ನವದೆಹಲಿ : ಜೂನ್ 9ರಿಂದ ತವರಿನಲ್ಲಿ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ-20 ಸರಣಿಗೆ ಭಾರತ ತಂಡವನ್ನು ಘೋಷಿಸಲಾಗಿದ್ದು, ಯುವಪಡೆಗೆ ಮಣೆ ಹಾಕಲಾಗಿದೆ. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಯ ಕೊನೆಯ ಪಂದ್ಯ ಕೋವಿಡ್ ಕಾರಣ ರದ್ದಾಗಿತ್ತು. ಇದೀಗ ಆ ಪಂದ್ಯಕ್ಕೂ ತಂಡವನ್ನು ಘೋಷಿಸಲಾಗಿದೆ.
ಹಿರಿಯರಿಗೆ ವಿಶ್ರಾಂತಿ : ಇಂದು ನಡೆದ ಆಯ್ಕೆ ಮಂಡಳಿಯ ಸಭೆಯಲ್ಲಿ ಐಪಿಎಲ್ನಲ್ಲಿ ಮಿಂಚಿದ ಹೊಸ ಪ್ರತಿಭೆಗಳಿಗೆ ಆಯ್ಕೆಗಾರರು ಮಣೆ ಹಾಕಿದ್ದಲ್ಲದೇ, ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ತಂಡದ ಕಾಯಂ ಮತ್ತು ಹಿರಿಯ ಆಟಗಾರರಾದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ, ಮಹಮ್ಮದ್ ಶಮಿ, ಶಿಖರ್ ದವನ್ಗೆ ವಿಶ್ರಾಂತಿ ನೀಡಲಾಗಿದೆ.
-
🚨 NEWS 🚨: India’s squad for @Paytm T20I series against South Africa and squad for 5th Test against England announced. #TeamIndia
— BCCI (@BCCI) May 22, 2022 " class="align-text-top noRightClick twitterSection" data="
More Details 🔽https://t.co/XNJ41Mhh8D
">🚨 NEWS 🚨: India’s squad for @Paytm T20I series against South Africa and squad for 5th Test against England announced. #TeamIndia
— BCCI (@BCCI) May 22, 2022
More Details 🔽https://t.co/XNJ41Mhh8D🚨 NEWS 🚨: India’s squad for @Paytm T20I series against South Africa and squad for 5th Test against England announced. #TeamIndia
— BCCI (@BCCI) May 22, 2022
More Details 🔽https://t.co/XNJ41Mhh8D
ಹೊಸ ಪ್ರತಿಭೆಗಳಿಗೆ ಮಣೆ : ಇನ್ನು ಐಪಿಎಲ್ನಲ್ಲಿ ಮಿಂಚು ಹರಿಸಿದ ಯುವ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ತಂಡದಲ್ಲಿ ಮತ್ತೊಮ್ಮೆ ಸ್ಥಾನ ಪಡೆದ ಋತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ರವಿ ಬಿಷ್ಣೋಯಿ, ಹರ್ಷಲ್ ಪಟೇಲ್ಗೆ ಮತ್ತೊಂದು ಅವಕಾಶ ನೀಡಲಾಗಿದೆ.
ಉಮ್ರಾನ್ ಮಲಿಕ್ಗೆ ಒಲಿದ ಭಾಗ್ಯ : ಈ ಸೀಸನ್ ಐಪಿಎಲ್ನಲ್ಲಿ ತನ್ನ ವೇಗದ ಮೂಲಕವೇ ಮಿಂಚು ಹರಿಸಿದ ಉಮ್ರಾನ್ ಮಲಿಕ್ಗೆ ಆಯ್ಕೆಗಾರರು ಅಸ್ತು ಎಂದಿದ್ದಾರೆ. ಹೈದರಾಬಾದ್ ವೇಗಿ ಪರ ಮಾಜಿ ಆಟಗಾರರು ಬ್ಯಾಟ್ ಬೀಸಿದ್ದು, ಇದೀಗ ಟಿ-20 ತಂಡದಲ್ಲಿ ಸ್ಥಾನ ನೀಡಲಾಗಿದೆ. ಎಡಗೈ ವೇಗಿ ಹರ್ಷದೀಪ್ ಸಿಂಗ್ ಗೆ ಚೊಚ್ಚಲ ಅವಕಾಶ ದೊರೆತಿದೆ.
