ಮೆಲ್ಬೋರ್ನ್(ಆಸ್ಟ್ರೇಲಿಯಾ): ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ 71 ರನ್ಗಳಿಂದ ಗೆಲುವು ಸಾಧಿಸಿ, 8 ಅಂಕಗಳೊಂದಿಗೆ ಗ್ರೂಪ್ 2 ರ ಅಗ್ರಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿತು. ಭಾರತದ ಕರಾರುವಾಕ್ ಬೌಲಿಂಗ್ ದಾಳಿಗೆ ಕುಸಿದ ಕ್ರಿಕೆಟ್ ಶಿಶು ಅಲ್ಪಮೊತ್ತಕ್ಕೆ ಆಲೌಟ್ ಆಗಿ ಟೂರ್ನಿಯಿಂದ ಹೊರಬಿತ್ತು.
ಸೂರ್ಯಕುಮಾರ್, ಕೆಎಲ್ ರಾಹುಲ್ ಬ್ಯಾಟಿಂಗ್ಗೆ ಬೆದರಿದ್ದ ಜಿಂಬಾಬ್ವೆ, ಬಳಿಕ ಆರ್.ಅಶ್ವಿನ್ ಸ್ಪಿನ್ ಅಸ್ತ್ರ ಮತ್ತು ಮೊಹಮದ್ ಶಮಿ, ಹಾರ್ದಿಕ್ ಪಾಂಡ್ಯಾ ವೇಗದ ದಾಳಿಗೆ ಮುದುರಿತು. ಮೊದಲು ಬ್ಯಾಟ್ ಮಾಡಿದ್ದ ಭಾರತ 186 ರನ್ಗಳ ಬೃಹತ್ ಸವಾಲು ನೀಡಿತ್ತು. ಬ್ಯಾಟರ್ಗಳ ವೈಫಲ್ಯದಿಂದ ಜಿಂಬಾಬ್ವೆ 17.2 ಓವರ್ಗಳಲ್ಲಿ 115 ರನ್ ಗಳಿಸಿ ಸೋಲೊಪ್ಪಿಕೊಂಡಿತು.
-
India complete a big win over Zimbabwe to top the Group 2 table! ⚡
— ICC (@ICC) November 6, 2022 " class="align-text-top noRightClick twitterSection" data="
They will meet England in Adelaide in the semi-final 👊#T20WorldCup | #ZIMvIND | https://t.co/SFsHINI2PL pic.twitter.com/J6LxEEx2Ll
">India complete a big win over Zimbabwe to top the Group 2 table! ⚡
— ICC (@ICC) November 6, 2022
They will meet England in Adelaide in the semi-final 👊#T20WorldCup | #ZIMvIND | https://t.co/SFsHINI2PL pic.twitter.com/J6LxEEx2LlIndia complete a big win over Zimbabwe to top the Group 2 table! ⚡
— ICC (@ICC) November 6, 2022
They will meet England in Adelaide in the semi-final 👊#T20WorldCup | #ZIMvIND | https://t.co/SFsHINI2PL pic.twitter.com/J6LxEEx2Ll
ಬಿಗಿ ಬೌಲಿಂಗ್ ದಾಳಿ: ಕಠಿಣ ಗುರಿ ಬೆನ್ನತ್ತಿದ್ದ ಜಿಂಬಾಬ್ವೆ ಮೇಲೆ ಭಾರತೀಯ ಬೌಲರ್ಗಳು ಆರಂಭದಿಂದಲೇ ಸವಾರಿ ಮಾಡಿದರು. ತಂಡ ರನ್ ಖಾತೆ ತೆರೆಯುವುದಕ್ಕೂ ಮೊದಲೇ ಮೊದಲ ಎಸೆತದಲ್ಲೇ ವೆಸ್ಲೈ ಮಧೆವೆರೆಗೆ ಭುವನೇಶ್ವರ್ ಕುಮಾರ್ ಪೆವಿಲಿಯನ್ ದಾರಿ ತೋರಿಸಿದರು. 2 ರನ್ ಆಗಿದ್ದಾಗ ಅರ್ಷದೀಪ್ ಸಿಂಗ್, ರೆಗಿಸ್ ಚಕಬ್ವಾ ವಿಕೆಟ್ ಕಿತ್ತರು. ಇದರಿಂದ ತಂಡ ಒತ್ತಡಕ್ಕೆ ಸಿಲುಕಿ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು.
