ETV Bharat / sports

ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದ ಭಾರತೀಯ ಮೂಲದ ಟ್ಯಾಕ್ಸಿ ಚಾಲಕನ ಪುತ್ರ!

author img

By

Published : Jan 29, 2021, 10:07 PM IST

ಪ್ರಸ್ತುತ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​​​ನಲ್ಲಿ ತನ್ವೀರ್​ ಸಂಗ ಉತ್ತಮ ಪ್ರದರ್ಶನ ತೋರಿದ್ದು, ಸಿಡ್ನಿ ಥಂಡರ್ ಪರ ಆಡಿ 16.66ರ ಸರಾಸರಿಯಲ್ಲಿ 21 ವಿಕೆಟ್​​ಗಳನ್ನು ಪಡೆದಿದ್ದಾರೆ.

Indian-origin taxi driver's son makes it to Australia T20I team
ಲೆಗ್ ಸ್ಪಿನ್ನರ್ ತನ್ವೀರ್ ಸಂಗ

ಮೆಲ್ಬೋರ್ನ್: ಮುಂಬರುವ ಐದು ಪಂದ್ಯಗಳ ಟಿ-20 ಸರಣಿಗಾಗಿ ನ್ಯೂಜಿಲೆಂಡ್​​ ಪ್ರವಾಸ ಕೈಗೊಂಡಿರುವ ಆಸ್ಟ್ರೇಲಿಯಾ ತಂಡದಲ್ಲಿ ಭಾರತೀಯ ಮೂಲದ ಟ್ಯಾಕ್ಸಿ ಚಾಲಕನ ಪುತ್ರ, ಲೆಗ್ ಸ್ಪಿನ್ನರ್ ತನ್ವೀರ್ ಸಂಗ ಸ್ಥಾನ ಪಡೆದಿದ್ದಾರೆ. ಫೆಬ್ರುವರಿ 22ರಿಂದ ಸರಣಿ ಆರಂಭವಾಗಲಿದೆ.

ಒಂದು ವರ್ಷದ ಹಿಂದೆ ಅಂಡರ್​-19 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಪ್ರತಿನಿಧಿಸಿದ್ದ ಸಂಗ, 1997ರಲ್ಲಿ ಪಂಜಾಬ್‌ನ ಜಲಂಧರ್ ಬಳಿಯ ರಹೀಂಪುರ ಕಲಾ ಸಂಗಿಯಾನ್ ಎಂಬ ಹಳ್ಳಿಯಿಂದ ಸಿಡ್ನಿಗೆ ವಲಸೆ ಬಂದ ಜೋಗಾ ಅವರ ಪುತ್ರ. ಅಂಡರ್​-19 ವಿಶ್ವಕಪ್​​ನಲ್ಲಿ 6 ಪಂದ್ಯಗಳಲ್ಲಿ 15 ವಿಕೆಟ್​​ ಕಬಳಿಸಿ ಆಯ್ಕೆಗಾರರ ಗಮನ ಸೆಳೆದಿದ್ದರು.

ಇದನ್ನೂ ಓದಿ...ಪಾಕ್​ ಬೌಲಿಂಗ್ ದಾಳಿಗೆ ದ. ಆಫ್ರಿಕಾ ತತ್ತರ... ಮೊದಲ ಟೆಸ್ಟ್​ ಪಂದ್ಯ ಕೈಚೆಲ್ಲಿದ ಹರಿಣಗಳ ಪಡೆ!

ಪ್ರಸ್ತುತ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​​​ನಲ್ಲಿ ತನ್ವೀರ್​ ಸಂಗ ಉತ್ತಮ ಪ್ರದರ್ಶನ ತೋರಿದ್ದಾರೆ. ಸಿಡ್ನಿ ಥಂಡರ್ ಪರ ಆಡಿದ ಅವರು 16.66ರ ಸರಾಸರಿಯಲ್ಲಿ 21 ವಿಕೆಟ್​​ಗಳನ್ನು ಪಡೆದಿದ್ದಾರೆ. ಉತ್ತಮ ಪ್ರದರ್ಶನ ತೋರುತ್ತಿರುವ ಸಂಗರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳಬೇಕು ಎಂದು ಮಾಜಿ ನಾಯಕ ರಿಕಿ ಪಾಂಟಿಂಗ್​ ಕರೆ ನೀಡಿದ್ದರು.

ಆತನಿನ್ನೂ ಯುವಕ. ತುಂಬಾ ಆತ್ಮವಿಶ್ವಾಸ ಹೊಂದಿದ್ದು, ಮುಂದೇನು ಮಾಡಬೇಕೆಂಬುದರ ಮೇಲೆ ನಿಯಂತ್ರಣ ಹೊಂದಿದ್ದಾನೆ. ಆತನ ಬೌಲಿಂಗ್​ನಲ್ಲಿ ಪ್ರಮುಖ ಬ್ಯಾಟ್ಸ್​ಮನ್​ಗಳು ಕಕ್ಕಾಬಿಕ್ಕಿಯಾಗಿದ್ದನ್ನು ನೋಡಿದ್ದೇನೆ. ಆದ್ದರಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ ಪ್ರವೇಶಿಸಲು ಸೂಕ್ತ ಆಟಗಾರ ಎಂದು ಪಾಂಟಿಂಗ್ ಕ್ರಿಕೆಟ್.ಕಾಂಗೆ ತಿಳಿಸಿದರು. ತನ್ವೀರ್​​ಗೂ ಮುನ್ನ ಭಾರತೀಯ ಮೂಲದ ವ್ಯಕ್ತಿ ಗುರಿಂದರ್ ಸಂಧು ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕಾಗಿ ಆಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.