ETV Bharat / sports

IPL 2022: ಆರ್​ಸಿಬಿ ಮಿಂಚಿನ ಆಟ ವಿಫಲ.. ಚೆನ್ನೈಗೆ ಒಲಿದ ಅದೃಷ್ಟದ ಗೆಲುವು

author img

By

Published : Apr 13, 2022, 7:04 AM IST

Updated : Apr 13, 2022, 8:13 AM IST

ಚೊಚ್ಚಲ ಗೆಲುವಿನ ಹುಡುಕಾಟದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ 23 ರನ್​ಗಳ ಅಂತರದಿಂದ ಗೆಲುವು ಸಾಧಿಸಿದ್ದು, ಈ ಸೀಸನ್​​ನಲ್ಲಿ ಚೆನ್ನೈ ತಂಡಕ್ಕೆ ಸಿಕ್ಕ ಮೊದಲ ಗೆಲುವು ಇದಾಗಿದೆ.

IPL 2022: CSK notch first win of season after Shivam Dube-Robin Uthappa show against RCB
IPL 2022: ಉತ್ತಪ್ಪ- ದುಬೈ ಬ್ಯಾಟಿಂಗ್ ಅಬ್ಬರ.. ಆರ್​ಸಿಬಿ ವಿರುದ್ಧ ಚೆನ್ನೈ ತಂಡಕ್ಕೆ ಗೆಲುವು

ಮುಂಬೈ: ಸತತ ಸೋಲುಗಳಿಂದ ಕಂಗಾಲಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲುವು ಸಾಧಿಸಿದೆ. ಮುಂಬೈನ ಡಿವೈ ಪಾಟೀಲ್ ಸ್ಪೋರ್ಟ್ಸ್​ ಅಕಾಡೆಮಿಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕನ್ನಡಿಗ ರಾಬಿನ್​ ಉತ್ತಪ್ಪ ಮತ್ತು ಆಲ್​ರೌಂಡರ್​ ಶಿವಂ ದುಬೆ ಅಬ್ಬರ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 23 ರನ್​ಗಳ ಅಂತರದಿಂದ ಗೆಲುವು ಸಾಧಿಸಿದೆ.

ಐಪಿಎಲ್​ನ 15ನೇ ಆವೃತ್ತಿಯಲ್ಲಿ ಚೊಚ್ಚಲ ಗೆಲುವಿನ ಹುಡುಕಾಟದಲ್ಲಿದ್ದ ಚೆನ್ನೈ ತಂಡ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದು, ರಾಬಿನ್​ ಉತ್ತಪ್ಪ ರನ್​​ ಮತ್ತು ಶಿವಂ ದುಬೆ 95 ರನ್​ಗಳ ನೆರವಿನಿಂದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 217 ರನ್​​ಗಳ ಬೃಹತ್ ಮೊತ್ತದ ಗುರಿ ನೀಡಿತ್ತು. 50 ಎಸೆತಗಳನ್ನು ಎದುರಿಸಿದ ಉತ್ತಪ್ಪ 4 ಬೌಂಡರಿ ಮತ್ತು 9 ಸಿಕ್ಸರ್​ಗಳ ಸಹಿತ 88 ರನ್​ಗಳಿಸಿದರೆ, ಶಿವಂ ದುಬೆ 45 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್​ಗಳ ಸಹಿತ ಅಜೇಯ 95 ರನ್​ ಗಳಿಸಿದ್ದರು.

