ETV Bharat / sports

IPL 2022: ಆರ್​ಸಿಬಿಗೆ ನೈಟ್​ ರೈಡರ್ಸ್​ ಚಾಲೆಂಜ್​.. ಗೆಲುವಿಗಾಗಿ ಡುಪ್ಲೆಸಿಸ್ ಪಡೆ ಹೋರಾಟ

ಐಪಿಎಲ್​ನ ಇಂದಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡಗಳು ಎದುರಾಗಲಿವೆ.

IPL 2022: Royal Challengers Bangalore to face Kolkata Knight Riders
ಐಪಿಎಲ್​​ 2022
author img

By

Published : Mar 30, 2022, 9:48 AM IST

ಮುಂಬೈ: 2022ರ ಐಪಿಎಲ್​ನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲೇ ಸೋಲು ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಶ್ರೇಯಸ್​ ಅಯ್ಯರ್​ ನೇತೃತ್ವದ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಕಣಕ್ಕಿಳಿಯಲಿದೆ. ಡುಪ್ಲೆಸಿಸ್ ಮುಂದಾಳತ್ವದ ಆರ್​ಸಿಬಿ ಟೀಂ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.

ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್​ ವಿರುದ್ಧ 205 ರನ್‌ ಬಾರಿಸಿದ್ದರೂ ಬೌಲಿಂಗ್​ನಲ್ಲಿ ವೈಫಲ್ಯತೆ ಅನುಭವಿಸಿದ್ದ ಬೆಂಗಳೂರು 5 ವಿಕೆಟ್​ಗಳಿಂದ ಸೋಲು ಕಂಡಿತ್ತು. ತಂಡ ನೂತನ ನಾಯಕ ಫಾಫ್​ ಡುಪ್ಲೆಸಿಸ್​ ಆರಂಭಿಕ ಪಂದ್ಯದಲ್ಲೇ ಮಿಂಚಿನ ಬ್ಯಾಟಿಂಗ್​ ನಡೆಸಿ 57 ಎಸೆತಗಳಲ್ಲಿ 88 ರನ್​ ಬಾರಿಸಿದ್ದರು. ಆದರೆ, ಮೊಹಮದ್​ ಸಿರಾಜ್​ ಸೇರಿದಂತೆ ಪ್ರಮುಖ ಬೌಲರ್​ಗಳ ವೈಫಲ್ಯತೆಯಿಂದ ಸೋಲು ಎದುರಾಗಿತ್ತು.

ಇನ್ನೊಂದೆಡೆ, ಎದುರಾಳಿ ನೈಟ್​ ರೈಡರ್ಸ್​ ಯುವ ಮುಂದಾಳು ಶ್ರೇಯಸ್​ ಅಯ್ಯರ್ ನಾಯಕತ್ವದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಟೂರ್ನಿಯ ಆರಂಭಿಕ ಪಂದ್ಯದಲ್ಲಿನ ಗೆಲುವಿನ ವಿಶ್ವಾಸದಲ್ಲಿದೆ. ಉಮೇಶ್​ ಯಾದವ್​, ನರೈನ್ ಸೇರಿದಂತೆ ಬೌಲರ್​ಗಳ ಕರಾರುವಾಕ್ ದಾಳಿಯಿಂದ ಚೆನ್ನೈ ವಿರುದ್ಧ ಸುಲಭದ ಜಯ ಸಾಧಿಸಿತ್ತು.

ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಉತ್ತಮ ದಾಖಲೆ ಹೊಂದಿರುವ ಕೋಲ್ಕತ್ತಾ, ಇಲ್ಲಿ ಯಾವುದೇ ಸೋಲು ಕಂಡಿಲ್ಲ. ಅಲ್ಲದೆ, ಬೆಂಗಳೂರು ವಿರುದ್ಧ ನೈಟ್​ ರೈಡರ್ಸ್ ಕಳೆದ ಸೀಸನ್​ನಲ್ಲಿನ ಎಲಿಮಿನೇಟರ್ ಸೇರಿದಂತೆ ಈ ಹಿಂದೆ ಆಡಿದ​ ಮೂರು ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.

