ಅಬುಧಾಬಿ: ಶುಕ್ರವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಉತ್ತಮವಾಗಿ ಬೌಲಿಂಗ್ ನಡೆಸಿದ ಜೇಸನ್ ಹೋಲ್ಡರ್ ಮೂರು ವಿಕೆಟ್ ಪಡೆದು ಹೈದರಾಬಾದ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ವೆಸ್ಟ್ ಇಂಡೀಸ್ ಟೆಸ್ಟ್ ನಾಯಕನ ಹೋಲ್ಡರ್, ವಿರಾಟ್ ಕೊಹ್ಲಿ ಮತ್ತು ಆರಂಭಿಕ ಆಟಗಾರ ದೇವದತ್ ಪಡಿಕ್ಕಲ್ ಅವರನ್ನು ಬಹಳ ಬೇಗ ಪೆವಿಲಿಯನ್ ಸೇರಿಸಿದ್ರು. ಹೀಗಾಗಿ ಹೈದರಾಬಾದ್ ತಂಡ ಆರಂಭದಲ್ಲೇ ಮೇಲುಗೈ ಸಾಧಿಸಿತು. ನಾಲ್ಕು ಓವರ್ ಬೌಲಿಂಗ್ ನಡೆಸಿದ ಹೋಲ್ಡರ್ 25 ರನ್ ಬಿಟ್ಟುಕೊಟ್ಟರು.
-
Wickets for @Jaseholder98 so far!#Dream11IPL #Eliminator pic.twitter.com/guxouSSJ52
— IndianPremierLeague (@IPL) November 6, 2020 " class="align-text-top noRightClick twitterSection" data="
">Wickets for @Jaseholder98 so far!#Dream11IPL #Eliminator pic.twitter.com/guxouSSJ52
— IndianPremierLeague (@IPL) November 6, 2020Wickets for @Jaseholder98 so far!#Dream11IPL #Eliminator pic.twitter.com/guxouSSJ52
— IndianPremierLeague (@IPL) November 6, 2020
ಹೋಲ್ಡರ್ ಅವರ ಎತ್ತರ ಮತ್ತು ಸ್ವಿಂಗ್ ಸಾಮರ್ಥ್ಯ ಅವರನ್ನು ಅಪಯಕಾರಿಯನ್ನಾಗಿಸಿದೆ ಎಂದು ಆಸೀಸ್ ತಂಡದ ಮಾಜಿ ವೇಗಿ ಬ್ರೆಟ್ ಲೀ ಹೇಳಿದ್ದಾರೆ.'ಹೋಲ್ಡರ್ಗೆ ಅವರ ಎತ್ತರವೇ ವರವಾಗಿದೆ. ಅವರು ಆ ಎತ್ತರದಿಂದ ಚೆಂಡನ್ನು ಸ್ವಿಂಗ್ ಮಾಡಬಹುದು. ವೇಗವನ್ನೂ ಹೆಚ್ಚಿಸ ಬಹುದು' ಎಂದು ಬ್ರೆಟ್ ಲೀ ಅಭಿಪ್ರಾಯ ಪಟ್ಟಿದ್ದಾರೆ.
ಗಾಯಾಳು ಮಿಚೆಲ್ ಮಾರ್ಷ್‌ಗೆ ಬದಲಿಗೆ ಹೈದರಾಬಾದ್ ತಂಡ ಸೇರಿಕೊಂಡ ಆಲ್‌ರೌಂಡರ್ ಜೇಸನ್ ಹೋಲ್ಡರ್, ಕಳೆದ ಆರು ಪಂದ್ಯಗಳಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆಡಿರುವ ಆರು ಪಂದ್ಯಗಳಲ್ಲಿ ಓವರ್ಗೆ 7.62 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟು 13 ವಿಕೆಟ್ ಪಡೆದಿದ್ದಾರೆ.