ETV Bharat / sports

IPL​ 2023 ಫಸ್ಟ್​ ರೌಂಡ್: ಪಾಯಿಂಟ್​ ಟೇಬಲ್​ನಲ್ಲಿ ಆರ್​ಸಿಬಿ ಎಲ್ಲಿದೆ? ಹೀಗಿದೆ ಚಿತ್ರಣ

author img

By

Published : Apr 3, 2023, 11:02 AM IST

ಐಪಿಎಲ್​ನಲ್ಲಿ ಸದ್ಯ ಎಲ್ಲ ತಂಡಗಳೂ ತಲಾ ಒಂದೊಂದು ಪಂದ್ಯಗಳನ್ನಾಡಿವೆ. ಪಾಯಿಂಟ್​ ಟೇಬಲ್​ನಲ್ಲಿ ಯಾರು ಫಸ್ಟ್?​ ಯಾರು ಲಾಸ್ಟ್ ನೋಡೋಣ.

IPL 2023 first round ends  RCB which position in the points table  Royal Challengers Bangalore vs Mumbai Indians  Indian Premier League 2023  ಐಪಿಎಲ್​ 2023 ಫಸ್ಟ್​ ರೌಂಡ್  ಪಾಯಿಂಟ್​ ಟೇಬಲ್​ನಲ್ಲಿ ಆರ್​ಸಿಬಿ ಎಷ್ಟನೇ ಸ್ಥಾನ  ರೋಹಿತ್​ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್​ ತಂಡ  ಅಗ್ರಸ್ಥಾನದಲ್ಲಿದೆ ರಾಜಸ್ಥಾನ ರಾಯಲ್ಸ್  ಎರಡನೇ ಸ್ಥಾನದಲ್ಲಿ ಕೆಎಲ್​ ರಾಹುಲ್​ ಬಳಗ  ಮೂರನೇ ಸ್ಥಾನದಲ್ಲಿದೆ ಆರ್​ಸಿಬಿ  ನಾಲ್ಕನೇ ಸ್ಥಾನದಲ್ಲಿ ಗುಜರಾತ್  ಐದನೇ ಸ್ಥಾನದಲ್ಲಿ ಪಂಜಾಬ್​ ಕಿಂಗ್ಸ್  ಐಪಿಎಲ್​ ಪಾಯಿಂಟ್​ ಟೇಬಲ್ಸ್​ 2023
ಪಾಯಿಂಟ್​ ಟೇಬಲ್​ನಲ್ಲಿ ಆರ್​ಸಿಬಿ ಎಷ್ಟನೇ ಸ್ಥಾನದಲ್ಲಿದೆ

ಬೆಂಗಳೂರು: ಮುಂಬೈ ಇಂಡಿಯನ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿರುವುದು ತಿಳಿದಿರುವ ವಿಷಯ. ಈ ಪಂದ್ಯದ ಮೂಲಕ ಐಪಿಎಲ್​ನ​ ಎಲ್ಲ 10 ತಂಡಗಳು ತಲಾ ಒಂದು ಸುತ್ತು ಆಟ ಮುಗಿಸಿದಾಂತಾಯ್ತು. ಹೀಗಿದೆ ಸದ್ಯದ ಪಾಯಿಂಟ್‌ ಪಟ್ಟಿ..

ಅಗ್ರಸ್ಥಾನದಲ್ಲಿದೆ ರಾಜಸ್ಥಾನ ರಾಯಲ್ಸ್​ : ಐಪಿಎಲ್​ನ ನಾಲ್ಕನೇ ಪಂದ್ಯದಲ್ಲಿ ರಾಜಸ್ಥಾನ ತಂಡದ ಮಿಸ್ಟ್ರಿ ಸ್ಪಿನ್ನರ್​ ಯಜುವೇಂದ್ರ ಚಹಾಲ್​ ಅವರ ದಾಳಿಗೆ ನಲುಗಿದ ಸನ್ ​ರೈಸರ್ಸ್ 72 ರನ್‌ಗಳ​​ ಬೃಹತ್​ ಅಂತರದ ಸೋಲು ಕಂಡಿತು. ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಭುವನೇಶ್ವರ್​ ನಿರ್ಧಾರ ಮೊದಲ ಇನ್ನಿಂಗ್ಸ್​ನಲ್ಲೇ ವೈಫಲ್ಯ ಕಂಡಿತು. ರಾಜಸ್ಥಾನ ಬ್ಯಾಟರ್​ಗಳು ಹೈದರಾಬಾದ್​ ಬೌಲರ್​ಗಳನ್ನು ಮನಸೋಇಚ್ಛೆ ದಂಡಿಸಿ 204 ರನ್‌ಗಳ ಬೃಹತ್​ ಟಾರ್ಗೆಟ್​ ನೀಡಿದರು. ಈ ಗುರಿ ಬೆನ್ನತ್ತಿದ ಹೈದರಾಬಾದ್​ ಶೂನ್ಯ ರನ್‌ಗೆ ಎರಡು ವಿಕೆಟ್​ ಕಳೆದುಕೊಂಡಿತು. ಬಳಿಕ ಪಂದ್ಯದುದ್ದಕ್ಕೂ ಯಾರೂ ಪರಿಣಾಮಕಾರಿ ಬ್ಯಾಟಿಂಗ್​ ಮಾಡಲಿಲ್ಲ. ನಿಗದಿತ 20 ಓವರ್​ಗಳ​ ಅಂತ್ಯಕ್ಕೆ ಸನ್​ ರೈಸರ್ಸ್​ 8 ವಿಕೆಟ್​ಗಳನ್ನು ಕಳೆದುಕೊಂಡು 131 ರನ್​ ಗಳಿಸಲಷ್ಟೇ ಶಕ್ತವಾಯಿತು. 72 ರನ್​ ಗೆಲುವಿನ ಮೂಲಕ ರಾಜಸ್ಥಾನ ರಾಯಲ್ಸ್​ ತಂಡ ರನ್​ರೇಟ್​ನಲ್ಲಿ ಮೊದಲ ಸ್ಥಾನ ಪಡೆದಿದ್ದು, ಸನ್‌ರೈಸರ್ಸ್ ಹೈದರಾಬಾದ್​​ ತಂಡ ಕೊನೆಯ ಸ್ಥಾನಕ್ಕೆ ಕುಸಿಯಿತು.

