ETV Bharat / sports

IPL 2021: ಗೆಲುವಿಗಾಗಿ ​ರಾಯಲ್​ ಚಾಲೆಂಜರ್ಸ್-ಮುಂಬೈ ಇಂಡಿಯನ್ಸ್ ಕಾದಾಟ - royal challengers bangalore vs mumbai indians

ಇಂಡಿಯನ್​ ಪ್ರೀಮಿಯರ್ ಲೀಗ್​ ಟೂರ್ನಿಯಲ್ಲಿ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಇಂದು ನಡೆಯುವ 2ನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳು ಎದುರಾಗಲಿವೆ.

IPL 2021: ಗೆಲುವಿಗಾಗಿ ಮುಂಬೈ ಇಂಡಿಯನ್ಸ್​-ರಾಯಲ್​ ಚಾಲೆಂಜರ್ಸ್ ಕಾದಾಟ
ipl-2021-royal-challengers-bangalore-take-on-mumbai-indians-in-dubai
author img

By

Published : Sep 26, 2021, 11:05 AM IST

ದುಬೈ: 14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​ನ 39ನೇ ಪಂದ್ಯದಲ್ಲಿ ಇಂದು ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಹಿಂದಿನ ಎರಡೂ ಪಂದ್ಯಗಳನ್ನು ಸೋತಿರುವ ಉಭಯ ತಂಡಗಳು ಗೆಲುವಿನ ಲಯಕ್ಕೆ ಮರಳಲು ಸೆಣಸಾಡಲಿವೆ.

ಟೂರ್ನಿಯು ಸೆ. 19ರಂದು ಪುನಾರಂಭಗೊಂಡ ಬಳಿಕ ಎದುರಾದ ಎರಡು ಪಂದ್ಯಗಳಲ್ಲೂ ಕೂಡ ಆರ್​ಸಿಬಿ ಹಾಗೂ ಮುಂಬೈ ಸೋಲು ಅನುಭವಿಸಿವೆ. ಹೀಗಾಗಿ ಗೆಲುವಿನ ಖಾತೆ ತೆರೆಯಲು ತುದಿಗಾಲಿನಲ್ಲಿ ನಿಂತಿವೆ. ಪ್ಲೇ-ಆಫ್‌ ದೃಷ್ಟಿಯಿಂದ ಎರಡೂ ತಂಡಗಳಿಗೆ ಇದು ಪ್ರಮುಖ ಪಂದ್ಯ ಎನಿಸಿದೆ.

ಕಳೆದ ಪಂದ್ಯದಲ್ಲಿ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ ಹಾಗೂ ಯುವ ಆಟಗಾರ ದೇವದತ್ತ ಪಡಿಕ್ಕಲ್​​ ಅರ್ಧಶತಕ ಬಾರಿಸಿ ಶತಕದ ಆರಂಭಿಕ ಜೊತೆಯಾಟವಾಡಿದ್ದರು. ಆದರೆ ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ವೈಫಲ್ಯ ಅನುಭವಿಸಿದ ಬೆಂಗಳೂರು ಚೆನ್ನೈ ವಿರುದ್ಧ ದೊಡ್ಡ ಮೊತ್ತ ಗಳಿಸದೆ, ಬೌಲಿಂಗ್​ನಲ್ಲಿ ವಿಫಲಗೊಂಡು ಸೋಲನುಭವಿಸಿತ್ತು. ಇನ್ನೊಂದೆಡೆ ಮುಂಬರುವ ಟಿ-20 ವಿಶ್ವಕಪ್‌ ಟೂರ್ನಿಗೆ ಟೀಂ ಇಂಡಿಯಾಗೆ ಆಯ್ಕೆಯಾಗಿರುವ 6 ಆಟಗಾರರು ಮುಂಬೈ ತಂಡದಲ್ಲಿದ್ದರೂ ಕೂಡ ಉತ್ತಮ ಲಯದಲ್ಲಿಲ್ಲ. ಗಾಯದಿಂದ ಹೊರಗುಳಿದಿರುವ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಈ ಹಿಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಸತತ ಎರಡು ಸೋಲುಗಳು ರೋಹಿತ್​ ಪಡೆಗೆ ಹಿನ್ನಡೆ ಉಂಟು ಮಾಡಿದೆ.