-
TEST Squad - Rohit Sharma (Capt), KL Rahul (VC), Shubman Gill, Virat Kohli, Shreyas Iyer, Hanuma Vihari, Cheteshwar Pujara, Rishabh Pant (wk), KS Bharat (wk), R Jadeja, R Ashwin, Shardul Thakur, Mohd Shami, Jasprit Bumrah, Mohd Siraj, Umesh Yadav, Prasidh Krishna #ENGvIND
— BCCI (@BCCI) May 22, 2022 " class="align-text-top noRightClick twitterSection" data="
">TEST Squad - Rohit Sharma (Capt), KL Rahul (VC), Shubman Gill, Virat Kohli, Shreyas Iyer, Hanuma Vihari, Cheteshwar Pujara, Rishabh Pant (wk), KS Bharat (wk), R Jadeja, R Ashwin, Shardul Thakur, Mohd Shami, Jasprit Bumrah, Mohd Siraj, Umesh Yadav, Prasidh Krishna #ENGvIND
— BCCI (@BCCI) May 22, 2022TEST Squad - Rohit Sharma (Capt), KL Rahul (VC), Shubman Gill, Virat Kohli, Shreyas Iyer, Hanuma Vihari, Cheteshwar Pujara, Rishabh Pant (wk), KS Bharat (wk), R Jadeja, R Ashwin, Shardul Thakur, Mohd Shami, Jasprit Bumrah, Mohd Siraj, Umesh Yadav, Prasidh Krishna #ENGvIND
— BCCI (@BCCI) May 22, 2022
ಮರಳಿದ ಕಾರ್ತಿಕ್, ಪಾಂಡ್ಯ : ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ತಂಡಕ್ಕೆ ಮರಳಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದ ತಂಡದಿಂದ ಹೊರಗಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿ ಗುಜಾರಾತ್ನ ಮುನ್ನಡೆಸಿ ಬೌಲಿಂಗ್ ಕೂಡ ಮಾಡಿ ಫಿಟ್ ಇರುವುದಾಗಿ ಸಂದೇಶ ರವಾನಿಸಿದ್ದಾರೆ. ಆರ್‌ಸಿಬಿಯಲ್ಲಿ ಫಿನಿಷರ್ ಆಗಿ ಕಂಡು ಬಂದ ದಿನೇಶ್ ಕಾರ್ತಿಕ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂಲಕ ಮೂರು ವರ್ಷಗಳ ನಂತರ ದಿನೇಶ್ ಕಾರ್ತಿಕ್ ತಂಡಕ್ಕೆ ಮಳಿದ್ದಾರೆ. 191.33ರ ಬ್ಯಾಟಿಂಗ್ ಸ್ಟ್ರೈಕ್ ರೇಟ್‌ನೊಂದಿಗೆ ಈ ಐಪಿಎಲ್ ಆವೃತ್ತಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.
ಟಿ-20 ತಂಡ : ಕೆ ಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ) (ವಿಕೇಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೇಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಆರ್ ಬಿಷ್ಣೋಯ್, ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.