ಆರ್​ಸಿಬಿಗೆ ನಾಯಕ ಡುಪ್ಲೆಸಿಸ್​, ಮಾಜಿ ನಾಯಕ ವಿರಾಟ್​ ಕೊಹ್ಲಿ, ಯುವ ಆಟಗಾರ ಅನುಜ್​ ರಾವತ್​, ಅನುಭವಿ ದಿನೇಶ್​ ಕಾರ್ತಿಕ್​ ಅವರು ಬ್ಯಾಟಿಂಗ್​ ಬಲವಾಗಿದ್ದಾರೆ. ಜೋಶ್​ ಹೇಜಲ್​ವುಡ್​ ಅನುಪಸ್ಥಿತಿಯಲ್ಲಿ ಡೆವಿಡ್​ ವಿಲ್ಲಿ, ರುದರ್​ಫೋರ್ಡ್​, ಶಹಬಾಜ್ ಅಹ್ಮದ್​ ಅವರಿಂದ ತಕ್ಕ ಬೆಂಬಲ ಅಗತ್ಯವಿದೆ. ಅದರಲ್ಲೂ ಸಿರಾಜ್​, ಹರ್ಷಲ್​ ಬೌಲಿಂಗ್ ಜೋಡಿಯು​ ಚಮತ್ಕಾರ ತೋರಿದರೆ ಗೆಲುವಿನ ನಗೆ ಬೀರುವುದು ಕಷ್ಟವೇನಲ್ಲ.

ಕೋಲ್ಕತ್ತಾವು ದೀರ್ಘ ಬ್ಯಾಟಿಂಗ್​ ವಿಭಾಗ ಹೊಂದಿದ್ದು, ಆರಂಭಿಕರಾದ ಅಜಿಂಕ್ಯ ರಹಾನೆ ಮತ್ತು ವೆಂಕಟೇಶ್ ಅಯ್ಯರ್‌ ಸೇರಿದಂತೆ 8ನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸುನಿಲ್ ನರೈನ್​ವರೆಗೂ ಪಂದ್ಯ ಗೆಲ್ಲಿಸಬಹುದಾದ ಆಟಗಾರರಿದ್ದಾರೆ. ಉಮೇಶ್ ಯಾದವ್ ಅವರು ಪವರ್‌ಪ್ಲೇನಲ್ಲಿ ಪ್ರಮುಖ ಅಸ್ತ್ರವಾಗಿದ್ದಾರೆ. ಆದರೆ, ಸಿಎಸ್​ಕೆ ವಿರುದ್ಧ ಕೋಲ್ಕತ್ತಾ ಬೌಲರ್​ಗಳು ಕೊನೆಯ ಮೂರು ಓವರ್‌ಗಳಲ್ಲಿ 47 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿಯೆನಿಸಿದ್ದರು.

ಪಂದ್ಯದ ಫಲಿತಾಂಶದ ಮೇಲೆ ಇಬ್ಬನಿಯೂ ಕೂಡ ನಿರ್ಣಾಯಕ ಪರಿಣಾಮ ಬೀರಲಿದ್ದು, ಟಾಸ್ ಗೆಲ್ಲುವ ತಂಡವು ಚೇಸಿಂಗ್ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ಪಂದ್ಯದ ಸಮಯ: ಸಂಜೆ 7.30 ಗಂಟೆಗೆ

ಸ್ಥಳ: ಡಿವೈ ಪಾಟೀಲ್ ಮೈದಾನ, ಮುಂಬೈ

ಸಂಭಾವ್ಯ 11ರ ಬಳಗ: ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್ (ವಿ.ಕೀ), ಶೆರ್ಫೇನ್ ರುದರ್‌ಫೋರ್ಡ್, ವನಿಂದು ಹಸರಂಗಾ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಶಹಬಾಜ್ ಅಹ್ಮದ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್

ಕೋಲ್ಕತ್ತಾ ನೈಟ್​ ರೈಡರ್ಸ್: ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ನಿತೀಶ್ ರಾಣಾ, ಶ್ರೇಯಸ್ ಅಯ್ಯರ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ಆಂಡ್ರೆ ರಸೆಲ್, ಶೆಲ್ಡನ್ ಜಾಕ್ಸನ್ (ವಿ.ಕೀ), ಸುನಿಲ್ ನರೈನ್, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ

ಇದನ್ನೂ ಓದಿ: ನಾಯಕತ್ವ ಬಿಟ್ಟರೂ ತಗ್ಗದ ಹವಾ; ಬ್ರಾಂಡ್‌ ಮೌಲ್ಯದಲ್ಲಿ ಈಗಲೂ ವಿರಾಟ್‌ ಕೊಹ್ಲಿಯೇ 'ಕಿಂಗ್‌'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.