ETV Bharat / sports

ಹ್ಯಾರಿ ಬ್ರೂಕ್ ಶತಕ, ಹೈದರಾಬಾದ್​ಗೆ ಒಲಿದ ಜಯ: ದಿಟ್ಟ ಹೋರಾಟ ನಡೆಸಿ ಸೋತ ಕೆಕೆಆರ್ - ETV Bharath Kannada news

ಕೋಲ್ಕತ್ತಾದ ಈಡನ್​ ಗಾರ್ಡನ್ಸ್​​ನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ನೈಟ್​ ರೈಡರ್ಸ್ ತಂಡ ದಿಟ್ಟ ಹೋರಾಟ ನಡೆಸಿ ಹೈದರಾಬಾದ್​ ಸನ್​ರೈಸರ್ಸ್​ ವಿರುದ್ಧ ಸೋಲು ಕಂಡಿದೆ.

Knight Riders vs Sunrisers Hyderabad Match Score update
ಹ್ಯಾರಿ ಬ್ರೂಕ್ ಭರ್ಜರಿ ಶತಕ, ಕೆಕೆಆರ್​ಗೆ 229 ರನ್​ಗಳ ಬೃಹತ್​ ಗುರಿ
author img

By

Published : Apr 14, 2023, 7:12 PM IST

Updated : Apr 15, 2023, 12:24 AM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ)​: ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಹೈದರಾಬಾದ್​ ಸನ್​ ರೈಸರ್ಸ್​​ ತಂಡ 23 ರನ್​ಗಳಿಂದ ಜಯ ದಾಖಲಿಸಿದೆ. ಆರಂಭಿಕ ಆಟಗಾರ ಹ್ಯಾರಿ ಬ್ರೂಕ್​ ಶತಕದ ನೆರವಿನಿಂದ ಎಸ್​ಆರ್​​ಹೆಚ್​​ 228 ರನ್​ಗಳ ಬೃಹತ್​ ರನ್​ಗಳನ್ನು ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ ಕೆಕೆಆರ್​​ ತಂಡ ಗೆಲುವಿಗಾಗಿ ದಿಟ್ಟ ಹೋರಾಟ ನಡೆಸಿದರೂ 20 ಓವರ್​ಗಳಲ್ಲಿ 205 ರನ್​ ಗಳಿಸಲು ಮಾತ್ರ ಶಕ್ತವಾಯಿತು.

ಇಲ್ಲಿನ ಈಡನ್​ ಗಾರ್ಡನ್ಸ್​​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್​ ತಂಡ ​20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 288 ರನ್​ಗಳನ್ನು ಪೇರಿಸಿತ್ತು. ಈ ಸವಾಲಿನ ಮತ್ತು ಕಠಿಣ ಗುರಿ ಬೆನ್ನಟ್ಟಿದ ಕೆಕೆಆರ್​ ಉತ್ತಮ ಆರಂಭ ಪಡೆಯಲಿಲ್ಲ. ಇನ್ಸಿಂಗ್​ನ ಮೂರನೇ ಬಾಲ್​ನಲ್ಲಿ ಭುವನೇಶ್ವರ್​ ಕುಮಾರ್​ ಅವರಿಗೆ ರಹಮಾನುಲ್ಲಾ ಗುರ್ಬಾಜ್ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ನಂತರದಲ್ಲಿ ಮಾರ್ಕ್ ಜಾನ್ಸೆನ್ ಸತತ ಎರಡು ಎಸತೆಗಳಲ್ಲಿ ವೆಂಕಟೇಶ್​ ಅಯ್ಯರ್​ (10) ಮತ್ತು ಸುನಿಲ್ ನರೈನ್ (0) ವಿಕೆಟ್​ ಉರುಳಿಸಿ ಕೆಕೆಆರ್​ ತಂಡಕ್ಕೆ ಶಾಕ್​ ನೀಡಿದರು. ಅಲ್ಲದೇ, 20 ರನ್​ಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ವೇಳೆ ಆರಂಭಿಕ ಜಗದೀಸನ್​ ಜೊತೆಗೂಡಿದ ನಾಯಕ ನಿತೀಶ್ ರಾಣಾ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಈ ನಡುವೆ 21 ಎಸತೆಗಳಲ್ಲಿ ಐದು ಬೌಂಡರಿ ಮತ್ತು ಒಂದು ಸಿಕ್ಸರ್​ನೊಂದಿಗೆ 36 ಬಾರಿಸಿದ ಜಗದೀಸನ್ ಔಟಾದರು. ಈ ಮೂಲಕ 4ನೇ ವಿಕೆಟ್​ಗೆ 62 ರನ್​ಗಳನ್ನು ಕಲೆ ಹಾಕಿದ್ದ ಈ ಜೋಡಿ ಬೇರ್ಪಟ್ಟಿತು. ಮತ್ತೊಂದೆಡೆ, ಆಂಡ್ರೆ ರಸೆಲ್ 3 ರನ್​ಗಳಿಗೆ ಔಟ್​ ಆಗಿ ನಿರಾಶೆ ಮೂಡಿಸಿದರು.

