ETV Bharat / sports

ಸಿಎಸ್​ಕೆ ತಂಡಕ್ಕೆ ಏಪ್ರಿಲ್ 25 ಭಾರಿ ಅದೃಷ್ಟ.. 2010ರಿಂದ ಆಡಿರುವ ಎಲ್ಲ ಪಂದ್ಯಗಳಲ್ಲೂ ಜಯ! - ಇಂಡಿಯನ್ ಪ್ರೀಮಿಯರ್ ಲೀಗ್​

ಇಂಡಿಯನ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಏಪ್ರಿಲ್ 25 ರಂದು 7 ಪಂದ್ಯಗಳನ್ನಾಡಿದೆ. ಇದರಲ್ಲಿ ಎಲ್ಲ ಪಂದ್ಯಗಲ್ಲೂ ಸಿಎಸ್​ಕೆ ಗೆಲುವು ಸಾಧಿಸಿರುವುದು ಮತ್ತೊಂದು ವಿಶೇಷ. ಎರಡು ಪಂದ್ಯಗಳಲ್ಲಿ ಮುಂಬೈ ವಿರುದ್ಧ , ಮತ್ತೆರಡು ಪಂದ್ಯಗಳಲ್ಲಿ ಆರ್​ಸಿಬಿ ವಿರುದ್ಧ ಹಾಗೂ ಸನ್​ರೈಸರ್ಸ್​ , ಪುಣೆ ವಾರಿಯರ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ತಲಾ ಒಂದು ಗೆಲುವು ಸಾಧಿಸಿದೆ.

Chennai Super Kings never lost any IPL match on April 25
ಚೆನ್ನೈ ಸೂಪರ್ ಕಿಂಗ್ಸ್​ ಏಪ್ರಿಲ್ 25
author img

By

Published : Apr 25, 2022, 3:53 PM IST

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದು. 4 ನಾಲ್ಕು ಬಾರಿ ಟ್ರೋಫಿ ಎತ್ತಿ ಹಿಡಿದಿರುವ ತಂಡ 15ನೇ ಆವೃತ್ತಿಯಲ್ಲಿ ಮತ್ತೆ ವೈಫಲ್ಯ ಅನುಭವಿಸುತ್ತಿದೆ. ಆಡಿರುವ 7 ಪಂದ್ಯಗಳಲ್ಲಿ 5 ಸೋಲು ಮತ್ತು 2 ಗೆಲುವು ಪಡೆದಿರುವ ಹಾಲಿ ಚಾಂಪಿಯನ್ಸ್ ಸೋಮವಾರ ನಡೆಯುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೆಣಸಾಡುತ್ತಿದೆ.

ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದರೂ ಸಿಎಸ್​ಕೆ ಲೀಗ್​ನಲ್ಲಿ ಕಳಪೆ ಪ್ರದರ್ಶನ ತೋರಿಲ್ಲ. ಸೋತಿರುವ 5 ಪಂದ್ಯಗಳಲ್ಲಿ 2 ಪಂದ್ಯವನ್ನು ಕೊನೆಯ ಓವರ್​ನಲ್ಲಿ ಕಳೆದುಕೊಂಡಿದೆ. ಇದರಲ್ಲಿ ಫೀಲ್ಡಿಂಗ್ ವೈಫಲ್ಯವೂ ಸೇರಿದೆ. ಕಳೆದ ಮೂರು ಪಂದ್ಯಗಳಲ್ಲಿ 2 ರಲ್ಲಿ ಜಯ ಸಾಧಿಸಿದ್ದು, ತನ್ನ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ. ಪಂಜಾಬ್ ವಿರುದ್ಧ ಲೀಗ್​ನ ಮೊದಲ ಪಂದ್ಯದಲ್ಲಿ ಕಂಡಿರುವ ಸೋಲಿಗೆ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ.

ಏಪ್ರಿಲ್​ 25 ರಂದು ಸಿಎಸ್​ಕೆಗೆ ಸೋಲೇ ಇಲ್ಲ: ಇಂಡಿಯನ್ ಪ್ರೀಮಿಯರ್ ಲೀಗ್​ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಏಪ್ರಿಲ್ 25 ರಂದು 7 ಪಂದ್ಯಗಳನ್ನಾಡಿದೆ. ಇದರಲ್ಲಿ ಎಲ್ಲ ಪಂದ್ಯಗಲ್ಲೂ ಸಿಎಸ್​ಕೆ ಗೆಲುವು ಸಾಧಿಸಿರುವುದು ಮತ್ತೊಂದು ವಿಶೇಷ. ಎರಡು ಪಂದ್ಯಗಳಲ್ಲಿ ಮುಂಬೈ ವಿರುದ್ಧ , ಮತ್ತೆರಡು ಪಂದ್ಯಗಳಲ್ಲಿ ಆರ್​ಸಿಬಿ ವಿರುದ್ಧ ಹಾಗೂ ಸನ್​ರೈಸರ್ಸ್​ , ಪುಣೆ ವಾರಿಯರ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ತಲಾ ಒಂದು ಗೆಲುವು ಸಾಧಿಸಿದೆ. 2009 ಮತ್ತು 2012ರಲ್ಲೂ ಸಿಎಸ್​ಕೆ ಕಣಕ್ಕಿಳಿದಿತ್ತಾದರೂ ಮಳೆ ಕಾರಣ ಪಂದ್ಯಗಳು ರದ್ಧಾಗಿದ್ದವು.

