ETV Bharat / sports

ಉತ್ತಪ್ಪ-ಶಿವಂ ದುಬೆ ಸಿಡಿಲಬ್ಬರದ ಬ್ಯಾಟಿಂಗ್... ಆರ್​ಸಿಬಿಗೆ 217 ರನ್​ಗಳ ಬೃಹತ್​ ಗುರಿ ನೀಡಿದ ಸಿಎಸ್​ಕೆ

author img

By

Published : Apr 12, 2022, 7:11 PM IST

Updated : Apr 12, 2022, 9:31 PM IST

ಚೊಚ್ಚಲ ಗೆಲುವಿನ ಹುಡುಕಾಟದಲ್ಲಿರುವ ಸಿಎಸ್​​ಕೆ ತಂಡದ​ ರಾಬಿನ್​ ಉತ್ತಪ್ಪ ಮತ್ತು ಶಿವಂ ದುಬೆ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಆರ್​ಸಿಬಿ ವಿರುದ್ಧ 216ರನ್​ಗಳ ಬೃಹತ್​ ಮೊತ್ತ ದಾಖಲಿಸಿದೆ.

Chennai Super Kings vs Royal Challengers Bangalore
ರಾಯಲ್​ ಚಾಲೆಂಜರ್ಸ್ ಬೆಂಗಳೂರು vs ಚೆನ್ನೈ ಸೂಪರ್ ಕಿಂಗ್ಸ್

ಮುಂಬೈ: ಕನ್ನಡಿಗ ರಾಬಿನ್​ ಉತ್ತಪ್ಪ(88) ಮತ್ತು ಆಲ್​ರೌಂಡರ್​ ಶಿವಂ ದುಬೆ(95) ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಸಿಎಸ್​ಕೆ ತಂಡ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 217 ರನ್​​ಗಳ ಬೃಹತ್ ಮೊತ್ತದ ಗುರಿ ನೀಡಿದೆ.

15ನೇ ಆವೃತ್ತಿಯಲ್ಲಿ ಚೊಚ್ಚಲ ಗೆಲುವಿನ ಹುಡುಕಾಟದಲ್ಲಿದ್ದ ಚೆನ್ನೈ ತಂಡ ಟಾಸ್​ ಸೋತು ಬ್ಯಾಟಿಂಗ್ ಇಳಿಯಲ್ಪಟ್ಟಿತ್ತು. ಆದರೆ ಋತುರಾಜ್ ಗಾಯಕ್ವಾಡ್​(17) ಈ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಶೆಯನುವಿಸಿದರೆ, ಮೊಯೀನ್ ಅಲಿ(3) ರನ್​ಔಟ್​ ಆದರು.

36ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಸಿಎಸ್​ಕೆ ಅಲ್ಪಮೊತ್ತಕ್ಕೆ ಕುಸಿಯುವ ಬೀತಿ ಎದುರಿಸಿತ್ತು. ಆದರೆ 3ನೇ ವಿಕೆಟ್​ ಒಂದಾದ ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಆರ್​ಸಿಬಿ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಈ ಜೋಡಿ 165 ರನ್​ ಬೃಹತ್ ಕೊಡುಗೆ ನೀಡಿತು. 50 ಎಸೆತಗನ್ನು ಎದುರಿಸಿದ ಉತ್ತಪ್ಪ 4 ಬೌಂಡರಿ ಮತ್ತು 9 ಸಿಕ್ಸರ್​ಗಳ ಸಹಿತ 88 ರನ್​ಗಳಿಸಿದರೆ, ಶಿವಂ ದುಬೆ 45 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್​ಗಳ ಸಹಿತ ಅಜೇಯ 95 ರನ್​ಗಳಿಸಿದರು.

10 ಓವರ್​ಗಳಲ್ಲಿ 60 ರನ್​ಗಳಿಸಿದ್ದ ಸಿಎಸ್​ಕೆ ಈ ಜೋಡಿಯ ಅಬ್ಬರದಿಂದ ಮುಂದಿನ 10 ಓವರ್​ಗಳಲ್ಲಿ 156 ರನ್​ ಸೂರೆಗೈದಿತು. ಒಟ್ಟಾರೆ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 216 ರನ್​ಗಳಿಸಿತು.

ಆರ್​ಸಿಬಿ ಪರ ವನಿಂಡು ಹಸರಂಗ 35ಕ್ಕೆ 2 ಮತ್ತು ಹೇಜಲ್​ವುಡ್​ 33ಕ್ಕೆ 1 ವಿಕೆಟ್ ಪಡೆದರು. ಆಕಾಶ್ ದೀಪ್​ 58 ರನ್ ಬಿಟ್ಟುಕೊಟ್ಟು ದುಬಾರಿಯಾದರು.

ಮುಖಾಮುಖಿ : ಎರಡೂ ತಂಡಗಳು 28 ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ. 18-10ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುನ್ನಡೆ ಸಾಧಿಸಿದೆ. ಕಳೆದ ವರ್ಷ ಎರಡೂ ಪಂದ್ಯಗಳಲ್ಲಿ ಸಿಎಸ್​ಕೆ ಗೆಲುವು ಸಾಧಿಸಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೀ), ಶಹಬಾಜ್ ಅಹ್ಮದ್, ವನಿಂದು ಹಸರಂಗ, ಜೋಶ್ ಹ್ಯಾಜಲ್‌ವುಡ್, ಮೊಹಮ್ಮದ್ ಸಿರಾಜ್, ಸುಯಶ್ ಪ್ರಭುದೇಸಾಯಿ, ಆಕಾಶ್ ದೀಪ್

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ರಾಬಿನ್ ಉತ್ತಪ್ಪ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಅಂಬಟಿ ರಾಯುಡು, ಶಿವಂ ದುಬೆ, ರವೀಂದ್ರ ಜಡೇಜಾ (ನಾಯಕ), ಎಂಎಸ್ ಧೋನಿ (ವಿಕೀ), ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ಮಹೇಶ್ ತೀಕ್ಷಣ, ಮುಖೇಶ್ ಚೌಧರಿ

Last Updated : Apr 12, 2022, 9:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.