ETV Bharat / sports

TATA IPL 2023: ಶಿಖರ್​ ಕಾಲ್ಗುಣಕ್ಕೆ ಚಾಂಪಿಯನ್​ ಆಗುತ್ತಾ ಪಂಜಾಬ್​ ಕಿಂಗ್ಸ್​?

author img

By

Published : Mar 28, 2023, 8:51 PM IST

ಒಮ್ಮೆ ಚಾಂಪಿಯನ್​ ಹೊಸ್ತಿಲ ವರೆಗೆ ಹೋಗಿ ಎಡವಿರುವ ಪಂಜಾಬ್​ ಕಿಂಗ್ಸ್ ಪಡೆ ಈ ಬಾರಿ ಧವನ್​ ನಾಯಕತ್ವದಲ್ಲಿ ಚೊಚ್ಚಲ ಕಪ್​ ಗೆಲ್ಲುವ ಹಂಬಲದಲ್ಲಿದೆ.

IPL 2023 Punjab Kings Shikhar Dhawan captaincy
ಶಿಖರ್​ ಕಾಲ್ಗುಣಕ್ಕೆ ಚಾಪಿಂಯನ್​ ಆಗುತ್ತಾ ಪಂಜಾಬ್​ ಕಿಂಗ್ಸ್​?

ನವದೆಹಲಿ: ಪಂಜಾಬ್ ಕಿಂಗ್ಸ್ ತಂಡ ಶಿಖರ್ ಧವನ್ ನಾಯಕತ್ವದಲ್ಲಿ ಈ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸಲಿದೆ. ಇತ್ತೀಚಿನ ದಿನಗಳಲ್ಲಿ ಶಿಖರ್ ಧವನ್ ಅವರ ಪೊಲೀಸ್ ಶೈಲಿಯು ಭಾರಿ ಚರ್ಚೆಯಲ್ಲಿದೆ, ಇದರಲ್ಲಿ ಅವರು ಮುಂಬೈ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ದಬಾಂಗ್ ಶಿಖರ್ ಶೈಲಿಯು ಪಂಜಾಬ್ ಭವಿಷ್ಯವನ್ನು ಬದಲಾಯಿಸುತ್ತದೆಯೇ? ಎಂಬುದು ಪ್ರಶ್ನೆಯಾಗಿದೆ.

ಐಪಿಎಲ್ ಇತಿಹಾಸದಲ್ಲಿ, ಪಂಜಾಬ್ ಕಿಂಗ್ಸ್ ತಂಡವು ಕೇವಲ ಎರಡು ಬಾರಿ ಸೆಮಿಫೈನಲ್‌ ಪ್ರವೇಶ ಪಡೆದುಕೊಂಡಿದೆ. ಅದರಲ್ಲಿ ಒಮ್ಮೆ ಫೈನಲ್ ತಲುಪಿ ರನ್ನರ್ ಅಪ್ ಆಗಿದ್ದಾರೆ. 2008 ರಲ್ಲಿ ಸೆಮಿಫೈನಲ್​ನಲ್ಲಿ ಕಿಂಗ್ಸ್​ ಇಲೆವನ್​ ಪಂಜಾಬ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಸೋಲನುಭವಿಸಿತು. 2014ರಲ್ಲಿ ಚಾಂಪಿಯನ್ ಆಗುವ ಕನಸನ್ನು ಭಗ್ನಗೊಳಿಸಿದ ಅದೇ ಕೆಕೆಆರ್‌ನೊಂದಿಗೆ ಈ ಬಾರಿ ಪಂಜಾಬ್ ತಂಡವು ತನ್ನ ಮೊಲದ ಪಂದ್ಯವನ್ನು 1 ಏಪ್ರಿಲ್ 2023 ರಂದು ಮೊಹಾಲಿಯಲ್ಲಿ ಆಡಲಿದೆ.

