ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ನ ಬಿಸಿ ವಾತಾವರಣದಲ್ಲಿ ಹೆಚ್ಚು ಸಮಯ ಆಡುವುದು ಸುಲಭದ ಮಾತಲ್ಲ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ರೋಹಿತ್ ಅವರ ಈ ಹೇಳಿಕೆಯನ್ನು ಮುಂಬೈ ತಂಡದ ವೇಗಿ ಟ್ರೆಂಟ್ ಬೋಲ್ಟ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಕೂಡ ಒಪ್ಪಿಕೊಂಡಿದ್ದಾರೆ. ನಿನ್ನೆ ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 54 ಎಸೆತಗಳಲ್ಲಿ 80 ರನ್ ಗಳಿಸಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗೆ ಕೆಕೆಆರ್ ವಿರುದ್ಧ 49 ರನ್‌ಗಳ ಗೆಲುವು ಸಾಧಿಸಲು ನೆರವಾಯಿತು.
- ' class='align-text-top noRightClick twitterSection' data=''>
ಪಂದ್ಯ ಮುಗಿದ ಬಳಿಕ ಮಾತನಾಡಿದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ, ಇಲ್ಲಿ ದೀರ್ಘ ಇನ್ನಿಂಗ್ಸ್ ಆಡುವುದು ಸುಲಭವಲ್ಲ. ಈ ಪರಿಸ್ಥಿತಿಗಳಲ್ಲಿ ಆಡಲು ನಿಮ್ಮಿಂದ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಬಹುಶಃ ನಾನು ಸ್ವಲ್ಪ ದಣಿದಿದ್ದೆ ಮತ್ತು ಒಬ್ಬ ಸೆಟ್ ಬ್ಯಾಟ್ಸ್‌ಮನ್ ಅಂತ್ಯದ ಸಮಯದವರೆಗೂ ಬ್ಯಾಟ್ ಮಾಡುವ ಅವಶ್ಯಕತೆಯಿದೆ ಎಂಬುದು ನಮಗೆ ಪಾಠವಾಗಿದೆ ಎಂದಿದ್ದಾರೆ.
ನಾನು ಫುಲ್ ಶಾಟ್‌ಗಳನ್ನು ಆಡಲು ಯತ್ನಿಸುತ್ತಿದ್ದೇನೆ ಮತ್ತು ಸ್ವಲ್ಪ ಅಭ್ಯಾಸ ಮಾಡಿದ್ದೇನೆ. ನನ್ನ ತಂಡದ ಪ್ರದರ್ಶನದ ಬಗ್ಗೆ ತುಂಬಾ ಸಂತೋಷವಾಗಿದೆ ಎಂದಿದ್ದು, ತಮ್ಮ ತಂಡದ ಬೌಲಿಂಗ್ ದಾಳಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.