ETV Bharat / sports

IND vs SA 3rd Test: ಫೈನಲ್​ ಟೆಸ್ಟ್​ ಆಡಲು ಕೇಪ್​ಟೌನ್​ಗೆ ಬಂದ ಕೊಹ್ಲಿ ಪಡೆಗೆ ಅದ್ಧೂರಿ ಸ್ವಾಗತ - ಭಾರತ ಆಫ್ರಿಕಾ ಮೂರನೇ ಟೆಸ್ಟ್​​ ಪಂದ್ಯ

India tour of South Africa: ಫೈನಲ್​ ಪಂದ್ಯವನ್ನಾಡಲು ಕೇಪ್​ಟೌನ್​ಗೆ ಬಂದಿಳಿದಿರುವ ಟೀಂ ಇಂಡಿಯಾಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಅದರ ವಿಡಿಯೋ ತುಣುಕವೊಂದನ್ನ ಬಿಸಿಸಿಐ ತನ್ನ ಟ್ವಿಟರ್​​ನಲ್ಲಿ ಶೇರ್ ಮಾಡಿದೆ.

India tour of South Africa
India tour of South Africa
author img

By

Published : Jan 8, 2022, 10:07 PM IST

ಕೇಪ್​ಟೌನ್​(ದಕ್ಷಿಣ ಆಫ್ರಿಕಾ): ಹರಿಣಗಳ ವಿರುದ್ಧ ಫೈನಲ್​​ ಟೆಸ್ಟ್​​ ಪಂದ್ಯವನ್ನಾಡಲು ಟೀಂ ಇಂಡಿಯಾ ಇದೀಗ ದಕ್ಷಿಣ ಆಫ್ರಿಕಾದ ಕೇಪ್​ಟೌನ್​​ಗೆ ಬಂದಿಳಿದಿದ್ದು, ಹೋಟೆಲ್​​ನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.

ಜೋಹಾನ್ಸ್​ಬರ್ಗ್​​ನಲ್ಲಿ ಎರಡನೇ ಟೆಸ್ಟ್​​ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ವಿರಾಟ್​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಕೇಪ್​ಟೌನ್​​ಗೆ ಆಗಮಿಸಿದ್ದು, ಹೋಟೆಲ್​​ನಲ್ಲಿ ಭವ್ಯ ಸ್ವಾಗತ ನೀಡಲಾಗಿದೆ. ಭಾರತದ ಪ್ಲೇಯರ್ಸ್​ ಹೋಟೆಲ್​​ನೊಳಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಂತೆ ಸಂಗೀತಗಾರರು ದಕ್ಷಿಣ ಆಫ್ರಿಕಾದ ಸಾಂಪ್ರದಾಯಿಕ ಶೈಲಿಯಲ್ಲಿ ಹಾಡುವ ಮೂಲಕ ಅವರನ್ನ ವೆಲ್​ಕಮ್​ ಮಾಡಿಕೊಂಡಿದ್ದಾರೆ. ಇದರ ವಿಡಿಯೋ ತುಣುಕೊಂದನ್ನ ಬಿಸಿಸಿಐ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದೆ.

ಜನವರಿ 11ರಿಂದ ಕೇಪ್​ಟೌನ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಟೆಸ್ಟ್​​ ಪಂದ್ಯ ಆರಂಭಗೊಳ್ಳಿದ್ದು, ಉಭಯ ತಂಡದ ಪ್ಲೇಯರ್ಸ್​​​ ಕೋವಿಡ್ ಪ್ರೋಟೋಕಾಲ್​ ಪಾಲನೆ ಮಾಡುವ ಮೂಲಕ ಕೇಪ್​ಟೌನ್​ಗೆ ಆಗಮಿಸಿವೆ.

ಇದನ್ನೂ ಓದಿರಿ: ಈ ಹುಂಜದ ಬೆಲೆ ಬರೋಬ್ಬರಿ 2.6 ಲಕ್ಷ ರೂಪಾಯಿ.. ಅಂತಹದ್ದೇನಿದೆ ಇದರಲ್ಲಿ!?

ಮೂರು ಟೆಸ್ಟ್​​ ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದಲ್ಲಿ ಸಲಬಲ ಸಾಧಿಸಿದ್ದು, ಫೈನಲ್​ ಪಂದ್ಯದಲ್ಲಿ ಗೆಲ್ಲುವ ತಂಡ ಚಾಂಪಿಯನ್​​ ಆಗಲಿದೆ. ಕೇಪ್​ಟೌನ್​​ನಲ್ಲಿ ಇಲ್ಲಿಯವರೆಗೆ ಏಷ್ಯನ್​ ತಂಡ ಯಾವುದೇ ಟೆಸ್ಟ್​​ ಪಂದ್ಯ ಗೆದ್ದಿಲ್ಲ. ಆದರೆ, ವಿರಾಟ್​ ಕೊಹ್ಲಿ ನೆತೃತ್ವದ ಟೀಂ ಇಂಡಿಯಾ ಹೊಸ ಇತಿಹಾಸ ರಚನೆ ಮಾಡಲು ಇದೀಗ ಸಜ್ಜುಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.