ಮತ್ತೆ ಮಿಂಚಿದ ರಿಂಕು: ರಸೆಲ್​ ಔಟಾದ ಬಳಿಕ ನಾಯಕ ರಾಣಾ ಜೊತೆಗೂಡಿದ ರಿಂಕು ಸಿಂಗ್​ ತಂಡದ ಗೆಲುವಿಗಾಗಿ ಕೊನೆಯವರೆಗೆ ಹೋರಾಟ ನಡೆಸಿದರು. 6ನೇ ವಿಕೆಟ್​ಗೆ ರಾಣಾ ಮತ್ತು ರಿಂಕು 69 ರನ್​ಗಳನ್ನು ಬಾರಿಸಿದರು. 41 ಎಸೆತಗಳಲ್ಲಿ ರಾಣಾ ಆರು ಸಿಕ್ಸರ್​ಗಳು ಮತ್ತು ಐದು ಬೌಂಡರಿಗಳ ಸಮೇತ 75 ರನ್​ ಗಳಿಸಿ ನಿರ್ಗಮಿಸಿದರು. ಇದರಿಂದ ಪಂದ್ಯವು ಕೆಕೆಆರ್​ ಪರ ತಿರುಗಿತು. ಇತ್ತ, ರಿಂಕು ಸಿಂಗ್​ ಕುಗ್ಗದೆ ಬ್ಯಾಟ್​ ಬೀಸಿದರು. ಕೊನೆಯ ಓವರ್​ಗೆ 32 ರನ್​ಗಳ ಅಗತ್ಯವಿತ್ತು. ಆದರೆ, ಗೆಲವು ತಂದುಕೊಡಲು ಸಾಧ್ಯವಾಗಲಿಲ್ಲ. ತಲಾ ನಾಲ್ಕು ಸಿಕ್ಸರ್​ಗಳ ಮತ್ತು ಬೌಂಡರಿಗಳೊಂದಿಗೆ ಅಜೇಯ 58 ಸಿಡಿಸಿ ರಿಂಕು ಗಮನ ಸೆಳೆದರು.

ಇದಕ್ಕೂ ಮುನ್ನ ಆರಂಭಿಕ ಆಟಗಾರ ಹ್ಯಾರಿ ಬ್ರೂಕ್ ಅಬ್ಬರದ ಶತಕ ಮತ್ತು ನಾಯಕ ಐಡೆನ್ ಮಾರ್ಕ್ರಾಮ್ ಅವರ ಅರ್ಧಶತಕದ ನೆರವಿನಿಂದ ಎಸ್​ಆರ್​ಹೆಚ್ ತಂಡವು 228 ರನ್‌ಗಳು ಕಲೆ ಹಾಕಿತ್ತು. ಆಂಡ್ರೆ ರಸೆಲ್​ ಉತ್ತಮ ಎಕಾನಮಿಯಲ್ಲಿ ಬೌಲ್​ ಮಾಡಿ 3 ವಿಕೆಟ್​ ಪಡೆದರಾದರೂ ಎದುರಾಳಿ ಆಟಗಾರರ ರನ್ ಗಳಿಕೆಗೆ​ ಕಡಿವಾಣ ಹಾಕಲಾಗಲಿಲ್ಲ. ​

