ETV Bharat / sports

ಐಪಿಎಲ್ 2020ಯಲ್ಲಿ ಕೆ.ಎಲ್. ರಾಹುಲ್ ಹೊಸ ಸಾಧನೆ - ವಿಕೆಟ್‌ಗಳ ನಡುವಿನ ಗರಿಷ್ಠ ಅಂತರವನ್ನು ಕ್ರಮಿಸಿದ ರಾಹುಲ್

ಕೆಎಕ್ಸ್‌ಐಪಿ ನಾಯಕ ತನ್ನ 670 ರನ್‌ಗಳಲ್ಲಿ 300 ರನ್​ಗಳನ್ನು ಸಿಂಗಲ್ಸ್, ಟೂ' ಸ್ ಅಥವಾ ತ್ರೀ'ಸ್ ಓಡುವ ಮೂಲಕ ಗಳಿಸಿದ್ದಾರೆ. ಅವರು ತಮ್ಮ ತಂಡದ ಸ್ಕೋರ್‌ಗೆ 278 ರನ್‌ಗಳನ್ನು ಸೇರಿಸಲು ನಾನ್ - ಸ್ಟ್ರೈಕರ್‌ ತುದಿಯಿಂದ ಓಡಿದ್ದಾರೆ.

kl rahul
kl rahul
author img

By

Published : Nov 7, 2020, 10:33 AM IST

ನವದೆಹಲಿ: ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) ಪ್ಲೇ ಆಫ್‌ನಲ್ಲಿ ಸ್ಥಾನ ಗಳಿಸಲು ಸಾಧ್ಯವಾಗದಿರಬಹುದು. ಆದರೆ, ತಂಡದ ನಾಯಕ ಕೆ.ಎಲ್. ರಾಹುಲ್ ಆರೆಂಜ್ ಕ್ಯಾಪ್ ಹಿಡಿದಿಟ್ಟುಕೊಳ್ಳುವುದರ ಜೊತೆಗೆ, ಈ ಐಪಿಎಲ್​ನಲ್ಲಿ ವಿಕೆಟ್‌ಗಳ ನಡುವಿನ ಗರಿಷ್ಠ ಅಂತರವನ್ನು ಕ್ರಮಿಸುವಲ್ಲಿ ವಿಶಿಷ್ಟತೆ ತೋರಿಸಿದ್ದಾರೆ.

ಕಿಂಗ್ಸ್​ ಪಂಜಾಬ್​ ನಾಯಕ ತನ್ನ 670 ರನ್‌ಗಳಲ್ಲಿ 300 ರನ್​ಗಳನ್ನು ಸಿಂಗಲ್ಸ್, ಟೂ'ಸ್ ಅಥವಾ ತ್ರೀ'ಸ್ ಓಡುವ ಮೂಲಕ ಗಳಿಸಿದ್ದಾರೆ. ಜೊತೆಗೆ ತಮ್ಮ ತಂಡದ ಸ್ಕೋರ್‌ಗೆ 278 ರನ್‌ಗಳನ್ನು ಸೇರಿಸಲು ನಾನ್ - ಸ್ಟ್ರೈಕರ್‌ ತುದಿಯಿಂದ ಓಡಿದ್ದಾರೆ.

ಈ ಮೂಲಕ ಯುಎಇಯ ಮೂರು ಮೈದಾನಗಳಲ್ಲಿ ಈ ವರ್ಷ 22 ಗಜಗಳಷ್ಟು ದೂರ ಓಡಿ ರಾಹುಲ್ 578 ರನ್ ಗಳಿಸಿದಂತಾಗಿದೆ. ಈ ರೀತಿ, ವಿಕೆಟ್​ಗಳ ನಡುವೆ ಓಡುವಾಗ ರಾಹುಲ್ ಅಂದಾಜು 12,716 ಮೀಟರ್ ಅಥವಾ 11.62 ಕಿಲೋಮೀಟರ್ ಕ್ರಮಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ರಾಹುಲ್ ತನ್ನ 14 ಇನ್ನಿಂಗ್ಸ್‌ಗಳಲ್ಲಿ 58 ಬೌಂಡರಿ ಮತ್ತು 23 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ವಿರಾಟ್ ಕೊಹ್ಲಿ ಪಂದ್ಯಾವಳಿಯಲ್ಲಿ ವಿಕೆಟ್​ಗಳ ನಡುವೆ ಓಡುವಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಗಳಿಸಿದ 460 ರನ್‌ಗಳಲ್ಲಿ 302 ರನ್​​​ಗಳನ್ನ ವಿಕೆಟ್‌ಗಳ ನಡುವೆ ಓಡುವುದರಿಂದ ಬಂದಿದೆ. ಇದು ಶೇಕಡಾವಾರು ರನ್‌ಗಳ ವಿಷಯದಲ್ಲಿ ಅತಿ ಹೆಚ್ಚಾಗಿದ್ದು, ರಾಹುಲ್ ಸಾಧಿಸಿದ್ದಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.

ಕೊಹ್ಲಿ ನಾನ್ ಸ್ಟ್ರೈಕರ್ ತುದಿ​​ನಿಂದ ಓಡಿ ತಂಡದ ಮೊತ್ತಕ್ಕೆ 217 ರನ್ ಸೇರಿಸಿದ್ದು, ಇದು ರಾಹುಲ್ ಮೊತ್ತಕ್ಕಿಂತ 61 ರನ್ ಕಡಿಮೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.