ETV Bharat / sports

ಬದಲಿ ಆಟಗಾರನಾಗಿ ಭಾರತ U19 ತಂಡಕ್ಕೆ ವಾಸು ವತ್ಸ್ ಸೇರ್ಪಡೆಗೆ ಐಸಿಸಿ ಸಮ್ಮತಿ

ಪರಾಕ್​ ಕೋವಿಡ್​ ಪಾಸಿಟಿವ್ ಪಡೆದು ಐಸೊಲೇಷನ್​​ನಲ್ಲಿ ಇರುವುದರಿಂದ ವಾಸು ಅವರನ್ನು ಕೇವಲ ತಾತ್ಕಾಲಿಕ ಬದಲಿ ಆಟಗಾರನಾಗಿ ತಂಡ ಸೇರುವುದಕ್ಕೆ ಐಸಿಸಿ ಒಪ್ಪಿದೆ.

India's Vasu Vats approved as COVID replacement player
ಅಂಡರ್​ 19 ವಿಶ್ವಕಪ್​
author img

By

Published : Jan 22, 2022, 7:57 PM IST

ಟ್ರಿನಿಡಾಡ್​: ಭಾರತ ಅಂಡರ್​ 19 ವಿಶ್ವಕಪ್​ ತಂಡದಲ್ಲಿ ಕೋವಿಡ್​ಗೆ ತುತ್ತಾಗಿರುವ ಮನವ್​ ಪರಾಕ್​​ ಅವರ ಬದಲೀ ಆಟಗಾರನಾಗಿ ಉತ್ತರ ಪ್ರದೇಶದ ಆಲ್​ರೌಂಡರ್​ ವಾಸು ವತ್ಸ್​ ಭಾರತ ತಂಡ ಸೇರುವುದಕ್ಕೆ ಐಸಿಸಿ ತಾಂತ್ರಿಕ ಸಮಿತಿ ಒಪ್ಪಿಗೆ ಸೂಚಿಸಿದೆ.

ಪರಾಕ್​ ಕೋವಿಡ್​ ಪಾಸಿಟಿವ್ ಪಡೆದು ಐಸೊಲೇಷನ್​​ನಲ್ಲಿರುವುದರಿಂದ ವಾಸು ಅವರನ್ನು ಕೇವಲ ತಾತ್ಕಾಲಿಕ ಬದಲೀ ಆಟಗಾರನಾಗಿ ತಂಡ ಸೇರುವುದಕ್ಕೆ ಸಮಿತಿ ಒಪ್ಪಿದೆ.

"ಕೋವಿಡ್​ ಬದಲಿ ಆಟಗಾರ ಕೇವಲ ತಾತ್ಕಾಲಿಕವಷ್ಟೇ, ಕೋವಿಡ್​ ಪಾಸಿಟಿವ್ ಹೊಂದಿರುವ ಆಟಗಾರ ಚೇತರಿಸಿಕೊಂಡು ತಂಡಕ್ಕೆ ಮರಳಲು ಸಮರ್ಥನಾದರೆ, ಈ ತಾತ್ಕಾಲಿಕ ಆಟಗಾರನ ಜಾಗಕ್ಕೆ ಮರಳಬೇಕು" ಎಂದು ಸಮಿತಿ ಹೇಳಿಕೆ ಬಿಡುಗಡೆ ಮಾಡಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಕೆರಿಬಿಯನ್​ ನಾಡಿನಲ್ಲಿ ನಡೆಯುತ್ತಿರುವ ಕಿರಿಯರ ವಿಶ್ವಕಪ್​ನಲ್ಲಿ ಭಾರತ ತನ್ನ 2ನೇ ಪಂದ್ಯದಲ್ಲಿ ಐರ್ಲೆಂಡ್​ ವಿರುದ್ಧ ಕಣಕ್ಕಿಳಿಯುವ ಮುನ್ನ ನಾಯಕ ಯಶ್ ಧುಲ್​. ಉಪನಾಯಕ ಶೇಖ್ ರಶೀದ್​ ಸೇರಿದಂತೆ 6 ಮಂದಿಗೆ ಕೋವಿಡ್​ ದೃಢಪಟ್ಟಿತ್ತು. ಹಾಗಾಗಿ ಉಳಿದ ಎಲ್ಲಾ 11 ಆಟಗಾರರು ಆ ಪಂದ್ಯದಲ್ಲಿ ಆಡಿದ್ದರು.

ಬಿ ಗುಂಪಿನಲ್ಲಿರುವ ಭಾರತ ತನ್ನ ಮೊದಲೆರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್ ವಿರುದ್ಧ ಗೆದ್ದು ಅಗ್ರಸ್ಥಾನದಲ್ಲಿದೆ. ಶನಿವಾರ ಉಗಾಂಡ ವಿರುದ್ಧ ಕಣಕ್ಕಿಳಿದಿದ್ದು, ಈ ಪಂದ್ಯವನ್ನು ಭಾರತವೇ ಗೆಲ್ಲುವ ಅವಕಾಶ ಹೆಚ್ಚಿದ್ದು, ಅಗ್ರಸ್ಥಾನ ಉಳಿಸಿಕೊಳ್ಳಲಿದೆ. ಹಾಗಾಗಿ ಕ್ವಾರ್ಟರ್ ಫೈನಲ್​​ನಲ್ಲಿ ಬಾಂಗ್ಲಾದೇಶದ ವಿರುದ್ಧ ಸೆಣಸಲಿದೆ.

ಇದನ್ನೂ ಓದಿ: ಐಸಿಸಿ ಅಂಡರ್​ 19 ವಿಶ್ವಕಪ್​ : ವರುಣನ ಅಬ್ಬರದ ನಡುವೆಯೂ ಐರ್ಲೆಂಡ್​​​ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.