ETV Bharat / sports

ಗಾಯಗೊಂಡ ಆರ್ಚರ್ ಐಪಿಎಲ್​ನಿಂದ ಹೊರಕ್ಕೆ: ಮುಂಬೈ ಸೇರಿಕೊಂಡ ಕ್ರಿಸ್ ಜೋರ್ಡನ್

ಮುಂಬೈ ಇಂಡಿಯನ್ಸ್​​ನ ಸ್ಟಾರ್​ ಬೌಲರ್​ ಜೋಫ್ರಾ ಆರ್ಚರ್​ ಗಾಯಕ್ಕೆ ತುತ್ತಾಗಿರುವುದರಿಂದ ಅವರ ಬಲಿಯಾಗಿ ಕ್ರಿಸ್ ಜೋರ್ಡಾನ್ ಅವರನ್ನು ಆಯ್ಕೆ ಮಾಡಲಾಗಿದೆ.

author img

By

Published : May 9, 2023, 4:41 PM IST

Etv Bharat
Etv Bharat

ಈ ಬಾರಿಯ ಐಪಿಎಲ್​ಗೆ ಗಾಯದ ಸಮಸ್ಯೆ ಜೋರಾಗಿಯೇ ಕಾಡಿದೆ. ಆವೃತ್ತಿಯ ಆರಂಭದಲ್ಲಿ 13 ಪ್ರಮುಖ ಆಟಗಾರರು ಹೊರಗುಳಿದರು. ಇದರ ನಂತರ ಬೆನ್ನು ಬೆನ್ನು ಗಾಯದ ಸಮಸ್ಯೆ ತಂಡಗಳನ್ನು ಕಾಡಿದೆ. ಮೊದಲ ಪಂದ್ಯದಲ್ಲೆ ಕೇನ್​​​ ವಿಲಿಯಮ್ಸನ್ ಗಾಯಕ್ಕೆ ತುತ್ತಾಗಿದ್ದರಿಂದ ಏಕದಿನ ವಿಶ್ವಕಪ್ ತಪ್ಪಿಸಿಕೊಳ್ಳಲಿದ್ದಾರೆ. ಈಗ ಮುಂಬಯಿ ಇಂಡಿಯನ್ಸ್​​ನ ಸ್ಟಾರ್​ ಬೌಲರ್​ ಜೋಫ್ರಾ ಆರ್ಚರ್​ ಸಹ ಗಾಯಕ್ಕೆ ತುತ್ತಾಗಿದ್ದು, ಅವರ ಬದಲಿಯಾಗಿ ಇಂಗ್ಲೆಂಡ್​ನ ಮತ್ತೊಬ್ಬ ಆಟಗಾರ ಕ್ರಿಸ್ ಜೋರ್ಡನ್ ಅವರನ್ನು ಮುಂಬೈ ಆಯ್ಕೆ ಮಾಡಿಕೊಂಡಿದೆ.

  • 𝗖𝗵𝗿𝗶𝘀 𝗝𝗼𝗿𝗱𝗮𝗻 𝗷𝗼𝗶𝗻𝘀 𝗠𝘂𝗺𝗯𝗮𝗶 𝗜𝗻𝗱𝗶𝗮𝗻𝘀

    Chris Jordan will join the MI squad for the rest of the season.

    Chris replaces Jofra Archer, whose recovery and fitness continues to be monitored by ECB. Jofra will return home to focus on his rehabilitation.… pic.twitter.com/wMPBdmhDRf

    — Mumbai Indians (@mipaltan) May 9, 2023 " class="align-text-top noRightClick twitterSection" data=" ">

ಜೋಫ್ರಾ ಆರ್ಚರ್ ತನ್ನ ಶಸ್ತ್ರಚಿಕಿತ್ಸೆ ನಂತರ ಪುನರ್ವಸತಿಗಾಗಿ ತನ್ನ ದೇಶಕ್ಕೆ ಮರಳಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಕ್ರಿಸ್ ಜೋರ್ಡನ್ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಮುಂಬೈ ಇಂಡಿಯನ್ಸ್ ಸೇರಲು ಆಫರ್ ಬಂದಿದೆ ಎಂದು ಹೇಳಿಕೆ ನೀಡಿದೆ. ಮುಂದಿನ ಪಂದ್ಯಗಳಿಗಾಗಿ ಅವರು ಶೀಘ್ರದಲ್ಲೇ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇದರಿಂದ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಬಲಗೊಳ್ಳಲಿದೆ. ಮುಂಬೈ ಇಂಡಿಯನ್ಸ್ ತಂಡವು ಅವರ ಬೌಲಿಂಗ್‌ನಿಂದ ನಿರಂತರವಾಗಿ ತೊಂದರೆಗೊಳಗಾಗುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಹಲವು ಆಟಗಾರರು ತಂಡದ ಭಾಗವಾಗಲು ಸಾಧ್ಯವಾಗಿಲ್ಲ.

ಕ್ರಿಸ್ ಜೋರ್ಡನ್ 2016 ರಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಇಂಡಿಯನ್​​ ಪ್ರೀಮಿಯರ್​ ಲೀಗ್​ನಲ್ಲಿ ಆಡಿದ್ದರು. ಐಪಿಎಲ್‌ನಲ್ಲಿ ಇದುವರೆಗೆ ಒಟ್ಟು 28 ಪಂದ್ಯಗಳನ್ನು ಆಡಿರುವ ಅವರು 27 ವಿಕೆಟ್‌ಗಳನ್ನು ಪಡೆದಿದ್ದಾರೆ. ಅದೇ ವೇಳೆ, ಜೋಫ್ರಾ ಆರ್ಚರ್ ಕೂಡ ಟಿ20ಯಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಕ್ರಿಸ್ ಜೋರ್ಡನ್ ಇಂಗ್ಲೆಂಡ್ ತಂಡದ ಪರ ಇದುವರೆಗೆ ಒಟ್ಟು 87 ಟಿ-20 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 96 ವಿಕೆಟ್ ಪಡೆದಿದ್ದಾರೆ.