ಋತುರಾಜ್ ಗಾಯಕ್ವಾಡ್ 17 ರನ್, ಮೊಯಿನ್ ಅಲಿ 3 ರನ್​ಗಳ ಮಾತ್ರ ಗಳಿಸಲು ಸಾಧ್ಯವಾಯಿತು. ರವೀಂದ್ರ ಜಡೇಡಾ ಮೊದಲ ಎಸೆತದಲ್ಲಿ ಔಟಾಗಿ ಪೆವಿಲಿಯನ್​ಗೆ ಮರಳಿದ್ದು, ಕೊನೆಗೆ ಚೆನ್ನೈ ಸೂಪರ್​ ಕಿಂಗ್ 4 ವಿಕೆಟ್ ನಷ್ಟಕ್ಕೆ 217 ರನ್​ಗಳ ಗುರಿಯನ್ನು ನೀಡಲು ಸಾಧ್ಯವಾಯಿತು. ಬೆಂಗಳೂರು ತಂಡದ ಪರವಾಗಿ ಬೌಲಿಂಗ್ ಮಾಡಿದ ಬೌಲರ್​​ಗಳು ಚೆನ್ನೈ ಬೌಲರ್​ಗಳನ್ನು ಕಟ್ಟಿಹಾಕುವಲ್ಲಿ ವಿಫಲರಾದರು. ವನಿಂದು ಹಸರಂಗ 2 ವಿಕೆಟ್ ಪಡೆದರೆ, ಜೋಷ್ ಹೇಜಲ್​ವುಡ್ 1 ವಿಕೆಟ್ ಪಡೆಯಲು ಮಾತ್ರ ಸಾಧ್ಯವಾಯಿತು.

ನಂತರ ಗುರಿಯನ್ನು ಬೆನ್ನತ್ತಿದ ಬೆಂಗಳೂರು ತಂಡ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 193 ರನ್​ ಗಳಿಸಲು ಮಾತ್ರವೇ ಸಾಧ್ಯವಾಯಿತು. ಶಹಬಾಜ್ ಅಹ್ಮದ್ 41, ಸುಯಶ್ ಪ್ರಭುದೆಸ್ಸಾಯ್ 34, ದಿನೇಶ್ ಕಾರ್ತಿಕ್ 34, ಗ್ಲೆನ್ ಮಾಕ್ಸ್​ವೆಲ್ 26, ಮೊಹಮದ್ ಸಿರಾಜ್ 14, ಅನುಜ್ ರಾವತ್​ 12, ಫಾಫ್ ಡುಪ್ಲೆಸಿಸ್ 8 ರನ್​ ಗಳಿಸಿದರು. ವಿರಾಟ್​ ಕೊಹ್ಲಿ 3 ಎಸೆತಗಳಲ್ಲಿ 1 ರನ್ ಬಾರಿಸಿ, ಪೆವಿಲಿಯನ್​ಗೆ ಮರಳಿದ್ದು, ಬಹುದೊಡ್ಡ ಹೊಡೆತ ನೀಡಿತ್ತು.

ಚೆನ್ನೈ ಸೂಪರ್​ ಕಿಂಗ್ಸ್ ಪರ ಬೌಲಿಂಗ್ ಮಾಡಿದ ಮಹೀಶ್ ತೀಕ್ಷನಾ 4 ವಿಕೆಟ್ ಪಡೆದು ಆರ್​ಸಿಬಿಯನ್ನು ಕಟ್ಟಿ ಹಾಕಿದರೆ, ರವೀಂದ್ರ ಜಡೇಜಾ 3 ವಿಕೆಟ್, ಮುಕೇಶ್ ಚೌಧರಿ 1 ಮತ್ತು ಡ್ವೇನ್ ಬ್ರಾವೋ ಒಂದು ವಿಕೆಟ್ ಪಡೆದುಕೊಂಡರು. ಚೆನ್ನೈ ತಂಡದ ಬೌಲರ್​ಗಳ ದಾಳಿ ತೀವ್ರವಾಗಿದ್ದರೂ, ಬೆಂಗಳೂರು ತಂಡ 9 ವಿಕೆಟ್ ನಷ್ಟಕ್ಕೆ 193 ರನ್​ ಗಳಿಸಿ, 23 ರನ್​ಗಳ ಅಂತರದಿಂದ ಪರಾಭವಗೊಂಡಿತು.

ಇದನ್ನೂ ಓದಿ: ಉತ್ತಪ್ಪ-ಶಿವಂ ದುಬೆ ಸಿಡಿಲಬ್ಬರದ ಬ್ಯಾಟಿಂಗ್... ಆರ್​ಸಿಬಿಗೆ 217 ರನ್​ಗಳ ಬೃಹತ್​ ಗುರಿ ನೀಡಿದ ಸಿಎಸ್​ಕೆ

Last Updated : Apr 13, 2022, 8:13 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.