ಅಹ್ಮದಾಬಾದ್ : 2022ರ ಐಪಿಎಲ್ಗೆ ನೂತನವಾಗಿ ಸೇರಿಕೊಂಡಿರುವ ಅಹ್ಮದಾಬಾದ್ ಫ್ರಾಂಚೈಸಿ ಬುಧವಾರ ತಮ್ಮ ತಂಡಕ್ಕೆ 'ಗುಜರಾತ್ ಟೈಟನ್ಸ್' ಎಂದು ಅಧಿಕೃತ ಹೆಸರನ್ನು ಖಚಿತಪಡಿಸಿದೆ. ಎರಡು ದಿನಗಳ ಹಿಂದೆ ಅಹ್ಮದಾಬಾದ್ ಟೈಟನ್ಸ್ ಎಂಬ ಹೆಸರು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿತ್ತು.
2021 ಅಕ್ಟೋಬರ್ನಲ್ಲಿ ನಡೆದ ಹೊಸ ತಂಡಗಳ ಬಿಡ್ನಲ್ಲಿ ಸಿವಿಸಿ ಕ್ಯಾಪಿಟಲ್ಸ್ ಬರೋಬರಿ 5625 ಕೋಟಿ ರೂ. ಬಿಡ್ ಮಾಡಿ ಅಹ್ಮದಾಬಾದ್ ತಂಡವನ್ನು ಖರೀದಿಸಿತ್ತು. 2022ರ ಹರಾಜಿಗೂ ಮೊದಲೇ ಭಾರತದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು(15 ಕೋಟಿರೂ) ನಾಯಕನಾಗಿ ನೇಮಿಸಿರುವ ಫ್ರಾಂಚೈಸಿ, ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್(15 ಕೋಟಿ) ಮತ್ತು ಭಾರತದ ಉದಯೋನ್ಮುಖ ಬ್ಯಾಟರ್ ಶುಬ್ಮನ್ ಗಿಲ್(8 ಕೋಟಿ) ಅವರನ್ನು ನೇರ ಡ್ರಾಫ್ಟ್ ಮೂಲಕ ತಂಡಕ್ಕೆ ಸೇರಿಸಿಕೊಂಡಿದೆ.
ತಂಡ ಖರೀದಿಸಿದ 4 ತಿಂಗಳ ಬಳಿಕ , ಮೆಗಾ ಹರಾಜಿಗೆ 3 ದಿನಗಳಿರುವಾಗ ಫ್ರಾಂಚೈಸಿ ತಮ್ಮ ತಂಡಕ್ಕೆ ಗುಜರಾತ್ ಟೈಟನ್ಸ್ ಎಂಬ ಅಧಿಕೃತ ಹೆಸರು ಪ್ರಕಟಿಸಿದೆ. 2017 ಮತ್ತು 18ರ ಆವೃತ್ತಿಗಳಲ್ಲೂ ಗುಜರಾತ್ ಲಯನ್ಸ್ ಎಂಬ ಹೆಸರಿನ ಫ್ರಾಂಚೈಸಿ 2 ವರ್ಷಗಳ ಕಾಲ ಐಪಿಎಲ್ನಲ್ಲಿತ್ತು.
-
🔊 Here's more about our name, before you 'Remember The Name'! 😊 #GujaratTitans pic.twitter.com/UA1KcjT1Hr
— Gujarat Titans (@gujarat_titans) February 9, 2022 " class="align-text-top noRightClick twitterSection" data="
">🔊 Here's more about our name, before you 'Remember The Name'! 😊 #GujaratTitans pic.twitter.com/UA1KcjT1Hr
— Gujarat Titans (@gujarat_titans) February 9, 2022🔊 Here's more about our name, before you 'Remember The Name'! 😊 #GujaratTitans pic.twitter.com/UA1KcjT1Hr
— Gujarat Titans (@gujarat_titans) February 9, 2022
ಈಗಾಗಲೇ ಲಖನೌ ತಂಡ ಕೂಡ ಲಖನೌ ಸೂಪರ್ ಜೈಂಟ್ಸ್ ಎಂದು ನಾಮಕರಣ ಮಾಡಿದೆ. ಸಂಜೀವ್ ಗೋಯಂಕಾ ಅವರ ಆರ್ಪಿಎಸ್ಜಿ ಗ್ರೂಫ್ 7090 ಕೋಟಿ ರೂ.ಗಳಿಗೆ ಲಖನೌ ತಂಡವನ್ನು ಖರೀದಿ ಮಾಡಿದೆ. ಕನ್ನಡಿಗ ರಾಹುಲ್(17 ಕೋಟಿ) ನಾಯಕನನ್ನಾಗಿ ನೇಮಕ ಮಾಡಿದ್ದಾರೆ. ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯ್ನಿಸ್(9.2 ಕೋಟಿ) ಮತ್ತು ಯುವ ಸ್ಪಿನ್ನರ್ ರವಿ ಬಿಷ್ಣೋಯ್(4 ಕೋಟಿ) ರನ್ನು ಡ್ರಾಫ್ಟ್ ಮಾಡಿಕೊಂಡಿದೆ.
ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಹರಾಜಿನಲ್ಲಿರುವ 590 ಆಟಗಾರರಲ್ಲಿ 10 ಫ್ರಾಂಚೈಸಿಗಳು ಒಟ್ಟು 217 ಆಟಗಾರರನ್ನು ಖರೀದಿಸಲಿದ್ದಾರೆ.