  1. 2010ರ ಏಪ್ರಿಲ್ 25ರಂದು ಮುಂಬೈ ವಿರುದ್ಧ ನಡೆದಿದ್ದ ಫೈನಲ್​ ಪಂದ್ಯದಲ್ಲಿ ಸಿಎಸ್​ಕೆ 22 ರನ್​ಗಳಿಂದ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸಿಎಸ್​ಕೆ 168 ರನ್​ಗಳಿಸಿದರೆ, ಮುಂಬೈ 146 ರನ್​ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತ್ತು.
  2. ಏಪ್ರಿಲ್​ 25, 2011ರಲ್ಲಿ ಸಿಎಸ್​ಕೆ ಪುಣೆ ವಾರಿಯರ್ಸ್​ ವಿರುದ್ಧ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಧೋನಿ ಪಡೆ 142 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಪುಣೆ 117ರನ್​ಗಳಿಸಿ 25 ರನ್​ಗಳಿಂದ ಸೋಲು ಕಂಡಿತ್ತು.
  3. ಏಪ್ರಿಲ್ 25, 2013ರಲ್ಲಿ ಸಿಎಸ್​ಕೆ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ 5 ವಿಕೆಟ್ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್​ 159 ರನ್​ಗಳಿಸಿದರೆ, ಸಿಎಸ್​ಕೆ 19.4 ಓವರ್​ಗಳಲ್ಲಿ ಚೇಸ್​ ಮಾಡಿ ಗೆಲುವು ಸಾಧಿಸಿತ್ತು.
  4. ಏಪ್ರಿಲ್ 25, 2014ರಲ್ಲಿ ಸಿಎಸ್​ಕೆ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ದ ನಡೆದ 13ನೇ ಪಂದ್ಯದಲ್ಲಿ 7 ವಿಕೆಟ್​ಗಳ ಜಯ ಸಾಧಿಸಿತ್ತು. ಮುಂಬೈ ನೀಡಿದ್ದ 142 ರನ್​ಗಳ ಗುರಿಯನ್ನು19 ಓವರ್​ಗಳಲ್ಲಿ ಚೇಸ್​ ಮಾಡಿ ಗೆಲುವು ದಾಖಲಿಸಿತ್ತು. ಮೆಕಲಮ್​ ಅಜೇಯ 71 ರನ್​ಗಳಿಸಿದ್ದರು.
  5. ಏಪ್ರಿಲ್ 25, 2016ರಲ್ಲಿ ಪಂಜಾಬ್​ ಕಿಂಗ್ಸ್ ವಿರುದ್ಧ ನಡೆದಿದ್ದ ಪಂದ್ಯವನ್ನು 97 ರನ್​ಗಳಿಂದ ಗೆಲುವು ಸಾಧಿಸಿತ್ತು. ಪಂಜಾಬ್ ಕೇವಲ 95 ರನ್​ಗಳಿಸಿ ಹೀನಾಯ ಸೋಲು ಕಂಡಿತ್ತು.
  6. ಏಪ್ರಿಲ್ 25, 2018ರಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿದಿದ್ದ ಸಿಎಸ್​ಕೆ ಬರೋಬ್ಬರಿ 206 ರನ್​ಗಳ ಗುರಿಯನ್ನು 19.4 ಓವರ್​ಗಳಲ್ಲಿ ತಲುಪಿತ್ತು. ಧೋನಿ 34 ಎಸೆತಗಳಲ್ಲಿ ಅಜೇಯ 70, ರಾಯುಡು 53 ಎಸೆತಗಳಲ್ಲಿ 82 ರನ್​ಗಳಿಸಿ ಗೆಲುವಿನ ರೂವಾರಿಗಳಾಗಿದ್ದರು.
  7. ಏಪ್ರಿಲ್ 25, 2021ರಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಣಕ್ಕಿಳಿದಿದ್ದ ಸಿಎಸ್​ಕೆ ಮೊದಲು ಬ್ಯಾಟಿಂಗ್ 191 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ಆರ್​ಸಿಬಿ ಕೇವಲ 122 ರನ್​ಗಳಿಸಿ 69 ರನ್​ಗಳ ಸೋಲು ಕಂಡಿತ್ತು.

ಮತ್ತೊಂದು ವಿಶೇಷವೆಂದರೆ ಪಂಜಾಬ್ ಕಿಂಗ್ಸ್ ಕೂಡ 3 ಬಾರಿ ಏಪ್ರಿಲ್ 25 ರಂದು ಆಡಿದ್ದು, ಇದರಲ್ಲಿ 2 ಸೋಲು ಮತ್ತು ಒಂದು ಗೆಲುವು ದಾಖಲಿಸಿದೆ. ಇದಂದು ಏಪ್ರಿಲ್ 25ರ ಸಿಎಸ್​ಕೆ ಅಜೇಯ ಓಟಕ್ಕೆ ಬ್ರೇಕ್ ಹಾಕಲಿದೆಯಾ ಕಾದು ನೋಡಬೇಕಿದೆ.

ಇದನ್ನೂ ಓದಿ:ಶತಕ ಸಿಡಿಸಿ 6 ಲಕ್ಷ ಮೌಲ್ಯದ ಅವಾರ್ಡ್ ಪಡೆದ ಕನ್ನಡಿಗ ಕೆಎಲ್​ ರಾಹುಲ್​ಗೆ 24 ಲಕ್ಷ ರೂ. ದಂಡ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.