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವು ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಹಾಗೂ ಎರಡನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ಎದುರು ಸೋತಿದೆ. ಹಾಗೆಯೇ ರಾಯಲ್​ ಚಾಲೆಂಜರ್ಸ್ ಕೂಡ ಮೊದಲ ಪಂದ್ಯದಲ್ಲಿ ಕೆಕೆಆರ್ ಎದುರು ಹೀನಾಯ ಸೋಲು ಕಂಡರೆ, ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಮುಖಭಂಗ ಅನುಭವಿಸಿದೆ.

ಅಂಕಪಟ್ಟಿಯಲ್ಲಿ ಆರ್​ಸಿಬಿ 9 ಪಂದ್ಯಗಳಿಂದ 5 ಗೆಲುವುಗಳೊಂದಿಗೆ 3ನೇ ಸ್ಥಾನ ಹಾಗೂ ಮುಂಬೈ 9 ಪಂದ್ಯಗಳಲ್ಲಿ 4 ಜಯದೊಂದಿಗೆ 5ನೇ ಸ್ಥಾನದಲ್ಲಿವೆ. ಅಂಕಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳಬೇಕಾದರೆ ಉಭಯ ತಂಡಗಳಿಗೆ ಮುಂಬರುವ ಪಂದ್ಯಗಳು ಪ್ರಾಮುಖ್ಯತೆ ಪಡೆದಿವೆ. ಐಪಿಎಲ್‌ ಟೂರ್ನಿಗಳಲ್ಲಿ ಇದುವರೆಗೆ ಎರಡೂ ತಂಡಗಳು ಒಟ್ಟು 28 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಮುಂಬೈ ಇಂಡಿಯನ್ಸ್‌ 17 ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು 11 ಬಾರಿ ಗೆಲುವು ಸಾಧಿಸಿದೆ.

ಸಂಭವನೀಯ 11ರ ಬಳಗ:

ಆರ್‌ಸಿಬಿ: ವಿರಾಟ್ ಕೊಹ್ಲಿ(ನಾಯಕ), ದೇವದತ್ ಪಡಿಕ್ಕಲ್‌, ಶ್ರೀಕರ್ ಭರತ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಎಬಿ ಡಿ ವಿಲಿಯ​ರ್ಸ್‌, ಟಿಮ್‌ ಡೇವಿಡ್‌, ವನಿಂದು ಹಸರಂಗ/ಕೈಲ್ ಜೇಮಿಸನ್, ಹರ್ಷಲ್‌ ಪಟೇಲ್, ಮೊಹಮ್ಮದ್ ಸಿರಾಜ್‌, ನವದೀಪ್‌ ಸೈನಿ, ಯುಜುವೇಂದ್ರ ಚಹಲ್‌.

ಮುಂಬೈ ಇಂಡಿಯನ್ಸ್‌: ರೋಹಿತ್‌ ಶರ್ಮಾ(ನಾಯಕ), ಕ್ವಿಂಟನ್‌ ಡಿ ಕಾಕ್‌, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್‌, ಕೀರನ್ ಪೊಲ್ಲಾರ್ಡ್‌, ಕೃನಾಲ್ ಪಾಂಡ್ಯ, ಹಾರ್ದಿಕ್‌ ಪಾಂಡ್ಯ, ರಾಹುಲ್ ಚಹರ್‌, ಆಡಂ ಮಿಲ್ನೆ, ಜಸ್‌ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್‌.

ಸ್ಥಳ: ದುಬೈ

ಪಂದ್ಯ ಆರಂಭದ ಸಮಯ: ಸಂಜೆ 7.30ಕ್ಕೆ

ಇದನ್ನೂ ಓದಿ: ಸಿಎಸ್​ಕೆ ಪ್ಲೇ ಆಫ್​ ತಲುಪಿದ ಮೇಲೆ ಧೋನಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡ್ಬೇಕು : ಗಂಭೀರ್ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.