ETV Bharat / sports

ಒಬ್ಬ ಬೌಲರ್​ ಬಿಡಿ, ಸೂರ್ಯಕುಮಾರ್​ರನ್ನು 4ನೇ ಟೆಸ್ಟ್​ನಲ್ಲಿ 6ನೇ ಕ್ರಮಾಂಕದಲ್ಲಿ ಆಡಿಸಿ: ವೆಂಗಸರ್ಕರ್​ - ವಿರಾಟ್ ಕೊಹ್ಲಿ

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 44ಗಿಂತಲೂ ಹೆಚ್ಚು ರನ್‌​ ಸರಾಸರಿ ಹೊಂದಿರುವ ಸೂರ್ಯಕುಮಾರ್​ ಯಾದವ್​ 4ನೇ ಟೆಸ್ಟ್​ನಲ್ಲಿ ಭಾರತ ತಂಡ ಸೇರಿಕೊಂಡರೆ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠಗೊಳ್ಳಲಿದೆ. ಕೌಶಲ್ಯಗಳ ಆಧಾರದ ಮೇಲೆ ಈ ತಂಡಕ್ಕೆ ಸೂರ್ಯಕುಮಾರ್ ಸರಿಯಾಗಿ ಹೊಂದಿಕೊಳ್ಳಲಿದ್ದಾರೆ ಎಂದು ವೆಂಗ್​ಸರ್ಕರ್​ ಅಭಿಪ್ರಾಯಪಟ್ಟಿದ್ದಾರೆ.

Dilip Vengsarkar on Surya
ಸೂರ್ಯಕುಮಾರ್ ಯಾದವ್​
author img

By

Published : Aug 29, 2021, 4:13 PM IST

ಮುಂಬೈ: ಭಾರತ ತಂಡ 3ನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದಿಂದ ಸೋಲು ಕಂಡಿದೆ. ಈ ಕಾರಣದಿಂದ ಮುಂಬೈನ ಸ್ಟೈಲಿಷ್‌ ಬ್ಯಾಟ್ಸ್​ಮನ್ ಸೂರ್ಯಕುಮಾರ್ ಯಾದವ್​ ಅವರನ್ನು ಓವಲ್​ ಟೆಸ್ಟ್​ನಲ್ಲಿ 6ನೇ ಬ್ಯಾಟ್ಸ್​ಮನ್ ಆಗಿ ಆಡಿಸಬೇಕೆಂದು ಮಾಜಿ ನಾಯಕ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ದಿಲೀಪ್ ವೆಂಗ್​ಸರ್ಕರ್​ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​ಗೆ ಸಲಹೆ ನೀಡಿದ್ದಾರೆ.

ಭಾರತ ತಂಡ ಹೆಡಿಂಗ್ಲೆಯಲ್ಲಿ ನಡೆದ 3ನೇ ಟೆಸ್ಟ್​ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದ ವೈಫಲ್ಯದಿಂದ ಇನ್ನಿಂಗ್ಸ್ ಮತ್ತು 76 ರನ್​ಗಳಿಂದ ಸೋಲು ಕಂಡಿತ್ತು.

"4ನೇ ಟೆಸ್ಟ್​ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಬಲಿಷ್ಠವಾಗಬೇಕೆಂದರೆ ಹನುಮ ವಿಹಾರಿಗಿಂತ ಸೂರ್ಯಕುಮಾರ್ ಯಾದವ್​ ಸೇರ್ಪಡೆ ಮಾಡಿಕೊಳ್ಳಬೇಕೆಂದು ನಾನು ದೃಢವಾಗಿ ನಂಬುತ್ತೇನೆ. ನಾವು ಒಬ್ಬ ಬೌಲರ್ ​ಅನ್ನು ಕೈಬಿಟ್ಟು 6 ಬ್ಯಾಟ್ಸ್​ಮನ್​ಗಳೊಂದಿಗೆ ಹೋಗಬಹುದು" ಎಂದು ಭಾರತ ಕಂಡ ಶ್ರೇಷ್ಠ ಆಯ್ಕೆ ಸಮಿತಿ ಅಧ್ಯಕ್ಷರಾದ ವೆಂಗ್​ಸರ್ಕರ್​ ಪಿಟಿಐ ಜೊತೆಗಿನ ಸಂವಾದದಲ್ಲಿ ಹೇಳಿದ್ದಾರೆ.

ವಿಶೇಷವೆಂದರೆ, ಇದೇ ಅಭಿಪ್ರಾಯವನ್ನು ಬ್ಯಾಟಿಂಗ್ ಶ್ರೇಷ್ಠ ಸುನೀಲ್ ಗವಾಸ್ಕರ್​ ಕೂಡ ಹೇಳಿದ್ದರು. ಅವರು ಒಬ್ಬ ಬೌಲರ್​ ಕಡಿಮೆ ಮಾಡಿ 6 ಬ್ಯಾಟ್ಸ್​ಮನ್​ಗಳೊಂದಿಗೆ ಹೋಗಬೇಕೆಂಬ ಥಿಯರಿಯನ್ನು ಪ್ರತಿಪಾದಿಸಿದ್ದರು.

"ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 44 ಪ್ಲಸ್​ ಸರಾಸರಿ ಹೊಂದಿರುವ ಸೂರ್ಯಕುಮಾರ್​ ಯಾದವ್​ 4ನೇ ಟೆಸ್ಟ್​ನಲ್ಲಿ ಭಾರತ ತಂಡ ಸೇರಿಕೊಂಡರೆ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠಗೊಳ್ಳಲಿದೆ. ಕೌಶಲ್ಯಗಳ ಆಧಾರದ ಮೇಲೆ ಈ ತಂಡಕ್ಕೆ ಸೂರ್ಯಕುಮಾರ್ ಸರಿಯಾಗಿ ಹೊಂದಿಕೊಳ್ಳಲಿದ್ದಾರೆ. ಮತ್ತು ಅವರು ಸ್ವಲ್ಪ ಸಮಯದಿಂದ ಇರುವುದರಿಂದ ತಡವಾಗುವ ಮುನ್ನ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು" ಎಂದು ವೆಂಗ್​ಸರ್ಕರ್​ ಹೇಳುತ್ತಾರೆ.

ಇನ್ನು ಅಶ್ವಿನ್​ರನ್ನು ಸರಣಿಯಲ್ಲಿ ಒಂದೂ ಪಂದ್ಯದಲ್ಲಿ ಪರಿಗಣಿಸದಿರುವುದು ನನಗೆ ಆಶ್ಚರ್ಯವನ್ನುಂಟು ಮಾಡಿದೆ ಎಂದು ದಿಲೀಪ್​ ಹೇಳಿದ್ದಾರೆ. ​ "ಸರಣಿಯಲ್ಲಿ ಇಲ್ಲಿಯವರೆಗೆ ಅಶ್ವಿನ್​ರನ್ನು ಏಕೆ ಆಯ್ಕೆ ಮಾಡಲಾಗಿಲ್ಲ ಎನ್ನುವುದು ನನಗೆ ನಿಗೂಢವಾಗಿದೆ?, ನೀವು ಆಡುವ 11ರ ಬಳಗದಲ್ಲಿ ನಿಮ್ಮ ಅತ್ಯುತ್ತಮ ಸ್ಪಿನ್​ ಬೌಲರ್​ಅನ್ನು ಬಿಟ್ಟು ಆಡುತ್ತಿರುವುದು ನನಗೆ ಜೀರ್ಣಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ ಎಂದು ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.