2 ಸ್ಥಾನದಲ್ಲಿ ಕೆ.ಎಲ್.ರಾಹುಲ್​ ಬಳಗ: ದೆಹಲಿ ಕ್ಯಾಪಿಟಲ್ಸ್​ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಭರ್ಜರಿ ಗೆಲುವು ಸಾಧಿಸಿತು. 194 ರನ್​ಗಳ ಗುರಿ ಬೆನ್ನಟ್ಟಿದ ದೆಹಲಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ಕಳೆದುಕೊಂಡು 143 ರನ್​ ಗಳಿಸಿ ಸೋಲುಂಡಿತು. ಈ ಗೆಲುವಿನ ಮೂಲಕ ಲಕ್ನೋ ಪಾಯಿಂಟ್​ ಟೇಬಲ್ಸ್​ನಲ್ಲಿ ಎರಡನೇ ಸ್ಥಾನ ಅಲಂಕರಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್​ 9ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ವಿರಾಟ್​-ಡುಪ್ಲೆಸಿಸ್​ ಮಿಂಚು: ಮುಂಬೈ ವಿರುದ್ಧ 4ನೇ ಅತ್ಯಧಿಕ ಆರಂಭಿಕ ಜೊತೆಯಾಟದ ದಾಖಲೆ

3ನೇ ಸ್ಥಾನದಲ್ಲಿದೆ ಆರ್​ಸಿಬಿ: ಐಪಿಎಲ್​ 16ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಶುಭಾರಂಭ ಮಾಡಿದೆ. ಮುಂಬೈ ಇಂಡಿಯನ್ಸ್​ ವಿರುದ್ಧ ವಿರಾಟ್ ಕೊಹ್ಲಿ (82 ಅಜೇಯ) ಮತ್ತು ಫಾಫ್​ ಡು ಪ್ಲೆಸಿಸ್​(73) ಅಬ್ಬರದ ಬ್ಯಾಟಿಂಗ್​ ಮೂಲಕ ಆರ್​ಸಿಬಿ ಮೊದಲ ಪಂದ್ಯದಲ್ಲೇ ಜಯ ದಾಖಲಿಸಿದೆ. ರೋಹಿತ್​ ಶರ್ಮಾ ಪಡೆ ನೀಡಿದ್ದ ಸವಾಲಿನ 172 ರನ್​ಗಳ ಗುರಿಯನ್ನು ಆರ್​ಸಿಬಿ ಕೇವಲ 2 ವಿಕೆಟ್​ ಕಳೆದುಕೊಂಡು 3.4 ಓವರ್​ಗಳು ಬಾಕಿ ಇರುವಾಗಲೇ ಪೂರೈಸಿತು. ಈ ಮೂಲಕ ಆರ್​ಸಿಬಿ ಪಾಯಿಂಟ್​ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈ ತಂಡ 8ನೇ ಸ್ಥಾನಕ್ಕೆ ಕುಸಿತ ಕಂಡಿದೆ.

