ETV Bharat / sports

Shubman Gill: ಬಾಬರ್​ ಅಜಂ ದಾಖಲೆ ಮುರಿದ ಶುಭ್‌ಮನ್‌ ಗಿಲ್; ಏನದು ಗೊತ್ತೇ?

Shubman Gill Record: ಟೀಂ​ ಇಂಡಿಯಾದಲ್ಲಿ ಪ್ಯೂಚರ್​ ಸ್ಟಾರ್​ ಬ್ಯಾಟರ್​ ಎಂದೇ ಕರೆಸಿಕೊಳ್ಳುತ್ತಿರುವ ಶುಭ್‌ಮನ್​ ಗಿಲ್​ ವೆಸ್ಟ್​ ಇಂಡೀಸ್​ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದರು.

Shubman Gill
Shubman Gill
author img

By

Published : Jul 30, 2023, 2:23 PM IST

ಬಾರ್ಬಡೋಸ್ (ವೆಸ್ಟ್​​ ಇಂಡೀಸ್​​): ಭಾರತ ತಂಡದಲ್ಲಿ 'ಪ್ರಿನ್ಸ್'​​ ಎಂದೇ ಕರೆಸಿಕೊಳ್ಳುತ್ತಿರುವ ಯುವ ಪ್ರತಿಭೆ ಶುಭ್‌ಮನ್​ ಗಿಲ್ ಅವರು ವೆಸ್ಟ್​ ಇಂಡೀಸ್​ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ​ ಬ್ಯಾಟರ್​ ಬಾಬರ್ ಅಜಮ್​​​ ದಾಖಲೆ ಮುರಿದರು. ಅಲ್ಲದೇ ಭಾರತದ ಸ್ಟಾರ್​ ಬ್ಯಾಟರ್​ಗಳ ರೆಕಾರ್ಡ್​ಗಳನ್ನೂ ಹಿಮ್ಮೆಟ್ಟಿಸಿದ್ದಾರೆ.

ಕೆನ್ಸಿಂಗ್ಟನ್ ಓವಲ್​ನಲ್ಲಿ ಶನಿವಾರ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿಯಿತು. ಈ ಪಂದ್ಯದಲ್ಲಿ ನಾಯಕ ರೋಹಿತ್​ ಶರ್ಮಾ ಮತ್ತು ವಿರಾಟ್​ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಹೀಗಾಗಿ ಆರಂಭಿಕರಾಗಿ ವಿಕೆಟ್​ ಕೀಪರ್​ ಇಶಾನ್​ ಕಿಶನ್​ ಅವರು ಶುಭ್‌ಮನ್​ ಗಿಲ್​ ಮೈದಾನಕ್ಕಿಳಿದರು. ಈ ಜೋಡಿ ಮೊದಲ ವಿಕೆಟ್​ಗೆ 90 ರನ್​ ಜೊತೆಯಾಟ ಮಾಡಿತ್ತು.

  • Most runs after 26 ODI innings

    1352 - Shubman Gill*
    1322 - Babar Azam
    1303 - Jonathan Trott
    1275 - Fakhar Zaman
    1267 - Rassie van der Dussen#ShubmanGill | #WIvIND

    — Cricbaba (@thecricbaba) July 29, 2023 " class="align-text-top noRightClick twitterSection" data=" ">

34 ರನ್​ ಗಳಿಸಿದ ಗಿಲ್​ ದೊಡ್ಡ ಹೊಡೆತಕ್ಕೆ ಮುಂದಾಗಿ ಬೌಂಡರಿ ಲೈನ್​ ಬಳಿ ಕ್ಯಾಚಿತ್ತು​ ಔಟಾದರು. ಐಪಿಎಲ್​​ನಲ್ಲಿ ಗೋಲ್ಡನ್​ ಫಾರ್ಮ್​ನಲ್ಲಿದ್ದ ಗಿಲ್​ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಸತತ ವೈಫಲ್ಯವನ್ನು ಎದುರಿಸುತ್ತಿದ್ದಾರೆ. ಲೀಗ್​ನಲ್ಲಿ ಈ ವರ್ಷ ಅತಿ ಹೆಚ್ಚು ರನ್​ ಗಳಿಸಿದ ಆಟಗಾರನಾಗಿ ಆರೆಂಜ್​ ಕ್ಯಾಪ್​ ಪ್ಲೇಯರ್​ ಆಗಿದ್ದರು. ಐಪಿಎಲ್​ ನಂತರ ಇವರು​ ಆಡಿದ 7 ಅಂತರರಾಷ್ಟ್ರೀಯ ಪಂದ್ಯಗಳಿಂದ ಕೇವಲ 117 ರನ್​ ಗಳಿಸಿದ್ದಾರೆ. ಅದರಲ್ಲಿ ಅವರ ಉತ್ತಮ ಸ್ಕೋರ್​ ನಿನ್ನೆಯ ಪಂದ್ಯದಲ್ಲಿ ಗಳಿಸಿದ 34 ರನ್​ ಆಗಿದೆ.