ಜೋಫ್ರಾ ಆರ್ಚರ್​ ಗಾಯಕ್ಕೆ ಈ ಮುಂಚೆ ತುತ್ತಾಗಿ ಸುಮಾರು ಒಂದು ವರ್ಷಗಳ ಕಾಲ ಇಂಗ್ಲೆಂಡ್​ನ ಅಂತಾರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದರು. ಅವರು ಮುಂಬೈ ಇಂಡಿಯನ್ಸ್​ ಅರಬ್​ನಲ್ಲಿ ಆಡಿದ ಟಿ20 ಲೀಗ್​ನಲ್ಲಿ ಜೋಫ್ರಾ ಆರ್ಚರ್​ ಮತ್ತೆ ಆಟಕ್ಕೆ ಮರಳಿದ್ದರು. ಆದರೆ ಅವರ ನೈಜ ಬೌಲಿಂಗ್​ನಿಂದ ದೂರ ಉಳಿದಿದ್ದರು. ವಿಶ್ವಕಪ್​ ಮತ್ತು ಆಶಸ್​ ಸರಣಿ ಹಿನ್ನೆಲೆ ಮತ್ತೆ ಗಾಯಕ್ಕೆ ಒಳಗಾಗದಂತೆ ಎಚ್ಚರಿಕೆಯಿಂದ ನಿಧಾನ ಗತಿಯಲ್ಲಿ ಬೌಲಿಂಗ್​ ಮಾಡುತ್ತಿದ್ದರು. ಈ ಆವೃತ್ತಿಯ ಐಪಿಎಲ್​ನಲ್ಲೂ ಸಂಪೂರ್ಣ ಚೇತರಿಸಿಕೊಂಡು ಆರ್ಚರ್​ ಕಣಕ್ಕಿಳಿದಂತೆ ಇರಲಿಲ್ಲ.

ವಿಲ್ಲಿಗೆ ಗಾಯ ಕೇದಾರ್​ ಆರ್​ಸಿಬಿಗೆ: ಇತ್ತೀಚೆಗಷ್ಟೇ ಆರ್​ಸಿಬಿಯ ವಿದೇಶಿ ಆಲ್​ರೌಂಡರ್​ ಡೇವಿಡ್​ ವಿಲ್ಲಿ ಗಾಯಕ್ಕೆ ತುತ್ತಾಗಿ ತವರಿಗೆ ಮರಳಿದ್ದಾರೆ. ಅವರ ಬದಲಿಯಾಗಿ ಭಾರತೀಯ ಆಟಗಾರ ಅನುಭವಿ ಕೇದಾರ್ ಜಾದವ್​ ಅವರನ್ನು ಆರ್​ಸಿಬಿ ತಂಡಕ್ಕೆ ಸೇರಿಸಿಕೊಂಡಿದೆ.

ಕೆಎಲ್​ ರಾಹುಲ್​, ಉನಾದ್ಕತ್​, ಉಮೇಶ್​ ಯಾದವ್​ ಇಂಜುರಿ:​ ಆರ್​ಸಿಬಿ ವಿರುದ್ಧದ ಮೇ 1 ತಾರೀಕಿನ ಪಂದ್ಯಕ್ಕೂ ಮುನ್ನ ನೆಟ್ಸ್​ನಲ್ಲಿ ಜಯದೇವ್​ ಉನಾದ್ಕತ್​ ಗಾಯಕ್ಕೆ ತುತ್ತಾದರು. ಮ್ಯಾಚ್​ ಆಡುವಾಗ ಕೆಎಲ್ ರಾಹುಲ್​ ಬಿದ್ದು ಗಾಯಮಾಡಿಕೊಂಡರು. ಉಮೇಶ್​ ಯಾದವ್​ ಸಹ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಒತ್ತಡ ಮುರಿತಕ್ಕೆ ಒಳಗಾಗಿದ್ದರು. ಕೆಎಲ್​ ರಾಹುಲ್​ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ್ನು ತಪ್ಪಿಸಿಕೊಂಡಿದ್ದಾರೆ. ಉನಾದ್ಕತ್​ ಮತ್ತು ಉಮೇಶ್​ ಯಾದವ್​ ಅವರ ಬಗ್ಗೆ ಬಿಸಿಸಿಐ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಪರ್ಯಾಯ ಆಟಗಾರನಾಗಿ ಮುಖೇಶ್​ ಅವರನ್ನು ಪ್ರಕಟಿಸಿದೆ.

ಇದನ್ನೂ ಓದಿ: ವಿಶ್ವ ಟೆಸ್ಟ್​​ ಚಾಂಪಿಯನ್​ ಶಿಪ್​: ಐಪಿಎಲ್​ ಫಾರ್ಮ್​ನಿಂದಾಗಿ ಮತ್ತೆ ಟೆಸ್ಟ್​ನಲ್ಲಿ ಸ್ಥಾನ ಪಡೆದ ಸೂರ್ಯ ಕುಮಾರ್​ ಯಾದವ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.