ಕೋಲ್ಕತ್ತಾ (ಪಶ್ಚಿಮ ಬಂಗಾಳ): ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ ಮತ್ತು ಶಿವಂ ದುಬೆ ಅವರ ಅರ್ಧಶತಕದ ಭರ್ಜರಿ ಆಟದ ನೆರವಿನಿಂದ ಹಳದಿ ಪಡೆ ಕೆಕೆಆರ್ ವಿರುದ್ಧ ನಿಗದಿತ ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿದೆ. ನಿತೀಶ್ ರಾಣಾ ಇಳಿಸಿದ ಏಳು ಜನ ಬೌಲರ್ಗಳು ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟರ್ಗಳ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. ಇದರಿಂದ ಕೆಕೆಆರ್ ಗೆಲುವಿಗೆ 236 ರನ್ಗಳ ಅಗತ್ಯವಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಚೆನ್ನೈ ಸೂಪರ್ ಕಿಂಗ್ಸ್ಗೆ ಉತ್ತಮ ಆರಂಭವನ್ನು ಎಂದಿನಂತೆ ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೆ ಒದಗಿಸಿದರು. ಈ ಜೋಡಿ 7 ಓವರ್ಗೆ 73 ರನ್ ಜೊತೆಯಾಟ ಆಡಿತು. 20 ಬಾಲ್ನಲ್ಲಿ 3 ಸಿಕ್ಸ್ ಮತ್ತು 2 ಬೌಂಡರಿಯಿಂದ 35 ರನ್ ಗಳಿಸಿ ರುತುರಾಜ್ ಔಟ್ ಆದರು.
ನಂತರ ಬಂದ ಅಜಿಂಕ್ಯಾ ರಹಾನೆ ಕಾನ್ವೆ ಅವರೊಂದಿಗೆ ಜೊತೆಯಾಟ ಮುಂದುವರೆಸಿದರು. ತಂಡದ ಮೊತ್ತ 109 ಆಗಿದ್ದಾಗ 40 ಬಾಲ್ನಲ್ಲಿ 3 ಸಿಕ್ಸ್ ಮತ್ತು 4 ಬೌಂಡರಿಯಿಂದ 56 ರನ್ ಗಳಿಸಿದ್ದ ಕಾನ್ವೆ ಔಟ್ ಆದರು. ಆರ್ಸಿಬಿ ವಿರುದ್ಧ ಘರ್ಜಿಸಿದ್ದ ದುಬೆ ಮತ್ತೆ ತಮ್ಮ ಲಯವನ್ನು ಮುಂದುವರೆಸಿದರು. ರಹಾನೆ ಒಡಗೂಡಿ ತಂಡಕ್ಕೆ 80+ ರನ್ನ ಜೊತೆಯಾಟ ಮಾಡಿದರು.
-
.@ajinkyarahane88 hammered 71* off just 29 deliveries including 5 stunning sixes 💥
— IndianPremierLeague (@IPL) April 23, 2023 " class="align-text-top noRightClick twitterSection" data="
He becomes our 🔝 perfomer in the first innings of the #KKRvCSK clash in the #TATAIPL 👏🏻👏🏻
A look at his batting summary 🔽 pic.twitter.com/KV1hHturGI
">.@ajinkyarahane88 hammered 71* off just 29 deliveries including 5 stunning sixes 💥
— IndianPremierLeague (@IPL) April 23, 2023
He becomes our 🔝 perfomer in the first innings of the #KKRvCSK clash in the #TATAIPL 👏🏻👏🏻
A look at his batting summary 🔽 pic.twitter.com/KV1hHturGI.@ajinkyarahane88 hammered 71* off just 29 deliveries including 5 stunning sixes 💥
— IndianPremierLeague (@IPL) April 23, 2023
