ಕಾರ್ಡಿಫ್: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕ್ರಿಕೆಟ್ನಲ್ಲಿ ಆವಿಷ್ಕಾರ ಮಾಡಿರುವ ಹೊಸ ಮಾದರಿಯ ನೂರು ಎಸೆತಗಳ ದಿ ಹಂಡ್ರೆಡ್ ಲೀಗ್ನಲ್ಲಿ ಭಾರತದ ಬ್ಯಾಟರ್ಗಳು ಮಿಂಚಿನ ಪ್ರದರ್ಶನ ತೋರುತ್ತಿದ್ದಾರೆ. ಈ ಲೀಗ್ನಲ್ಲಿ 5 ಭಾರತೀಯ ಆಟಗಾರ್ತಿಯರು ಭಾಗವಹಿಸಿದ್ದಾರೆ.
ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂದಾನ, ಜಮಿಮಾ ರೋಡ್ರಿಗಸ್, ಶೆಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ನೂರು ಎಸೆತಗಳ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. ಎರಡು ದಿನಗಳ ಹಿಂದೆ ಯುವ ಆಟಗಾರ್ತಿ ಜಮಿಮಾ ರೋಡ್ರಿಗಸ್ ಸತತ ಎರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ನಾರ್ಥರ್ನ್ ಸೂಪರ್ಚಾರ್ಜಸ್ಗೆ ಗೆಲುವು ತಂದುಕೊಟ್ಟಿದ್ದರು. ಅವರು ಮೊದಲ ಪಂದ್ಯದಲ್ಲಿ 43 ಎಸೆತಗಳಲ್ಲಿ ಅಜೇಯ 92 ರನ್ಗಳಿಸಿದರೆ, ಎರಡನೇ ಪಂದ್ಯದಲ್ಲಿ 41 ಎಸೆತಗಳಲ್ಲಿ 60 ರನ್ಗಳಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಜೊತೆಗೆ ಎರಡೂ ಪಂದ್ಯಗಳಲ್ಲೂ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
-
Jemimah Rodrigues is now my favourite player! 💫#TheHundred
— Kevin Pietersen🦏 (@KP24) July 24, 2021 " class="align-text-top noRightClick twitterSection" data="
">Jemimah Rodrigues is now my favourite player! 💫#TheHundred
— Kevin Pietersen🦏 (@KP24) July 24, 2021Jemimah Rodrigues is now my favourite player! 💫#TheHundred
— Kevin Pietersen🦏 (@KP24) July 24, 2021
ಮಂಗಳವಾರ ನಡೆದ ಪಂದ್ಯದಲ್ಲಿ ಭಾರತದ ಸ್ಟಾರ್ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಸೌಥರ್ನ್ ಬ್ರೇವ್ ವುಮೆನ್ ತಂಡಕ್ಕೆ ವೆಲ್ಷ್ ಫೈಋ್ ತಂಡದ ವಿರುದ್ಧ 8 ವಿಕೆಟ್ಗಳ ಗೆಲುವು ತಂದುಕೊಟ್ಟಿದ್ದಾರೆ. ಅವರು ಈ ಪಂದ್ಯದಲ್ಲಿ 39 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ಗಳ ಸಹಿತ ಅಜೇಯ 61 ರನ್ ಸಿಡಿಸಿದ್ದರು.
ಇನ್ನು ಭಾರತ ತಂಡ ನಾಯಕಿ ಹರ್ಮನ್ ಪ್ರೀತ್ ಕೌರ್ ಕೂಡ ಆಡಿರುವ ಎರಡೂ ಪಂದ್ಯಗಳಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಆದರೆ, ಇತರ ಆಟಗಾರ್ತಿಯ ಬೆಂಬಲದ ಕೊರತೆಯಿಂದಾಗಿ ಅವರ ತಂಡ ಸೋಲು ಕಂಡಿದೆ. ಅವರು ಮೊದಲ ಪಂದ್ಯದಲ್ಲಿ 16 ಎಸೆತಗಳಲ್ಲಿ 29 ಮತ್ತು ಎರಡನೇ ಪಂದ್ಯದಲ್ಲಿ ಅಜೇಯ 49 ರನ್ಗಳಿಸಿದ್ದಾರೆ.
-
🏏 @mandhana_smriti against Welsh Fire:
— The Hundred (@thehundred) July 27, 2021 " class="align-text-top noRightClick twitterSection" data="
61 runs
39 balls
5 fours
3 sixes#TheHundred domination 🔥 pic.twitter.com/RBXdrPgCt1
">🏏 @mandhana_smriti against Welsh Fire:
— The Hundred (@thehundred) July 27, 2021
61 runs
39 balls
5 fours
3 sixes#TheHundred domination 🔥 pic.twitter.com/RBXdrPgCt1🏏 @mandhana_smriti against Welsh Fire:
— The Hundred (@thehundred) July 27, 2021
61 runs
39 balls
5 fours
3 sixes#TheHundred domination 🔥 pic.twitter.com/RBXdrPgCt1
ಇನ್ನು ಆಲ್ರೌಂಡರ್ ದೀಪ್ತಿ ಶರ್ಮಾ ಮೊದಲ ಪಂದ್ಯದಲ್ಲಿ 28 ರನ್ ಮತ್ತು ಒಂದು ವಿಕೆಟ್ ಪಡೆದರೆ, ಎರಡನೇ ಪಂದ್ಯದಲ್ಲಿ ಒಂದು ವಿಕೆಟ್ ಪಡೆದು ಮಿಂಚಿದ್ದರು. ಟಿ-20 ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಸ್ಫೋಟಕ ಬ್ಯಾಟರ್ ಶೆಪಾಲಿ ವರ್ಮಾ ಮಾತ್ರ ಈ ಟೂರ್ನಿಯಲ್ಲಿ ಇನ್ನೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಆದರೆ, ಶೆಫಾಲಿ ಲೀಗ್ನಲ್ಲಿ ಕ್ರಮವಾಗಿ 13 ಮತ್ತು 6 ರನ್ಗಳಿಸಿದ್ದಾರೆ.
ಇದನ್ನು ಓದಿ:17 ಬೌಂಡರಿ , 1 ಸಿಕ್ಸರ್ ಸಹಿತ 43 ಎಸೆತಗಳಲ್ಲಿ 92ರನ್ ಚಚ್ಚಿದ ಜೆಮಿಮಾ ರೋಡ್ರಿಗಸ್