ಸೌತಾಂಪ್ಟನ್: ಭಾರತ - ನ್ಯೂಜಿಲ್ಯಾಂಡ್ ತಂಡಗಳ ನಡುವೆ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಆರನೇ ದಿನದಾಟ ನಡೆಯುತ್ತಿದೆ. ಎರಡನೇ ಇನ್ನಿಂಗ್ಸ್ನಲ್ಲಿ ಕೊಹ್ಲಿ ಪಡೆ 170 ರನ್ಗಳಿಗೆ ಸರ್ವಪತನಗೊಂಡಿದ್ದು, ಎದುರಾಳಿ ತಂಡಕ್ಕೆ 139 ರನ್ಗಳ ಸಾಧಾರಣ ಗುರಿ ನೀಡಿದೆ.
ನಿನ್ನೆ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ ಇಂದು ಬ್ಯಾಟಿಂಗ್ ಮುಂದುವರೆಸಿತು. ಆದರೆ, ನ್ಯೂಜಿಲ್ಯಾಂಡ್ ಬೌಲಿಂಗ್ ದಾಳಿಗೆ ತತ್ತರಿಸಿ ಮೇಲಿಂದ ಮೇಲೆ ವಿಕೆಟ್ ಕಳೆದು ಕೊಂಡಿತ್ತು. ವಿರಾಟ್, ಪೂಜಾರಾ ವಿಕೆಟ್ ಪತನಗೊಳ್ಳುತ್ತಿದ್ದಂತೆ ಒದಾದ ಪಂತ್ ಹಾಗೂ ರಹಾನೆ ತಂಡಕ್ಕೆ ಆಸರೆಯಾಗಿದ್ದರು.
-
Indian Meme Guy pic.twitter.com/rCL6TWDBti
— New Zealandennis (@DennisCricket_) June 23, 2021 " class="align-text-top noRightClick twitterSection" data="
">Indian Meme Guy pic.twitter.com/rCL6TWDBti
— New Zealandennis (@DennisCricket_) June 23, 2021Indian Meme Guy pic.twitter.com/rCL6TWDBti
— New Zealandennis (@DennisCricket_) June 23, 2021
ಪಂತ್ - ರಹಾನೆ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದರು. ಆದರೆ, 15 ರನ್ಗಳಿಸಿದ್ದ ಉಪನಾಯಕ ರಹಾನೆ ವಿಕೆಟ್ ಪತನಗೊಳ್ಳುತ್ತಿದ್ದಂತೆ ಅಭಿಮಾನಿಗಳು ಆಶ್ಚರ್ಯಗೊಂಡಿದ್ದು, ನಿರಾಸೆ ವ್ಯಕ್ತಪಡಿಸಿದ್ದಾರೆ. ಸಂತೋಷದಲ್ಲಿ ಸಂಭ್ರಮಿಸುತ್ತಿದ್ದ ಅಭಿಮಾನಿಗಳು ಕ್ಷಣಾರ್ಧದಲ್ಲಿ ಬೇಸರಗೊಂಡಿದ್ದಾರೆ. ಇದರ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಇದನ್ನೂ ಓದಿರಿ: WTC ಫೈನಲ್: ಭಾರತ 170ಕ್ಕೆ ಆಲೌಟ್: ಕಿವೀಸ್ಗೆ 139ರನ್ಗಳ ಸಾಧಾರಣ ಗುರಿ