ರಾಜ್ಕೋಟ್: ಟಿ20 ಟಾಪ್ ರ್‍ಯಾಂಕಿಂಗ್ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಟಿ-20ಯಲ್ಲಿ ತಮ್ಮ 3 ನೇ ಶತಕ ದಾಖಲಿಸಿದ್ದಾರೆ. ಈ ಮೂಲಕ ಸಿಂಹಳೀಯರಿಗೆ 229 ರನ್ಗಳ ಬೃಹತ್ ಮೊತ್ತದ ಗುರಿಯನ್ನು ನೀಡಿದ್ದಾರೆ. ಲಂಕಾ ಬೌಲರ್ಗಳನ್ನು ಕಾಡಿದ ಸ್ಕೈ 45 ಎಸೆತದಲ್ಲಿ 3 ನೇ ಶತಕ ದಾಖಲಿಸಿದ್ದಾರೆ. 7 ಫೋರ್ ಮತ್ತು 9 ಸಿಕ್ಸ್ಗಳನ್ನು ಸಿಡಿಸಿದ ಯಾದವ್ 51 ಎಸೆತದಲ್ಲಿ 112 ರನ್ ದಾಖಲಿಸಿ ಅಜೇಯರಾಗಿ ಉಳಿದರು. 20 ಓವರ್ಗೆ 5 ವಿಕೆಟ್ ನಷ್ಟಕ್ಕೆ ಭಾರತ 228 ರನ್ ಗಳಿಸಿತು.
ಗಿಲ್ ಜಾಗ್ರತೆಯ ಆಟ: ಭಾರತ ಮೂರು ರನ್ ಗಳಿಸುತ್ತಿದ್ದಂತೆ ಇಶನ್ ಕಿಶನ್ ವಿಕೆಟನ್ ಮೊದಲ ಓವರ್ನಲ್ಲೇ ದಿಲ್ಶನ್ ಮಧುಶಂಕ ಪಡೆದುಕೊಂಡರು. ಕಿಶನ್ ವಿಕೆಟ್ ನಂತರ ಬಂದ ರಾಹುಲ್ ತ್ರಿಪಾಠಿ ಶುಭಮನ್ ಗಿಲ್ ಜೊತೆಯಾದರು. ತ್ರಿಪಾಠಿ ಬಿರುಸಿನ ಆಟಕ್ಕೆ ಮುಂದಾದರೆ ಗಿಲ್ ಜಾಗ್ರತೆ ಆಟಕ್ಕೆ ಅಣಿಯಾಗಿದ್ದರು. ರಾಹುಲ್ ತ್ರಿಪಾಠಿ ಬಿರುಸಿನ ಆಟ ಪ್ರದರ್ಶಿಸಿದರು. 16ಎಸೆತದಲ್ಲಿ 5 ಬೌಂಡರಿ ಮತ್ತು ಎರಡು ಸಿಕ್ಸರ್ನಿಂದ್ 35 ರನ್ಗಳಿಸಿ ಕರುಣಾ ರತ್ನೆಗೆ ವಿಕೆಟ್ ಒಪ್ಪಿಸಿದರು.
-
A mighty batting display from #TeamIndia with Suryakumar Yadav dominating the show with an outstanding 1⃣1⃣2⃣* 🙌 🙌
— BCCI (@BCCI) January 7, 2023 " class="align-text-top noRightClick twitterSection" data="
Sri Lanka innings underway.
Scorecard 👉 https://t.co/hTaQA8AHr4 #INDvSL pic.twitter.com/x8TsVLOwGd
">A mighty batting display from #TeamIndia with Suryakumar Yadav dominating the show with an outstanding 1⃣1⃣2⃣* 🙌 🙌
— BCCI (@BCCI) January 7, 2023
Sri Lanka innings underway.
Scorecard 👉 https://t.co/hTaQA8AHr4 #INDvSL pic.twitter.com/x8TsVLOwGdA mighty batting display from #TeamIndia with Suryakumar Yadav dominating the show with an outstanding 1⃣1⃣2⃣* 🙌 🙌
— BCCI (@BCCI) January 7, 2023
Sri Lanka innings underway.
Scorecard 👉 https://t.co/hTaQA8AHr4 #INDvSL pic.twitter.com/x8TsVLOwGd
ತ್ರಿಪಾಠಿ ನಂತರ ಕ್ರೀಸ್ಗೆ ಬಂದ ಟಿ 20 ಟಾಪ್ ರ್‍ಯಾಂಕಿಂಗ್ ಬ್ಯಾಟರ್ ಯಾದವ್ ಕಳೆದ ವರ್ಷದ ಬ್ಯಾಟಿಂಗ್ ಛಾಪನ್ನು ತಂದರು. ಕಳೆದೆರಡು ಪಂದ್ಯಗಳಲ್ಲಿ ವಿಫಲತೆ ಕಂಡು ತಾಳ್ಮೆಯಿಂದ ರನ್ ಕದಿಯುತ್ತಿದ್ದ ಗಿಲ್ 36 ಎಸೆತದಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ನಿಂದ 46 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಕೇವಲ ನಾಲ್ಕು ರನ್ನಿಂದ ಚೊಚ್ಚಲ ಟಿ20 ಅರ್ದ ಶತಕದಿಂದ ವಂಚಿತರಾದರು.