ರಾಝಾ, ಬರ್ಲ್ ಅಲ್ಪ ಹೋರಾಟ: ತಂಡ ಸತತ ವಿಕೆಟ್ ಕಳೆದುಕೊಂಡು ಕುಸಿದ ಭೀತಿಯಲ್ಲಿದ್ದಾಗ ಸಿಕಂದರ್ ರಾಝಾ ಅಲ್ಪ ಪ್ರತಿರೋಧ ತೋರಿ 3 ಬೌಂಡರಿ ಸಮೇತ 34 ರನ್ ಗಳಿಸಿದರು. ಬಳಿಕ ರ್ಯಾನ್ ಬರ್ಲ್ ಕೂಡ 5 ಬೌಂಡರಿ 1 ಸಿಕ್ಸರ್ಗಳಿಂದ 35 ರನ್ ಚಚ್ಚಿದರು. ಉಳಿದೆಲ್ಲಾ ಬ್ಯಾಟರ್ಗಳು ಒಂದಂಕಿ ರನ್ ಗಳಿಸದೆ ಪೆವಿಲಿಯನ್ ಸೇರಿದರು. ಭಾರತದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 3 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯಾ, ಮೊಹಮದ್ ಶಮಿ 2 ವಿಕೆಟ್ ಪಡೆದರು.
ಸೂರ್ಯನ ಪ್ರಖರ ಬ್ಯಾಟಿಂಗ್: ಇದಕ್ಕೂ ಮೊದಲು ಭಾರತ ಇನಿಂಗ್ಸ್ನಲ್ಲಿ ಸೂರ್ಯಕುಮಾರ್ ಯಾದವ್ ವಿಶ್ವಕಪ್ನಲ್ಲಿ ಅತಿವೇಗದ ಅರ್ಧಶತಕ ಬಾರಿಸಿದ ಭಾರತದ 4ನೇ ಬ್ಯಾಟರ್ ಎಂಬ ದಾಖಲೆ ಬರೆದರು. 25 ಎಸೆತಗಳಲ್ಲಿ 61 ರನ್ ಸಿಡಿಸಿದ ಸೂರ್ಯ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು. ಯಾದವ್ ಬ್ಯಾಟ್ನಿಂದ 4 ಸಿಕ್ಸರ್, 6 ಬೌಂಡರಿ ಸಿಡಿದವು. 48 ರನ್ ಸಿಕ್ಸ್, ಫೋರ್ನಿಂದಲೇ ಬಂದಿದ್ದವು.
ರಾಹುಲ್ ಫಿಫ್ಟಿ ಫೋಬಿಯಾ: ಕನ್ನಡಿಗ ಕೆಎಲ್ ರಾಹುಲ್ ಕೂಡ ಅರ್ಧಶತಕ ಸಾಧನೆ ಮಾಡಿದರು. 35 ಎಸೆತಗಳಲ್ಲಿ ತಲಾ 3 ಬೌಂಡರಿ, ಸಿಕ್ಸರ್ಗಳಿಂದ 51 ರನ್ ಗಳಿಸಿದರು. ಮರು ಎಸೆತದಲ್ಲೇ ಔಟಾಗಿ ಕಳೆದ ಬಾಂಗ್ಲಾದೇಶ ಪಂದ್ಯದಲ್ಲಿ ಔಟಾದದ್ದನ್ನು ಮರುಕಳಿಸಿದರು. ಬಾಂಗ್ಲಾ ವಿರುದ್ಧ 50 ರನ್ ಗಳಿಸಿದ ಮರುಕ್ಷಣವೇ ರಾಹುಲ್ ಔಟಾಗಿದ್ದರು.
ಸೆಮಿಫೈನಲ್ ತಂಡಗಳು: ಇನ್ನು ಗುಂಪು ಹಂತದ ಎಲ್ಲ ಪಂದ್ಯಗಳು ಮಕ್ತಾಯಗೊಂಡಿದ್ದು, ಗ್ರೂಪ್ 1 ರಲ್ಲಿ ನ್ಯೂಜಿಲ್ಯಾಂಡ್, ಇಂಗ್ಲೆಂಡ್, ಗ್ರೂಪ್ 2 ರಲ್ಲಿ ಭಾರತ, ಪಾಕಿಸ್ತಾನ ಸೆಮಿಫೈನಲ್ ತಲುಪಿದವು. ನವೆಂಬರ್ 9 ರಂದು ನಡೆಯುವ ಮೊದಲ ಸೆಮೀಸ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಪಾಕಿಸ್ತಾನ ಎದುರಾದರೆ, ಮರುದಿನ 10 ರಂದು ಅಡಿಲೇಡ್ ಮೈದಾನದಲ್ಲಿ ಭಾರತ- ಇಂಗ್ಲೆಂಡ್ ಕಾದಾಡಲಿವೆ.
ಇದನ್ನೂ ಓದಿ: T20 World Cup: ಸೂರ್ಯಕುಮಾರ್, ರಾಹುಲ್ ಅರ್ಧಶತಕ; ಜಿಂಬಾಬ್ವೆಗೆ 187 ರನ್ ಗುರಿ