ಪುಣೆ: ತಂಡದ ನಾಯಕತ್ವದ ಒತ್ತಡವು ರವೀಂದ್ರ ಜಡೇಜಾ ಅವರ ಆಟದ ಮೇಲೆ ಪರಿಣಾಮ ಬೀರಿರುವುದಾಗಿ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ. ಹೀಗಾಗಿ ಜಡೇಜಾ ಈ ಅವತರಣಿಕೆಯ ಐಪಿಎಲ್‌ನಲ್ಲಿ ಉತ್ತಮ ಆಲ್‌ರೌಂಡರ್ ಪ್ರದರ್ಶನವು ಮಂಕಾಗಿರುವುದಾಗಿ ಧೋನಿ ಹೇಳಿದ್ದಾರೆ. ಧೋನಿಯು ತಂಡದ ನಾಯಕತ್ವದಿಂದ ಹೊರಗುಳಿಯಲು ನಿರ್ಧರಿಸಿದ ನಂತರ ಜಡೇಜಾ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಗಿತ್ತು. ಆದರೆ ನಾಯಕತ್ವವನ್ನು ನಿಭಾಯಿಸಲು ಜಡೇಜಾ ವಿಫಲರಾಗಿದ್ದರಿಂದ ಮತ್ತೆ ಧೋನಿಗೆ ಅವಕಾಶ ನೀಡಲಾಗಿದೆ.
ಸತತ ಸೋಲುಗಳಿಂದ ಹಿನ್ನಡೆ ಅನುಭವಿಸಿದ್ದ ಚೆನ್ನೈ, ಧೋನಿ ನಾಯಕತ್ವದಲ್ಲಿ ಮತ್ತೆ ಗೆಲುವಿನ ಲಯ ಕಂಡುಕೊಂಡಂತಿದೆ. ನಿನ್ನೆ ನಡೆದ ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಚೆನ್ನೈ 13 ರನ್‌ಗಳ ಗೆಲುವು ಸಾಧಿಸಿದೆ. ಮೊದಲೆರಡು ಪಂದ್ಯಗಳಲ್ಲಿ ಜಡೇಜಾಗೆ ಮಾರ್ಗದರ್ಶನ ನೀಡಿದ ಧೋನಿ ಬಳಿಕದ ಪಂದ್ಯಾಟದಲ್ಲಿ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಅನುವು ಮಾಡಿದ್ದರು. ಒಮ್ಮೆ ತಂಡದ ನಾಯಕತ್ವ ವಹಿಸಿದ ನಂತರ ವಿವಿಧ ರೀತಿಯ ಒತ್ತಡಗಳು ನಮ್ಮನ್ನು ಅರಸಿ ಬರುತ್ತವೆ. ಜಡೇಜಾರಿಗೆ ನಾಯಕತ್ವ ವಹಿಸಿದ್ದರಿಂದ ಒತ್ತಡ ಹೆಚ್ಚಾಗಿ ಅವರ ಆಟದ ಪ್ರದರ್ಶನದ ಮೇಲೆ ಪರಿಣಾಮ ಬೀರಿರುವುದಾಗಿ ಧೋನಿ ಹೇಳಿದರು.
ಸದ್ಯ ನಾಯಕತ್ವದ ಒತ್ತಡದಿಂದ ಹೊರಬಂದಿರುವ ಜಡೇಜಾ ಉತ್ತಮ ಪ್ರದರ್ಶನ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ. ಮೈದಾನದಲ್ಲಿ ನೀವು ಒಂದು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಅದನ್ನು ಸಮರ್ಥವಾಗಿ ನಿಭಾಯಿಸುವುದು ತಂಡದ ಉತ್ತಮ ಪ್ರದರ್ಶನಕ್ಕೆ ಸಹಕಾರಿಯಾಗುತ್ತದೆ ಎಂದು ಧೋನಿ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಗೆಲುವಿಗೆ ಮೊಹ್ಸಿನ್ ಖಾನ್ ಭಂಗ.. ಕ್ಯಾಪಿಟಲ್ಸ್ ವಿರುದ್ಧ ಸೂಪರ್ ಜೈಂಟ್ಸ್ಗೆ 6 ರನ್ ಜಯ