IPL 2023 Punjab Kings Shikhar Dhawan captaincy
ಪೊಲೀಸ್​ ಪಾತ್ರದಲ್ಲಿ ಶಿಖರ್​

2008 ಮತ್ತು 2014 ರಲ್ಲಿ ಅತ್ಯುತ್ತಮ ದಾಖಲೆ: 2014 ರಲ್ಲಿ ಫೈನಲ್ ತಲುಪಿದ ಪಂಜಾಬ್ ಕಿಂಗ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋತಿತು. 2014 ರಲ್ಲಿ ರನ್ನರ್ ಅಪ್​ಗೆ ತೃಪ್ತಿಪಡಬೇಕಾಯಿತು, ಆದರೆ 2008 ರಲ್ಲಿ ಆಡಿದ ಮೊದಲ ಐಪಿಎಲ್​ನಲ್ಲಿ ಪಂಜಾಬ್ ತಂಡ ಸೆಮಿಸ್​ನಲ್ಲಿ ಸೋಲನುಭವಿಸಿತು. ಈ ಎರಡು ವರ್ಷ ಮಾತ್ರ ತಂಡದಿಂದ ಅದ್ಭುತ ಪ್ರದರ್ಶನ ಕಂಡುಬಂದಿತು. ಈ ಎರಡು ಋತುಗಳನ್ನು ಬಿಟ್ಟರೆ, ಪಂಜಾಬ್ ಕಿಂಗ್ಸ್ ಪ್ರಯಾಣ ಯಾವಾಗಲೂ 5 ರಿಂದ 8 ನೇ ಸ್ಥಾನಕ್ಕೆ ಸೀಮಿತವಾಗಿರುತ್ತದೆ.

ತಂಡದಲ್ಲಿ ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಕ್ರಿಸ್ ಗೇಲ್, ಕೆಎಲ್ ರಾಹುಲ್, ಡೇವಿಡ್ ಮಿಲ್ಲರ್ ಮತ್ತು ಶಾನ್ ಮಾರ್ಷ್ ಅವರಂತಹ ದಿಗ್ಗಜ ಆಟಗಾರರಿದ್ದರೂ ತಂಡ ಯಶ ಸಾಧಿಸುವಲ್ಲಿ ವಿಫಲವಾಯಿತು. ಈಗ ಶಿಖರ್​ ಧವನ್​ ಕೈಗೆ ನಾಯಕತ್ವ ವಹಿಸಲಾಗಿದ್ದು, ತಂಡದಲ್ಲಿ ಹೊಸ ಚೈತನ್ಯಕ್ಕೆ ಕಾರಣವಾಗಿದೆ. ತಂಡವನ್ನು ಇನ್ನಷ್ಟೂ ಉತ್ತಮಗೊಳಿಸಿ ಪ್ರಥಮ ಕಪ್​ ಗೆಲ್ಲುವ ನಿರೀಕ್ಷೆಯಲ್ಲಿ ಪ್ರೀತಿ ಜಿಂಟಾ ಕಾಯುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಶಿಖರ್​ ಧವನ್​ ಒಂದು ಜಾಹೀರಾತು ಪ್ರೋಮೋದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೆ ಬಂದರು. ಅದರಲ್ಲಿ ಅವರು ಮುಂಬೈ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮುಂಬೈ ಪೊಲೀಸ್ ಸಮವಸ್ತ್ರವನ್ನು ಧರಿಸಿರುವ ಶಿಖರ್ ಧವನ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿಮಾನಿಗಳು ಇಷ್ಟಪಟ್ಟು ಕಮೆಂಟ್ ಮಾಡಿದ್ದಾರೆ.

ಪಂಜಾಬ್​ ಕಿಂಗ್ಸ್​ ತಂಡ: ರಾಜ್ ಬಾವಾ, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್, ಸ್ಯಾಮ್ ಕರ್ರಾನ್, ರಿಷಿ ಧವನ್, ಶಿಖರ್ ಧವನ್, ನಾಥನ್ ಎಲ್ಲಿಸ್, ವಿದ್ವತ್ ಕಾವೇರಪ್ಪ, ಎಂ ಶಾರುಖ್ ಖಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಕಗಿಸೊ ರಬಾಡ, ಭಾನುಕಾ ರಾಜಪಕ್ಸೆ, ಮೋಹಿತ್ ರಾಠಿ, ಸಿಕಂದರ್ ರಜಾ, ಜಿತೇಶ್ ಶರ್ಮಾ, ಮ್ಯಾಥ್ಯೂ ಶಾರ್ಟ್, ಅರ್ಷದೀಪ್ ಸಿಂಗ್, ಬಲ್ತೇಜ್ ಸಿಂಗ್, ಹರ್‌ಪ್ರೀತ್ ಸಿಂಗ್, ಪ್ರಭಾಸಿಮ್ರಾನ್ ಸಿಂಗ್, ಶಿವಂ ಸಿಂಗ್ ಮತ್ತು ಅಥರ್ವ ತಾಯ್ಡೆ.

ಇದನ್ನೂ ಓದಿ: IPL 2023: ರೋಹಿತ್​ ಪಡೆಗೆ ಆರನೇ ಪ್ರಶಸ್ತಿ ಗೆಲುವಿನ ಮೇಲೆ ಕಣ್ಣು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.