ಹೀಗಿದ್ದರೂ ಗಿಲ್​ ಏಕದಿನ ಪಂದ್ಯದಲ್ಲಿ ದಾಖಲೆ ಬರೆದಿದ್ದಾರೆ. ಪಾಕಿಸ್ತಾನದ ಸ್ಟಾರ್​ ಬ್ಯಾಟರ್​​ ಮತ್ತು ಕಳೆದ ಕೆಲ ವರ್ಷಗಳಿಂದ ಏಕದಿನ ಮಾದರಿಯಲ್ಲಿ ಉತ್ತಮ ಲಯದಲ್ಲಿ ಬ್ಯಾಟ್​ ಬೀಸುತ್ತಿರುವ ಬಾಬರ್​ ಅಜಮ್​ ಅವರ ರೆಕಾರ್ಡ್ ಬ್ರೇಕ್​​ ಮಾಡಿದ್ದಾರೆ. ಬಾಬರ್​ ತಮ್ಮ ಫಾರ್ಮ್​ನಿಂದಾಗಿ ಐಸಿಸಿ ನೀಡುವ ಶ್ರೇಯಾಂಕದಲ್ಲೂ ಅಗ್ರ ಸ್ಥಾನದಲ್ಲಿದ್ದಾರೆ. ಗಿಲ್​ ಈ ಅಗ್ರ ಶ್ರೇಯಾಂಕಿತ ಬಾಬರ್​ ಮತ್ತು ಜೊನಾಥನ್ ಟ್ರಾಟ್‌ ಅವರಂತಹ ದಿಗ್ಗಜ ಬ್ಯಾಟರ್​ಗಳ ದಾಖಲೆ ಪುಡಿಗಟ್ಟಿದರು.

ಏಕದಿನ ಕ್ರಿಕೆಟ್​ನ ಮೊದಲ 26 ಇನ್ನಿಂಗ್ಸ್​ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಈ ಹಿಂದೆ ಮೊದಲ ಸ್ಥಾನದಲ್ಲಿದ್ದರು. ಆದರೆ ಇದೀಗ ಈ ದಾಖಲೆ ಮುರಿದಿರುವ ಗಿಲ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. 2019ರಲ್ಲಿ ತಮ್ಮ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಶುಭ್​ಮನ್ 26 ಇನ್ನಿಂಗ್ಸ್‌ಗಳಲ್ಲಿ 61.45ರ ಸರಾಸರಿಯಲ್ಲಿ ಬ್ಯಾಟ್​ ಬೀಸಿ 1,352 ರನ್ ಕಲೆ ಹಾಕಿದ್ದಾರೆ. ಗಿಲ್ ಖಾತೆಯಲ್ಲಿ 1 ದ್ವಿಶತಕ, 4 ಶತಕ ಮತ್ತು 5 ಅರ್ಧಶತಕಗಳು ಸೇರಿವೆ.

ಬಾಬರ್​ ಅಜಮ್​ ಮೊದಲ 26 ಇನ್ನಿಂಗ್ಸ್​ನಲ್ಲಿ 1322 ರನ್​ ಗಳಿಸಿದ್ದರು. ಗಿಲ್​ ಅವರಿಗಿಂತ 30 ರನ್​ ಹೆಚ್ಚು ಕಲೆಹಾಕಿ ಅಗ್ರಸ್ಥಾನಕ್ಕೇರಿದ್ದಾರೆ. ಬಾಬಬರ್​ ನಂತರ ಜೊನಾಥನ್ ಟ್ರಾಟ್ (1303 ರನ್), ಫಾಖರ್ ಜಮಾನ್ (1275 ರನ್) ಮತ್ತು ರಾಸ್ಸೀ ವ್ಯಾನ್ ಡೆರ್ ದುಸ್ಸೆನ್ (1267 ರನ್) ಇದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 2500 ರನ್​ ಪೂರೈಸಿದ ಗಿಲ್​​: ಮೂರು ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುತ್ತಿರುವ ಗಿಲ್​ 2,500 ರನ್​ ಗಡಿಯನ್ನು ವಿಂಡೀಸ್​ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ದಾಟಿದ್ದಾರೆ. ಟೆಸ್ಟ್​ನಲ್ಲಿ 18 ಪಂದ್ಯದಲ್ಲಿ 33 ಇನ್ನಿಂಗ್ಸ್​ ಆಡಿರುವ ಅವರು ಎರಡು ಶತಕಸಹಿತ 966 ರನ್​ ಗಳಿಸಿದ್ದ, 26 ಏಕದಿನ ಇನ್ನಿಂಗ್ಸ್​ನಿಂದ 1352 ರನ್​ ಕಲೆಹಾಕಿದ್ದಾರೆ. ಇನ್ನು ಟಿ20 ಮಾದರಿಯಲ್ಲಿ 6 ಇನ್ನಿಂಗ್ಸ್​​ನಿಂದ ಒಂದು ಶತಕ ಸಹಿತ 202 ರನ್​ ಗಳಿಸಿದ್ದಾರೆ. ಒಟ್ಟಾರೆ ಮೂರು ಮಾದರಿಯಿಂದ 2,520 ರನ್​ ಗಳಿಸಿದ್ದಾರೆ.

ಇದನ್ನೂ ಓದಿ: Rahul Dravid: ಮಹತ್ವದ ಟೂರ್ನಿಗೂ ಮುನ್ನ ಪ್ರಯೋಗ ಅನಿವಾರ್ಯ- ರಾಹುಲ್​ ದ್ರಾವಿಡ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.