ಚೆನ್ನೈ (ತಮಿಳುನಾಡು): ಭಾರತ ತಂಡದ ಹಾಲಿ ನಾಯಕ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದಾಳತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇಂದು ನಡೆಯಲಿರು ಐಪಿಎಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಕ್ಷೇತ್ರ ರಕ್ಷಣೆ ಮಾಡುವ ನಿರ್ಣಯ ಮಾಡಿದೆ.
ಮುಂಬೈ ಇಂಡಿಯನ್ಸ್ ತಂಡದಲ್ಲಿ ಎರಡು ಬದಲಾವಣೆಗಳಾಗಿದ್ದು, ಕುಮಾರ್ ಕಾರ್ತಿಕೇಯ ಅವರನ್ನು ಹೊರಗಿಟ್ಟು ಅವರ ಬದಲಿಯಾಗಿ ರಾಘವ್ ಗೋಯಲ್ ಅವರನ್ನು ಆಡಿಸಲಾಗುತ್ತಿದೆ. ರಾಘವ್ ಗೋಯಲ್ ಮುಂಬೈ ಇಂಡಿಯನ್ಸ್ ಪರ ಪಾದಾರ್ಪಣೆಯ ಪಂದ್ಯವನ್ನು ಆಡಲಿದ್ದಾರೆ. ಇನ್ನು ಅನಾರೋಗ್ಯಕ್ಕೆ ಒಳಗಾಗಿರುವ ತಿಲಕ್ ವರ್ಮಾ ಬದಲಾಗಿ ಟ್ರಿಸ್ಟಾನ್ ಸ್ಟಬ್ಸ್ ಕಣಕ್ಕಿಳಿಯಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.
-
🚨 Toss Update 🚨@ChennaiIPL win the toss and elect to field first against @mipaltan.
— IndianPremierLeague (@IPL) May 6, 2023 " class="align-text-top noRightClick twitterSection" data="
Follow the match ▶️ https://t.co/hpXamvn55U #TATAIPL | #CSKvMI pic.twitter.com/ucl96iF7p5
">🚨 Toss Update 🚨@ChennaiIPL win the toss and elect to field first against @mipaltan.
— IndianPremierLeague (@IPL) May 6, 2023
Follow the match ▶️ https://t.co/hpXamvn55U #TATAIPL | #CSKvMI pic.twitter.com/ucl96iF7p5🚨 Toss Update 🚨@ChennaiIPL win the toss and elect to field first against @mipaltan.
— IndianPremierLeague (@IPL) May 6, 2023
Follow the match ▶️ https://t.co/hpXamvn55U #TATAIPL | #CSKvMI pic.twitter.com/ucl96iF7p5
ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಯ 49ನೇ ಪಂದ್ಯ ಚೆನ್ನೈನ ತವರು ಮೈದಾನವಾದ ಚೆಪಾಕ್ನಲ್ಲಿ ನಡೆಯುತ್ತಿದೆ. ಈ ಆವೃತ್ತಿಯಲ್ಲಿ ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ವಿರುದ್ಧ ಆಡಿದ್ದಾಗ ಗೆಲುವು ದಾಖಲಿಸಿತ್ತು. ಮುಂಬೈ ಅದು ಲೀಗ್ನ ಎರಡನೇ ಸೋಲಾಗಿತ್ತು. ಇಂದು ಮುಂಬೈ ಇಂಡಿಯನ್ಸ್ ಸೋಲಿನ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ.
ಲೀಗ್ನಲ್ಲಿ ಏರಿಳಿತಗಳನ್ನು ಕಂಡಿರುವ ಮುಂಬೈ ಇಂಡಿಯನ್ಸ್ ಆಡಿದ 9 ಪಂದ್ಯಗಳಲ್ಲಿ 5 ಗೆದ್ದು 10 ಅಂಕದಿಂದ 6ನೇ ಸ್ಥಾನವನ್ನು ಅಂಕಪಟ್ಟಿಯಲ್ಲಿ ಹೊಂದಿದೆ. ಚೆನ್ನೈ ಉದ್ಘಾಟನಾ ಪಂದ್ಯದ ನಂತರ ಪುಟಿದೆದ್ದು ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದು, 10 ಪಂದ್ಯಗಳಲ್ಲಿ 5 ಗೆದ್ದು, 1 ರದ್ದಾಗಿ 11 ಅಂಕದಿಂದ 3ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಹತ್ತಿರಕ್ಕೆ ಹೋಗಲು ಎರಡೂ ತಂಡಗಳಿಗೆ ಇಂದಿನ ಗೆಲುವು ಅನಿವಾರ್ಯವಾಗಿದೆ.
ಕಳೆದ ಪಂದ್ಯ ಚೆನ್ನೈ ಮಳೆಯಿಂದಾಗಿ ಕಳೆದುಕೊಂಡಿತು. ಲಕ್ನೋ ವಿರುದ್ಧ 19.2 ಓವರ್ನ ಪಂದ್ಯವನ್ನು ಮಾತ್ರ ಆಡಲು ಸಾಧ್ಯವಾಯಿತು. ಮತ್ತೆ ಬಂದ ಮಳೆಯ ಕಾರಣ ಪಂದ್ಯವನ್ನು ರದ್ದು ಮಾಡಲಾಯಿತು. ಎರಡೂ ತಂಡಕ್ಕೆ ಒಂದೊಂದು ಅಂಕಗಳನ್ನು ಹಂಚಲಾಯಿತು.
ಮುಂಬೈ ಇಂಡಿಯನ್ಸ್ ತಂಡ ಕಳೆದ ಎರಡು ಪಂದ್ಯಗಳಲ್ಲಿ ಭರ್ಜರಿ ಫಾರ್ಮ್ನಲ್ಲಿದೆ. ರಾಜಸ್ಥಾನ ರಾಯಲ್ಸ್ ಎದುರು 213 ರನ್ನ ಗುರಿಯನ್ನು ಹಾಗೂ ಪಂಜಾಬ್ ವಿರುದ್ಧ 215 ರನ್ನ ಗುರಿಯನ್ನು ಬೆನ್ನಟ್ಟಿ ಗೆದ್ದಿದೆ. ಕ್ಯಾಮರಾನ್ ಗ್ರೀನ್, ಟಿಮ್ ಡೇವಿಡ್ ಮತ್ತು ಸೂರ್ಯ ಕುಮಾರ್ ಯಾದವ್ ಮುಂಬೈ ಪರ ಘರ್ಜಿಸುತ್ತಿದ್ದಾರೆ. ಇದರಿಂದ ಬೃಹತ್ ಮೊತ್ತದ ಗುರಿಯನ್ನು ಎರಡು ಬಾರಿ ತಂಡ ಸಲೀಸಾಗಿ 6 ವಿಕೆಟ್ಗಳ ಗೆಲುವನ್ನು ದಾಖಲಿಸಿದೆ.
ತಂಡಗಳು ಇಂತಿವೆ..: ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟ್ರಿಸ್ಟಾನ್ ಸ್ಟಬ್ಸ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಜೋಫ್ರಾ ಆರ್ಚರ್, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಅರ್ಷದ್ ಖಾನ್
ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ(ವಿಕೆಟ್ ಕೀಪರ್/ನಾಯಕ), ದೀಪಕ್ ಚಾಹರ್, ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
ಇದನ್ನೂ ಓದಿ: ಐಪಿಎಲ್ 2023: ಗಾಯಾಳು ರಾಹುಲ್ ಸ್ಥಾನಕ್ಕೆ ಕರುಣ್ ನಾಯರ್