದರು, 4.75 ರ ಎಕಾನಮಿಯೊಂದಿಗೆ 19 ರನ್​ ಬಿಟ್ಟುಕೊಟ್ಟರು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ, ನವೀನ್ 4.50 ರ ಎಕಾನಮಿಯೊಂದಿಗೆ 18 ರನ್​ ಕೊಟ್ಟು 2 ವಿಕೆಟ್​ ಪಡೆದರು.

ಲಕ್ನೋ ತನ್ನ ಮುಂದಿನ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ ಶುಕ್ರವಾರ ಮೊಹಾಲಿಯಲ್ಲಿ ಆಡಲಿದೆ. ಎಲ್‌ಎಸ್‌ಜಿ ನಾಲ್ಕು ಪಂದ್ಯಗಳನ್ನು ಗೆದ್ದು ಮೂರರಲ್ಲಿ ಸೋತ 8 ಪಾಯಿಂಟ್‌ಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಹಿಂದಿನ ಪಂದ್ಯದಲ್ಲಿ, ಗುಜರಾತ್​ ಟೈಟಾನ್ಸ್​ ವಿರುದ್ಧ ಲಕ್ನೋ ಲೋ ಸ್ಕೋರ್​ ಆಟದಲ್ಲಿ 7 ರನ್​ ಸೋಲು ಕಂಡಿತ್ತು.

ಪಂದ್ಯದಲ್ಲಿ : ಟಾಸ್​​ ಗೆದ್ದು ಮೊದಲು ಬ್ಯಾಟಿಂಗ್​ ಮಾಡುವ ನಿರ್ಧಾರ ಕೈಗೊಂಡ ಗುಜರಾತ್​ ಟೈಟಾನ್ಸ್ ನಿಗಧಿತ ಓವರ್​ ಅಂತ್ಯಕ್ಕೆ 135 ರನ್​ ಸಾಧಾರಣ ಗುರಿಯನ್ನು ನೀಡಿತ್ತು. ಸಹಾ ಮತ್ತು ಹಾರ್ದಿಕ್​ ಪಾಂಡ್ಯ ಅವರ ರನ್​ ಸಹಾಯದಿಂದ ಗುಜರಾತ್ ಈ ಮೊತ್ತವನ್ನು ಗಳಿಸಿತ್ತು. ಕೃನಾಲ್​ ಪಾಂಡ್ಯ ಮತ್ತು ಸ್ಟೋಯಿನಿಸ್​ ಗುಜರಾತನ್ನು ಸಂಕಷ್ಟಕ್ಕೆ ದೂಡಿದ್ದರು.

136 ರನ್​ ಗುರಿಯನ್ನು ಬೆನ್ನು ಹತ್ತಲು ಬಂದ ಲಕ್ನೋ ಸೂಪರ್​ ಜೈಂಟ್ಸ್​ಗೆ ನಿಧಾನಗತಿಯ ಉತ್ತಮ ಆರಂಭ ದೊರೆತರೂ ತಂಡ ಗೆಲುವು ಸಾಧಿಸಲಿಲ್ಲ. ಕೆಎಲ್​ ರಾಹುಲ್​, ಕೈಲ್ ಮೇಯರ್ಸ್ ಮತ್ತು ಕೃನಾಲ್​ ಪಾಂಡ್ಯರಾ ರನ್​ ಗೆಲುವಿಗೆ ಕೊಡುಗೆಯಾಗಲಿಲ್ಲ. ಕೊನೆಯ ಓವರ್​ನಲ್ಲಿ ಎರಡು ರನ್​ ಔಟ್​ ಮತ್ತು ಎರಡು ವಿಕೆಟ್​ ನಷ್ಟವಾದದ್ದು ಲಕ್ನೋವನ್ಉ ಸೋಲಿನ ದವಡೆಗೆ ದೂಡಿತು.

ಸಂಕ್ಷಿಪ್ತ ಸ್ಕೋರ್‌ಗಳು: ಗುಜರಾತ್​ ಟೈಟಾನ್ಸ್​: 135/6 (ಹಾರ್ದಿಕ್ ಪಾಂಡ್ಯ 66, ವೃದ್ಧಿಮಾನ್ ಸಹಾ 47, ಕೃನಾಲ್ ಪಾಂಡ್ಯ 2/16), ಲಕ್ನೋ ಸೂಪರ್​ ಜೈಂಟ್ಸ್​: 128/7 (ಕೆಎಲ್ ರಾಹುಲ್ 68, ಕೈಲ್ ಮೇಯರ್ಸ್ 24, ನೂರ್ ಅಹ್ಮದ್ 2/18)

ಇದನ್ನೂ ಓದಿ: ಟೆಸ್ಟ್​ ಚಾಂಪಿಯನ್​ ಶಿಪ್​ಗೆ ಸ್ಟಾರ್​ ಬೌಲರ್ ​ಜಸ್ಪ್ರೀತ್ ಬೂಮ್ರಾಗಿಲ್ಲ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.