ಬೆಂಗಳೂರು: ನಿನ್ನೆ ಆರ್ಸಿಬಿ ಮತ್ತು ಲಕ್ನೋ ನಡುವಣ ಪಂದ್ಯದಲ್ಲಿ ಕೊನೆಯ ಓವರ್ ರೋಚಕತೆಯಿಂದ ಕೂಡಿತ್ತು. ಹಲವಾರು ವಿಚಿತ್ರ ಕ್ಷಣಗಳಿಗೂ ಸಾಕ್ಷಿಯಾಯಿತು. ಕೊನೆಯ 6 ಬಾಲ್ಗೆ 5 ರನ್ನ ಅಗತ್ಯ ಸೂಪರ್ ಕಿಂಗ್ಸ್ಗೆ ಇತ್ತು. ಇದನ್ನು ರಕ್ಷಿಸಿಕೊಳ್ಳವಲ್ಲಿ ಹರ್ಷಲ್ ಪಟೇಲ್ ಹರಸಾಹಸ ಪಟ್ಟರಾದರೂ ಗೆಲುವು ಲಕ್ನೋ ಪಾಲಾಯಿತು. ಲಕ್ನೋ ಸೂಪರ್ ಜೈಂಟ್ಸ್ ಅಭಿಮಾನಿಗಳಿಗೆ ಇದು ಅವಿಸ್ಮರಣೀಯ ಗೆಲುವಾದರೆ, ಆರ್ಸಿಬಿ ಪಾಲಿಗೆ ಅತ್ಯಂತ ದುಃಖದ ಸೋಲಾಗಿದೆ.
ಹರ್ಷಲ್ ಓವರ್ ಹೀಗಿತ್ತು..: ಮೊದಲ ಬಾಲ್ ಎದುರಿಸಿದ ಜಯದೇವ್ ಉನಾದ್ಕತ್ ಒಂದು ರನ್ಗಳಿಸಿದರು. ಎರಡನೇ ಬಾಲ್ನಲ್ಲಿ ಮಾರ್ಕ್ ವುಡ್ ಕ್ಲೀನ್ ಬೌಲ್ಡ್ ಆದರು. ನಂತರ ಬಂದ ರವಿ ಬಿಷ್ಣೋಯಿ ಮೂರು ಮತ್ತು ನಾಲ್ಕನೇ ಬಾಲ್ನಲ್ಲಿ ಕ್ರಮವಾಗಿ ಎರಡು ಮತ್ತು 1 ರನ್ಗಳಿಸಿದರು. ಪಂದ್ಯ ಟೈ ಆಗಿತ್ತು. ಲಕ್ನೋ ಗೆಲುವಿಗೆ 1 ರನ್ ಅಗತ್ಯ ಇತ್ತು. ಐದನೇ ಬಾಲ್ನಲ್ಲಿ ಜಯದೇವ್ ಡು ಪ್ಲೆಸಿಸ್ಗೆ ಕ್ಯಾಚ್ ನೀಡಿದರು. ಇದರಿಂದ 1 ಬಾಲ್ 1 ರನ್ ಮತ್ತು 1 ವಿಕೆಟ್ ಉಳಿದುಕೊಂಡಿತ್ತು.
-
Thought’s Harsha?
— Ben Stokes (@benstokes38) April 10, 2023 " class="align-text-top noRightClick twitterSection" data="
Umpires discretion.. 6 penalty runs if obviously trying to gain unfair advantage by leaving crease early?
Would stop batters doing it without all the controversy https://t.co/xjK7Bnw0PS
">Thought’s Harsha?
— Ben Stokes (@benstokes38) April 10, 2023
Umpires discretion.. 6 penalty runs if obviously trying to gain unfair advantage by leaving crease early?
Would stop batters doing it without all the controversy https://t.co/xjK7Bnw0PSThought’s Harsha?
— Ben Stokes (@benstokes38) April 10, 2023
Umpires discretion.. 6 penalty runs if obviously trying to gain unfair advantage by leaving crease early?
Would stop batters doing it without all the controversy https://t.co/xjK7Bnw0PS
ಹರ್ಷಲ್ ಪಟೇಲ್ ಆರನೇ ಬಾಲ್ ಮಾಡಲು ಮುಂದಾದಾಗ ಆವೇಶ್ ಖಾನ್ ಕ್ರೀಸ್ ಬಿಟ್ಟಿದ್ದರು. ಮಂಕಡಿಂಗ್ ಮಾಡಲು ಪ್ರಯತ್ನಿಸಿ ವಿಫಲರಾದರು. ಆದರೆ ಮುಂದೆ ಹೋಗಿದ್ದ ಅವರು ಥ್ರೋ ಮೂಲಕ ಡೈರೆಕ್ಟ್ ಹಿಟ್ ಮಾಡಿದ್ದರು. ಆದರೆ ಅದನ್ನು ಅಂಪೈಯರ್ ಔಟ್ ನೀಡಲಿಲ್ಲ. ಮತ್ತೆ ಕೊನೆಯ ಬಾಲ್ನಲ್ಲಿ ಬೈಸ್ ಮುಖಾಂತರ ಒಂದು ರನ್ ಪಡೆದು ಲಕ್ನೋ ಗೆಲುವು ದಾಖಲಿಸಿತು.
