ಮುಂಬೈ: ಮುಂಬರುವ ಪಂದ್ಯಗಳಲ್ಲಿ ತಮ್ಮ ತಂಡದ ಅಗ್ರ ನಾಲ್ಕು ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ದೊಡ್ಡ ಇನ್ನಿಂಗ್ಸ್ ಕಟ್ಟಬೇಕೆಂದು ರಾಜಸ್ಥಾನ್ ರಾಯಲ್ಸ್ ತಂಡದ ಕ್ರಿಕೆಟ್ ನಿರ್ದೇಶಕ ಕುಮಾರ್ ಸಂಗಕ್ಕರ ಹೇಳಿದ್ದಾರೆ.
ಈ ಪಂದ್ಯದ ಬಳಿಕ ಮಾತನಾಡಿರುವ ಕುಮಾರ್ ಸಂಗಕ್ಕರ " ಇಂದಿನ ಪಂದ್ಯದಲ್ಲಿ ನಮ್ಮ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸಮನ್ಗಳಿಂದ ಯಾವುದೆ ದೊಡ್ಡ ಇನ್ನಿಂಗ್ಸ್ ಬರಲಿಲ್ಲ. ನಾವು 6 -7 ಓವರ್ಗೆ ನಮ್ಮ ತಂಡ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ಇದು ನಮ್ಮ ಮೊದಲ ಹಿನ್ನಡೆಯಾಗಿತ್ತು. ಆದರೂ ಮದ್ಯಮ ಕ್ರಮಾಂಕದಲ್ಲಿ ಬ್ಯಾಟ್ಸಮನ್ಗಳ ಉತ್ತಮ ಕೊಡುಗೆಯಿಂದ ನಾವು 176 ರನ್ಗಳಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.
"ಆಟಗಾರರು ಸನ್ನಿವೇಶಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುವುದು ತುಂಬಾ ಮುಖ್ಯವಾಗಿದೆ ಹಾಗೂ ಬ್ಯಾಟ್ಸ್‌ಮನ್‌ಗಳು ಫೀಲ್ಡ್ ಸೆಟ್ ನೋಡಿಕೊಂಡು ತಮ್ಮ ಸಾಮರ್ಥ್ಯ ಹಾಗೂ ಕೌಶಲದ ಆಧಾರದ ಮೇಲೆ ಆಡಬೇಕಾಗುತ್ತದೆ. ನೀವು ಮಧ್ಯಮ ಕ್ರಮಾಂಕದಲ್ಲಿ ಆಡಲು ಹೊರಟರೆ, ಫೀಲ್ಡರ್‌ಗಳು ಚದುರಿರುತ್ತಾರೆ ಹಾಗೂ ಅಪಾಯದ ಹೊಡೆತಗಳನ್ನು ಹೊಡೆಯುವುದರ ಬದಲು ಬಹಳ ಎಚ್ಚರಿಕೆಯಿಂದ ಶಾಟ್ ಮಾಡಬೇಕಾಗುತ್ತದೆ," ಎಂದು ಹೇಳಿದರು.
" ಪವರ್ ಪ್ಲೇನಲ್ಲಿ ಅಚ್ಚುಕಟ್ಟಾಗಿ ಬ್ಯಾಟಿಂಗ್ ಮಾಡುವುದು ಬಹಳ ಮುಖ್ಯ. ಈ ಸಮಯದಲ್ಲಿ ಉತ್ತಮ ಜೊತೆಯಾಟ ಬರಬೇಕು. ಅಗ್ರ ನಾಲ್ಕರಲ್ಲಿ ಒಬ್ಬರು ಅಥವಾ ಇಬ್ಬರು ದೊಡ್ಡ ಸ್ಕೋರ್ ಗಳಿಸಿದರೆ ತಂಡಕ್ಕೆ ಉತ್ತಮ ಕೊಡುಗೆ ನೀಡಿದಂತಾಗುತ್ತದೆ. ಆದರೆ, ಇಂದು ನಾವು ಅದನ್ನು ನಿರ್ವಹಿಸಲಿಲ್ಲ. ಆದರೆ, ಕೆಳ ಕ್ರಮಾಂಕದಲ್ಲಿ ನಮ್ಮ ತಂಡದ ಆಟಗಾರರು ಉತ್ತಮವಾಗಿ ಆಡಿದರು. ಮಧ್ಯಮ ಕ್ರಮಾಂಕ ನೋಡಲು ಸಾಕಷ್ಟು ಪ್ರಭಾವಶಾಲಿಯಾಗಿದೆ "ಎಂದು ಸಂಗಕ್ಕರ ಹೇಳಿದರು.
"ಶಿವಂ ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಕಳೆದ ಮೂರು ಪಂದ್ಯಗಳಿಗಿಂತ ಉತ್ತಮ ಪ್ರದರ್ಶನ ತೋರಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವನು ಸ್ಪಿನ್ ಬೌಲರ್ಗಳಿಗೆ ಉತ್ತಮವಾಗಿ ಆಡುತ್ತಾನೆ. ಅದು ಅವನ ನಿಜವಾದ ಶಕ್ತಿ" ಎಂದು ಅವರು ಹೇಳಿದರು.