-
T20I Squad - KL Rahul (Capt), Ruturaj Gaikwad, Ishan Kishan, Deepak Hooda, Shreyas Iyer, Rishabh Pant(VC) (wk),Dinesh Karthik (wk), Hardik Pandya, Venkatesh Iyer, Y Chahal, Kuldeep Yadav, Axar Patel, R Bishnoi, Bhuvneshwar, Harshal Patel, Avesh Khan, Arshdeep Singh, Umran Malik
— BCCI (@BCCI) May 22, 2022 " class="align-text-top noRightClick twitterSection" data="
">T20I Squad - KL Rahul (Capt), Ruturaj Gaikwad, Ishan Kishan, Deepak Hooda, Shreyas Iyer, Rishabh Pant(VC) (wk),Dinesh Karthik (wk), Hardik Pandya, Venkatesh Iyer, Y Chahal, Kuldeep Yadav, Axar Patel, R Bishnoi, Bhuvneshwar, Harshal Patel, Avesh Khan, Arshdeep Singh, Umran Malik
— BCCI (@BCCI) May 22, 2022T20I Squad - KL Rahul (Capt), Ruturaj Gaikwad, Ishan Kishan, Deepak Hooda, Shreyas Iyer, Rishabh Pant(VC) (wk),Dinesh Karthik (wk), Hardik Pandya, Venkatesh Iyer, Y Chahal, Kuldeep Yadav, Axar Patel, R Bishnoi, Bhuvneshwar, Harshal Patel, Avesh Khan, Arshdeep Singh, Umran Malik
— BCCI (@BCCI) May 22, 2022
ಟೆಸ್ಟ್ ತಂಡದಲ್ಲೂ ಕೆಲ ಬದಲಾವಣೆ : ಜುಲೈ 1ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಎಲ್ಲ ಪ್ರಮುಖ ಐದನೇ ಟೆಸ್ಟ್‌ಗೆ ತಂಡದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿದೆ. ರೋಹಿತ್ ಶರ್ಮಾ ನಾಯಕತ್ವ ವಹಿಸಲಿದ್ದು, ಕೆ ಎಲ್ ರಾಹುಲ್ಗೆ ಉಪ ನಾಯಕನ ಸ್ಥಾನ ನೀಡಲಾಗಿದೆ. ಟೆಸ್ಟ್ ಆಡುವ ಮೊದಲು ಇಂಗ್ಲೆಂಡ್ನಲ್ಲಿ ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗಿದೆ.
ಜುಲೈ-ಸೆಪ್ಟೆಂಬರ್ 2021ರಲ್ಲಿ 2-1 ಮುನ್ನಡೆ ಸಾಧಿಸಿದ ತಂಡದಲ್ಲಿ ಕೆಲವು ಬದಲಾವಣೆಗಳಿವೆ. ಮಯಾಂಕ್ ಅಗರ್ವಾಲ್ ಬದಲಿಗೆ ಶುಭಮನ್ ಗಿಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶ್ರೇಯಸ್ ಅಯ್ಯರ್ ಗಾಯಗೊಂಡ ಅಜಿಂಕ್ಯ ರಹಾನೆ ಅವರ ಮಧ್ಯಮ ಕ್ರಮಾಂಕದ ಜವಾಬ್ದಾರಿ ನೀಡಲಾಗಿದೆ. ವೃದ್ಧಿಮಾನ್ ಸಹಾ ಬದಲಿಗೆ ಕೆ ಎಸ್ ಭರತ್ ತಂಡದಲ್ಲಿ ಎರಡನೇ ಕೀಪರ್ ಸೇರಿಸಲಾಗಿದೆ. ಗಾಯದ ಕಾರಣಕ್ಕೆ ಬದಲಿಯಾಗಿ ಕರೆಸಿಕೊಂಡಿದ್ದ ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ ಜೋಡಿಯನ್ನು ಸೇರಿಸಿಕೊಳ್ಳಲಾಗಿಲ್ಲ.
ಟೆಸ್ಟ್ ತಂಡ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ್ ಪೂಜಾರ, ರಿಷಬ್ ಪಂತ್ (ವಿಕೇಟ್ ಕೀಪರ್), ಕೆಎಸ್ ಭರತ್ (ವಿಕೇಟ್ ಕೀಪರ್), ಆರ್ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ ಆಡಲಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಥಾಮಸ್ ಕಪ್ ಗೆದ್ದ ಬ್ಯಾಡ್ಮಿಂಟನ್ ಚಾಂಪಿಯನ್ಗಳೊಂದಿಗೆ ಮೋದಿ ಸಂವಾದ