He becomes our 🔝 perfomer in the first innings of the #KKRvCSK clash in the #TATAIPL 👏🏻👏🏻
A look at his batting summary 🔽 pic.twitter.com/KV1hHturGI
ವೇಗದ ಅರ್ಧಶತಕ ಗಳಿಸಿದ ದುಬೆ: ಶಿವಂ ದುಬೆ ಕೇವಲ 20 ಬಾಲ್ನಲ್ಲಿ 50 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 5 ಸಿಕ್ಸ್ ಮತ್ತು 2 ಬೌಂಡರಿ ಇತ್ತು. ಚೆನ್ನೈ ಪರ ಅತಿ ವೇಗದ ಅರ್ಧಶತಕ ದಾಖಲಿಸಿದ 6ನೇ ಬ್ಯಾಟರ್ ಆದರು. ಪಟ್ಟಿಯಲ್ಲಿ ಧೋನಿ, ಅಂಬಟಿ ರಾಯುಡು ಜೊತೆ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ರಹಾನೆ ಅರ್ಧಶತಕ: ಉತ್ತಮ ಲಯದಲ್ಲಿ ಕಂಡು ಬರುತ್ತಿರುವ ರಹಾನೆ ಚೆನ್ನೈಗೆ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗುತ್ತಿದ್ದಾರೆ. ಸತತ ಬ್ಯಾಟಿಂಗ್ನಲ್ಲಿ ರನ್ ಗಳಿಸುತ್ತಿರುವ ಅವರು ಐಪಿಎಲ್ನ 30ನೇ ಅರ್ಧಶತಕವನ್ನು ದಾಖಲಿಸಿ ಅಜೇಯರಾಗಿ ಉಳಿದರು. 29 ಬಾಲ್ಗಳನ್ನು ಆಡಿದ ರಹಾನೆ 5 ಸಿಕ್ಸ್ ಮತ್ತು 6 ಬೌಂಡರಿಯಿಂದ 71 ರನ್ ಗಳಿಸಿದರು.
ದುಬೆ ವಿಕೆಟ್ ನಂತರ ಬಂದ ರವೀಂದ್ರ ಜಡೇಜ 8 ಬಾಲ್ನಲ್ಲಿ 18 ರನ್ ಗಳಿಸಿ ಕೊನೆಯ ಮೂರು ಬಾಲ್ ಬಾಕಿ ಇರುವಂತೆ ವಿಕೆಟ್ ಕೊಟ್ಟರು. ನಂತರ ಬಂದ ಧೋನಿ 3 ಬಾಲ್ಗೆ 2* ರನ್ ಗಳಿಸಿದರು. ಕೆಕೆಆರ್ ಪರ ಕುಲ್ವಂತ್ ಖೆಜ್ರೋಲಿಯಾ ಎರಡು ವಿಕೆಟ್ ಮತ್ತು ಸುಯಶ್ ಶರ್ಮಾ, ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಕಬಳಿಸಿದರು.
ಟಾಸ್: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಎದುರಾಗುತ್ತಿವೆ. ಸತತಮು ಮೂರು ಸೋಲುಗಳನ್ನು ಕಂಡಿರು ನಿತೀಶ್ ರಾಣಾ ಪಡೆ ನಾಲ್ಕನೇ ಸೋಲಿನಿಂದ ತವರಿನಲ್ಲಿ ತಪ್ಪಿಸಿಕೊಳ್ಳಲು ಹವಣಿಸುತ್ತಿದೆ. ಟಾಸ್ ಗೆದ್ದ ಕೆಕೆಆರ್ ನಾಯಕ ನಿತೀಶ್ ರಾಣಾ ಮೊದಲು ಬೌಲಿಂಗ್ ಮಾಡುವುದಾಗಿ ಹೇಳಿದ್ದಾರೆ.
ತಂಡಗಳು ಇಂತಿದೆ..: ಚೆನ್ನೈ ಸೂಪರ್ ಕಿಂಗ್ಸ್: ಎನ್ ಜಗದೀಶನ್ (ವಿಕೆಟ್ ಕೀಪರ್), ಜೇಸನ್ ರಾಯ್, ನಿತೀಶ್ ರಾಣಾ(ನಾಯಕ), ಆಂಡ್ರೆ ರಸೆಲ್, ರಿಂಕು ಸಿಂಗ್, ಸುನಿಲ್ ನರೈನ್, ಡೇವಿಡ್ ವೈಸ್, ಕುಲ್ವಂತ್ ಖೆಜ್ರೋಲಿಯಾ, ಸುಯಶ್ ಶರ್ಮಾ, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಕೋಲ್ಕತ್ತಾ ನೈಟ್ ರೈಡರ್ಸ್: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ(ವಿಕೆಟ್ ಕೀಪರ್/ನಾಯಕ), ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
ಇದನ್ನೂ ಓದಿ: ನಿನ್ನೆ ಅರ್ಷದೀಪ್ ಮುರಿದ ವಿಕೆಟ್ನ ಬೆಲೆ ಎಷ್ಟು ನಿಮಗೆ ಗೊತ್ತೇ?