ETV Bharat / sports

ಸಿಎಸ್​ಕೆಗೆ ಆಘಾತ; ಬಹುತೇಕ 2022ರ ಐಪಿಎಲ್​ಗೆ ದೀಪಕ್​ ಚಾಹರ್ ಅಲಭ್ಯ - ಸಿಎಸ್​ಕೆ ದೀಪಕ್ ಚಾಹರ್

ಕಳೆದ ತಿಂಗಳು ವೆಸ್ಟ್​ ಇಂಡೀಸ್​ ವಿರುದ್ಧದ ಕೊನೆಯ ಟಿ20 ಪಂದ್ಯದ ವೇಳೆ ಬೌಲಿಂಗ್ ಆಲ್​ರೌಂಡರ್​ ಸ್ನಾಯು ಸೆಳೆತಕ್ಕೆ ಒಳಗಾಗಿ ಪಂದ್ಯವನ್ನು ಅರ್ಧದಲ್ಲೇ ತೊರೆದಿದ್ದರು.

Injured Chahar set to miss half of IPL 2022
ದೀಪಕ್ ಚಾಹರ್​
author img

By

Published : Mar 2, 2022, 8:27 PM IST

ಚೆನ್ನೈ: 2022ರ ಇಂಡಿಯನ್ ಪ್ರೀಮಿಯರ್​ ಲೀಗ್​ಗೂ ಮುನ್ನವೇ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್​ಗೆ ದೊಡ್ಡ ಹೊಡೆತ ಬಿದ್ದಿದೆ. ತಂಡದ ಪ್ರಮುಖ ವೇಗಿ ದೀಪಕ್​ ಚಾಹರ್​ ಬಹುತೇಕ ಆವೃತ್ತಿಯನ್ನು ಮಿಸ್​ ಮಾಡಿಕೊಳ್ಳಲಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ.

ಕಳೆದ ತಿಂಗಳು ವೆಸ್ಟ್​ ಇಂಡೀಸ್​ ವಿರುದ್ಧದ ಕೊನೆಯ ಟಿ20 ಪಂದ್ಯದ ವೇಳೆ ಬೌಲಿಂಗ್ ಆಲ್​ರೌಂಡರ್​ ಸ್ನಾಯು ಸೆಳೆತಕ್ಕೆ ಒಳಗಾಗಿ ಪಂದ್ಯವನ್ನು ಅರ್ಧದಲ್ಲೇ ತೊರೆದಿದ್ದರು. ನಂತರ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಿಂದಲೂ ಹೊರಬಿದ್ದಿದ್ದರು. ಇದೀಗ 2022ರ ಆವೃತ್ತಿಯ ಬಹುಪಾಲು ಭಾಗವನ್ನು ಚಾಹರ್​ ಆಡುವುದಿಲ್ಲ ಎಂದು ಇಎಸ್​ಪಿಎನ್​ಕ್ರಿಕ್ಇನ್ಫೊ ವರದಿ ಮಾಡಿದೆ.

ಒಂದು ವೇಳೆ ಚಾಹರ್​ ಅಲಭ್ಯರಾದರೆ ಚೆನ್ನೈ ತಂಡಕ್ಕೆ ಬಹುದೊಡ್ಡ ಹೊಡೆತವಾಗಲಿದೆ. ಸಿಎಸ್​ಕೆ ಅವರನ್ನು ಬರೋಬ್ಬರಿ 14 ಕೋಟಿ ರೂ ನೀಡಿ ಖರೀದಿಸಿದೆ. ಅವರಿಗಾಗಿ ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಹರಾಜಿನಲ್ಲಿ ಭಾರಿ ಪೈಪೋಟಿ ನೀಡಿ ಖರೀದಿಸಿದೆ.

ಚಾಹರ್​ ಇತ್ತೀಚಿನ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬೌಲಿಂಗ್ ಜೊತೆಗೆ ಬ್ಯಾಟಿಂಗ್​ನಲ್ಲೂ ತಂಡಕ್ಕೆ ಸಾಕಷ್ಟು ನೆರವಾಗಿದ್ದರು. ಇದೀಗ ಸಿಎಸ್​ಕೆ ಅವರ ಸೇವೆಯನ್ನು ದೊಡ್ಡ ಪ್ರಮಾಣದಲ್ಲಿ ಕಳೆದುಕೊಳ್ಳಲಿದೆ. ಅಲ್ಲದೆ ತಂಡದಲ್ಲಿ ಹೊಸ ಚೆಂಡಿನಲ್ಲಿ ಬೌಲಿಂಗ್ ಮಾಡಬಲ್ಲ ಬೌಲರ್​ ಕೂಡ ಇಲ್ಲದಿರುವುದು ಕೂಡ ದೊಡ್ಡ ಹಿನ್ನಡೆಯಾಗಲಿದೆ.

ಇದನ್ನೂ ಓದಿ:ಪಾಕಿಸ್ತಾನ ವಿರುದ್ಧ ಟೆಸ್ಟ್​ ಸರಣಿ ಕ್ಲೀನ್ ಸ್ವೀಪ್​ ನಮ್ಮ ಗುರಿ: ನೇಥನ್ ಲಿಯಾನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.