ಮಯಾಂಕ್​ ಅಗರ್ವಾಲ್​ 9 ರನ್‌ಗೆ ವಿಕೆಟ್​ ಒಪ್ಪಿಸಿದರೆ, ಅವರ ಬೆನ್ನಲ್ಲೇ ರಾಹುಲ್​ ತ್ರಿಪಾಠಿ ಸಹ 9 ರನ್​ಗೆ ಪೆವಿಲಿಯನ್​ಗೆ ಮರಳಿದರು. ಎರಡು ವಿಕೆಟ್​ ಪತನದ ನಂತರ ನಾಯಕ ಐಡೆನ್ ಮಾರ್ಕ್ರಾಮ್ ಮತ್ತೊಬ್ಬ ಆರಂಭಿಕ ಹ್ಯಾರಿ ಬ್ರೂಕ್ ಜತೆ ಸೇರಿ 80 ಪ್ಲಸ್​ ರನ್‌ಗಳ ಜೊತೆಯಾಟ ನೀಡಿದರು. ಮಾರ್ಕ್ರಾಮ್ ಐಪಿಎಲ್​ನ ನಾಲ್ಕನೇ ಅರ್ಧಶತಕ ದಾಖಲಿಸಿದರು. ಬ್ರೂಕ್​ ಜೊತೆಗೆ ಕೋಲ್ಕತ್ತಾ ಬೌಲರ್​ಗಳನ್ನು ಮನಸಿಚ್ಛೆ ದಂಡಿಸಿದ ವಿದೇಶಿ ಬ್ಯಾಟರ್​ಗಳು ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. 26 ಬಾಲ್ ಎದುರಿಸಿದ ಮಾರ್ಕ್ರಾಮ್ ಎರಡು ಬೌಂಡರಿ ಮತ್ತು 5 ಸಿಕ್ಸ್​ನಿಂದ 50 ರನ್​ ಪೇರಿಸಿದರು.

ನಾಯಕನ ವಿಕೆಟ್​ ಪತನದ ನಂತರ ಬಂದ ಅಭಿಷೇಕ್ ಶರ್ಮಾ ರನ್​ ರೇಟ್​ ಕುಸಿಯಲು ಬಿಡಲಿಲ್ಲ. ಶರ್ಮಾ ಬಿರುಸಿನ ಆಟವಾಡಿ 32 ರನ್‌ಗಳಿಗೆ ಔಟಾದರು. ಕೊನೆಯ ಎರಡು ಓವರ್​ ಬಾಕಿ ಇರುವಂತೆ ಬಂದ ಹೆನ್ರಿಚ್ ಕ್ಲಾಸೆನ್ 16 ರನ್​ ಗಳಿಸಿದರು. ಮತ್ತೊಂದೆಡೆ, ಹ್ಯಾರಿ ಬ್ರೂಕ್ 16ನೇ ಆವೃತ್ತಿಯ ಹಾಗೂ ಅವರ ಚೊಚ್ಚಲ ಐಪಿಎಲ್​ ಶತಕ ದಾಖಲಿಸಿ ಅಜೇಯರಾಗುಳಿದರು. ಭರ್ಜರಿ ಬ್ಯಾಟಿಂಗ್​ ಮಾಡಿದ ಅವರು 55 ಬಾಲ್​ನಲ್ಲಿ 12 ಬೌಂಡರಿ ಮತ್ತು 3 ಸಿಕ್ಸ್​ನಿಂದ 181ರ ಸ್ಟ್ರೈಕ್​ ರೇಟ್​ನಲ್ಲಿ ಶತಕ ದಾಖಲಿಸಿದರು.

ರಸೆಲ್​ಗೆ ಗಾಯ: 19ನೇ ಓವರ್​ ಮಾಡಲು ಬಂದ ರಸೆಲ್​ ಮೊದಲ ಬಾಲ್​ ಮಾಡುತ್ತಿದ್ದಂತೆ ಗಾಯಕ್ಕೆ ತುತ್ತಾದರು. ಮೊದಲ ಬಾಲ್​ನಲ್ಲಿ ಅಭಿಷೇಕ್ ಶರ್ಮಾ ವಿಕೆಟ್​ ಉರುಳಿತಾದರೂ ರಸೆಲ್​ ಪಾದದ ಗಾಯಕ್ಕೆ ತುತ್ತಾದರು. ಬೌಲಿಂಗ್​ ಮುಂದುವರೆಸಲಾಗದೇ ಮೈದಾನದಿಂದ ಹೊರಗುಳಿದರು. ಅವರು ಓವರ್ ಅ​ನ್ನು ಶಾರ್ದೂಲ್​ ಠಾಕೂರ್​ ಮುಂದುವರೆಸಿದರು. ಕೆಕೆಆರ್​ ಪರ ರಸೆಲ್​ ಮೂರು ಮತ್ತು ವರುಣ್​ 1 ವಿಕೆಟ್​ ಪಡೆದರು.

ಇದನ್ನೂ ಓದಿ: IPLನಲ್ಲಿ ಇಂದು: ಕೋಲ್ಕತ್ತಾ-ಹೈದರಾಬಾದ್‌ ಹಣಾಹಣಿಯಲ್ಲಿ ಯಾರಿಗೆ ಗೆಲುವು? ಹೇಗಿರಲಿದೆ ಪ್ಲೇಯಿಂಗ್‌ 11?

Last Updated : Apr 15, 2023, 12:24 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.