ETV Bharat / sports

ಅವಕಾಶ ಸಿಕ್ಕರೂ ಮಂಕಡಿಂಗ್ ಮಾಡದ ಅಶ್ವಿನ್!

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಫಿಂಚ್ ತಮ್ಮ ಕ್ರೀಸ್‌ನಿಂದ ಹೊರ ಬಂದಾಗ ಆಫ್ ಸ್ಪಿನ್ನರ್ ಅಶ್ವಿನ್ ಮಂಕಡಿಂಗ್​ಗೆ ಪ್ರಯತ್ನಿಸಲಿಲ್ಲ.

author img

By

Published : Oct 6, 2020, 10:08 AM IST

ashwin finch
ashwin finch

ದುಬೈ: ನಾನ್ ಸ್ಟ್ರೈಕರ್ ಎಂಡ್​ನಲ್ಲಿರುವ ಬ್ಯಾಟ್ಸ್‌ಮನ್​ಅನ್ನು ಮಂಕಡ್ ಔಟ್ ಮಾಡುವ ಅವಕಾಶ ಸಿಕ್ಕರೂ ರವಿಚಂದ್ರನ್ ಅಶ್ವಿನ್ ಹಿಂದೆ ಸರಿದಿದ್ದಾರೆ.

ಈ ಮೂಲಕ ತಾವು ಈ ಹಿಂದೆ ಮಂಕಡಿಂಗ್ ಮಾಡಿದ್ದನ್ನು ಪುನಾರವರ್ತಿಸದೆ ವಿವಾದದಿಂದ ದೂರ ಸರಿದಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಆರ್​ಸಿಬಿ ಓಪನರ್ ಆರನ್ ಫಿಂಚ್ ನಾನ್ ಸ್ಟ್ರೈಕರ್ ಎಂಡ್​ನ ಕ್ರೀಸ್‌ನಿಂದ ದೂರವಿದ್ದರೂ ಅಶ್ವಿನ್ ಕೈಯಲ್ಲಿ ಬಾಲ್ ಹಿಡಿದು ನಗುತ್ತಾ ನಿಂತಿದ್ದರು.

ಆದರೂ ಆರನ್ ಫಿಂಚ್​ಗೆ ಅಶ್ವಿನ್ ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ಮಂಕಡಿಂಗ್ ವಿವಾದ ಕುರಿತು ಅಶ್ವಿನ್​ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಕೋಚ್​ ರಿಕಿ ಪಾಂಟಿಂಗ್ ಕೂಡ ಮುಗುಳ್ನಕ್ಕರು.

ricky ponting
ಡೆಲ್ಲಿ ಕ್ಯಾಪಿಟಲ್ಸ್ ಕೋಚ್​ ರಿಕಿ ಪಾಂಟಿಂಗ್

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಈ ಘಟನೆ ನಡೆದಿದ್ದು, ಫಿಂಚ್ ತಮ್ಮ ಕ್ರೀಸ್‌ನಿಂದ ಹೊರ ಬಂದಾಗ ಆಫ್ ಸ್ಪಿನ್ನರ್ ಅಶ್ವಿನ್ ಮಂಕಡಿಂಗ್​ಗೆ ಪ್ರಯತ್ನಿಸಲಿಲ್ಲ.

ಪಂದ್ಯಾವಳಿಯಲ್ಲಿ ನಾನ್ ಸ್ಟ್ರೈಕರ್ ಮಂಕಡ್​​ಅನ್ನು ನಾನು ಇಷ್ಟ ಪಡುವುದಿಲ್ಲ ಎಂದು ಅಶ್ವಿನ್​ಗೆ ತಿಳಿಸಿದ್ದೇನೆ ಎಂದು ಪಾಂಟಿಂಗ್ ಐಪಿಎಲ್ 2020 ಪ್ರಾರಂಭವಾಗುವ ಮೊದಲೇ ಹೇಳಿದ್ದರಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.