4ನೇ ಸ್ಥಾನದಲ್ಲಿ ಗುಜರಾತ್​: ಐಪಿಎಲ್ ಮೊದಲನೇ ಪಂದ್ಯದಲ್ಲೇ ಚೆನ್ನೈ ತಂಡದ ವಿರುದ್ಧ ಗೆದ್ದು ಗುಜರಾತ್ ಟೈಟನ್ಸ್ ಶುಭಾರಂಭ ಮಾಡಿತ್ತು. ಟಾಸ್ ಸೋತು ಮೊದಲು ಬ್ಯಾಂಟಿಂಗ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ತಂಡಕ್ಕೆ 179 ರನ್ ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ್ದ ಗುಜರಾತ್ ಟೈಟನ್ಸ್ 19.2 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿ ಗೆಲುವಿನ ಗುರಿ ತಲುಪಿತು. ಪಾಯಿಂಟ್​ ಟೇಬಲ್‌​ನಲ್ಲಿ ಗುಜರಾತ್​ ನಾಲ್ಕನೇ ಸ್ಥಾನದಲ್ಲಿದೆ. ಚೆನ್ನೈ 7ನೇ ಸ್ಥಾನದಲ್ಲಿದೆ.

5ನೇ ಸ್ಥಾನದಲ್ಲಿ ಪಂಜಾಬ್​ ಕಿಂಗ್ಸ್​: ಪಂಜಾಬ್​ ಕಿಂಗ್ಸ್​ ತವರು ನೆಲ ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿತ್ತು. ಕೆಕೆಆರ್​ ಗೆಲುವಿಗೆ 46 ರನ್​ ಬಾಕಿ ಇರುವಾಗ ಮಳೆ ಬಂದು ಪಂದ್ಯ ಸ್ಥಗಿತಗೊಂಡು, ಡಿಎಲ್​ಎಸ್‌​ ನಿಯಮದ ಪ್ರಕಾರ 7 ರನ್​ನಿಂದ ಪಂಜಾಬ್​ ಗೆಲುವು ಸಾಧಿಸಿತ್ತು. 16 ಓವರ್​ ವೇಳೆಗೆ ಕೆಕೆಆರ್​ 146ಕ್ಕೆ 7 ವಿಕೆಟ್​ ನಷ್ಟ ಅನುಭವಿಸಿತ್ತು. ಕೋಲ್ಕತ್ತಾ ನೈಟ್​ ರೈಡರ್ಸ್​ಗೆ ಕೊನೆಯ 4 ಓವರ್​ನಲ್ಲಿ 46 ರನ್​ ಬೇಕಿತ್ತು. ಆದ್ರೆ ಮೊದಲ ಇನ್ನಿಂಗ್ಸ್​ನಲ್ಲಿ ಪಂಜಾಬ್​ 16 ಓವರ್​ ವೇಳೆಗೆ 4 ವಿಕೆಟ್​ ನಷ್ಟದಿಂದ 153 ರನ್ ಗಳಿಸಿತ್ತು. ಕೆಕೆಆರ್​ 7 ರನ್​ ಹಿನ್ನಡೆಯಲ್ಲಿದ್ದ ಕಾರಣ ಡಿಎಲ್​ಎಸ್​ ನಿಮಯದ ಪ್ರಕಾರ ಸೋಲನುಭವಿಸಬೇಕಾಯಿತು. ಈ ಮೂಲಕ ಐದನೇ ಸ್ಥಾನದಲ್ಲಿ ಪಂಜಾಬ್​ ತಂಡ ಅಲಂಕರಿಸಿದ್ರೆ, ಕೆಕೆಆರ್​ ತಂಡ ಆರನೇ ಸ್ಥಾನದಲ್ಲಿದೆ.

ಐಪಿಎಲ್​ ಪಾಯಿಂಟ್​ ಟೇಬಲ್ಸ್​ 2023:

ತಂಡಗಳುಪಂದ್ಯಗಳುಗೆಲುವುಸೋಲುಟೈರದ್ದುಅಂಕನೆಟ್​ ರನ್​ ರೇಟ್​
ರಾಜಸ್ಥಾನ ರಾಯಲ್ಸ್​110002+3.600
ಲಕ್ನೋ ಸೂಪರ್​ ಜೈಂಟ್ಸ್110002+2.500
ರಾಯಲ್ ಚಾಲೆಂಜರ್ಸ್​ ಬೆಂಗಳೂರು110002+1.981
ಗುಜರಾತ್ ಟೈಟನ್ಸ್110002+0.514
ಪಂಜಾಬ್​ ಕಿಂಗ್ಸ್110002+0.425
ಕೋಲ್ಕತ್ತಾ ನೈಟ್​ ರೈಡರ್ಸ್101000-0.425
ಚೆನ್ನೈ ಸೂಪರ್ ಕಿಂಗ್ಸ್101000-0.514
ಮುಂಬೈ ಇಂಡಿಯನ್ಸ್​101000-1.981
ಡೆಲ್ಲಿ ಕ್ಯಾಪಿಟಲ್ಸ್101000-2.500
ಸನ್​ ರೈಸರ್ಸ್ ಹೈದರಾಬಾದ್101000-3.600

ETV Bharat Logo

Copyright © 2024 Ushodaya Enterprises Pvt. Ltd., All Rights Reserved.