ಡೈರೆಕ್ಟ್ ಹಿಟ್ ಏಕೆ ಔಟ್ ಅಲ್ಲ: ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC) ನ ಕಾನೂನು 38.3.1.2 ರ ಪ್ರಕಾರ, 'ಬೌಲರ್ ಸಾಮಾನ್ಯವಾಗಿ ಚೆಂಡನ್ನು ಹಾಕಲು ಬಂದಾಗ ತಕ್ಷಣವೇ ನಾನ್-ಸ್ಟ್ರೈಕರ್ ತುದಿಯಲ್ಲಿರುವ ಆಟಗಾರ ಕ್ರೀಸ್ ತೊರೆದಿದ್ದರೆ ಔಟ್ ಮಾಡಬಹುದು. ಆದರೆ ಒಮ್ಮೆ ಮಾತ್ರ ಬೌಲರ್ ಈ ಪ್ರಯತ್ನ ಮಾಡಿಬಹುದು. ಮುಂದೆ ಹೋಗಿ ಮತ್ತೆ ಪ್ರಯತ್ನ ಪಟ್ಟರೆ ಅದು ಅಮಾನ್ಯವಾಗುತ್ತದೆ'.
ನಿನ್ನೆ ಹರ್ಷಲ್ ಪಟೇಲ್ ಬಾಲ್ ಮಾಡಲು ಮಂಕಡಿಂಗ್ಗೆ ಪ್ರಯತ್ನಿಸಿದ್ದರು. ನಂತರ ಮುಂದೆ ಓಡಿದ ಅವರು ಹಿಂತಿರುಗಿ ಡೈರೆಕ್ಟ್ ಹಿಟ್ ಮಾಡಿದ್ದರಿಂದ ಅದು ಔಟ್ ಅಲ್ಲ ಎಂದು ಅಂಪೈರ್ ಹೇಳುತ್ತಾರೆ. ಇದರಿಂದ ಪಂದ್ಯ ಟೈ ಆಗಿ ಸೂಪರ್ ಓವರ್ ಆಗುವುದು ತಪ್ಪಿತು.
ಬೆನ್ ಸ್ಟೋಕ್ಸ್ ಹೊಸ ನಿಯಮಕ್ಕೆ ಒತ್ತಾಯ: ಬೆನ್ ಸ್ಟೋಕ್ಸ್ ಈ ಕ್ಷಣದ ಬಗ್ಗೆ ಟ್ವಿಟ್ ಮಾಡಿ "ಕ್ರೀಸ್ ಬೇಗನೆ ಬಿಟ್ಟು ರನ್ ಗಳಿಸಲು ಪ್ರಯತ್ನಿಸಿದರೆ ಬ್ಯಾಟಿಂಗ್ ತಂಡಕ್ಕೆ 6 ಫೆನಾಲ್ಟಿ ರನ್ ಹಾಕಬೇಕು. ಇದು ಅಂಪೈರ್ ವಿವೇಚನೆಗೆ ಬಿಟ್ಟಿದ್ದು" ಎಂದು ಬರೆದಿದ್ದಾರೆ. ಈ ಮೂಲಕ ಬೌಲರ್ ಸ್ನೇಹಿ ಕಾನೂನ ಕ್ರಿಕೆಟ್ನಲ್ಲಿ ಬರಬೇಕು ಎಂಬ ಅಭಿಪ್ರಾಯ ಬಂದಂತಿದೆ.
ಹರ್ಷ ಬೋಗ್ಲೆ ಅವರು "ಬಿಷ್ಣೋಯ್ ಬೇಗನೇ ಕ್ರೀಸ್ ತೊರೆಯುತ್ತಿದ್ದರು. ಅಲ್ಲಿರುವ ಯಾವುದೇ ಜನರು ನೀವು ನಾನ್ ಸ್ಟ್ರೈಕರ್ ಅನ್ನು ರನ್ ಔಟ್ ಮಾಡಬಾರದು ಎಂದು ಹೇಳುತ್ತಾರೆ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: IPL 2023 MI vs DC: ಮೊದಲ ಗೆಲುವಿಗಾಗಿ ಡೆಲ್ಲಿ vs ಮುಂಬೈ ಕಾಳಗ