ಗಿಲ್ ವಿಕೆಟ್ ನಂತರ ಬಂದ ನಾಯಕ ಹಾರ್ದಿಕ್ ಪಾಂಡ್ಯ(4) ಬಿರುಸಿನ ಆಟ ಪ್ರದರ್ಶಿಸುವ ಓಘದಲ್ಲಿ ಕ್ಯಾಚ್ಇತ್ತು ಮರಳಿದರು. ಹಾರ್ದಿಕ್ ಬೆನ್ನಲ್ಲೆ ಬಂದ ಹೂಡ(4) ಕೂಡ ಅವರ ಹಾದಿಯನ್ನೇ ಹಿಡಿದರು. ನಂತರ ಬಂದ ಅಕ್ಷರ್ ಪಟೇಲ್ ಹಿಂದಿನ ಎರಡು ಪಂದ್ಯಗಳಂತೆ ವಿಕೆಟ್ ಕಾಯ್ದುಕೊಂಡರು. ಹಾಗೇ ಸೂರ್ಯ ಕುಮಾರ್ ಯಾದವ್ಗೆ ಕ್ರೀಸ್ ಬಿಟ್ಟು ಕೊಟ್ಟು ಶತಕಕ್ಕೆ ನೆರವಾದರು.
-
Another extraordinary innings from Suryakumar Yadav 🤯
— ICC (@ICC) January 7, 2023 " class="align-text-top noRightClick twitterSection" data="
He brings up his third T20I century off just 45 balls 💥#INDvSL | 📝Scorecard: https://t.co/v6DELbUa9F pic.twitter.com/hCBjeH0z3S
">Another extraordinary innings from Suryakumar Yadav 🤯
— ICC (@ICC) January 7, 2023
He brings up his third T20I century off just 45 balls 💥#INDvSL | 📝Scorecard: https://t.co/v6DELbUa9F pic.twitter.com/hCBjeH0z3SAnother extraordinary innings from Suryakumar Yadav 🤯
— ICC (@ICC) January 7, 2023
He brings up his third T20I century off just 45 balls 💥#INDvSL | 📝Scorecard: https://t.co/v6DELbUa9F pic.twitter.com/hCBjeH0z3S
ಸೂರ್ಯ ಮೂರನೇ ಶತಕ: ಭಾರತ ಈ ವರ್ಷ ತವರು ನೆಲದಲ್ಲಿ ಆಡುತ್ತಿರುವ ಮೊದಲನೇ ಸರಣಿ ಇದು. ಈ ಸರಣಿಯಲ್ಲಿ ಶತಕ ಗಳಿಸಿ ಮೊದಲ ಈ ವರ್ಷ ಶತಕ ಗಳಿಸಿದ ಮೊದಲ ಭಾರತಿಯರಾದರು. ವೈಯುಕ್ತಿವಾಗಿ ಅವರ ಮೂರನೇ ಟಿ 20 ಶತಕ ಇದಾಗಿದೆ. 2022ರ ಐಪಿಎಲ್ನಿಂದ ಫಾರ್ಮನಲ್ಲಿರುವ ಸೂರ್ಯ ಕುಮಾರ್ ಯಾದವ್ 833 ಅಂಕಗಳಿಂದ ಐಸಿಸಿ ಟಿ20 ರ್‍ಯಾಂಕಿಂಗ್ ಮೊದಲ ಸ್ಥಾನದಲ್ಲಿದ್ದಾರೆ. 45 ಎಸೆತದಲ್ಲಿ ಶತಕ ಗಳಿಸಿದ ಸೂರ್ಯ ಮತ್ತು 21 ಗಳಿಸಿದ ಅಕ್ಷರ್ ಪಟೇಲ್ ಅಜೇಯರಾಗಿ ಉಳಿದರು.
ಲಂಕಾಪರ ಇಬ್ಬರು ಬೌಲರ್ಗಳು 4 ಓವರ್ನಲ್ಲಿ 50ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟರು. ದಿಲ್ಶನ್ ಮಧುಶಂಕ 4 ಓವರ್ಗೆ 55ರನ್ ಕೊಟ್ಟು 2 ವಿಕೆಟ್ ಪಡೆದರೆ ಚಮಿಕಾ ಕರುಣಾರತ್ನೆ 52 ರನ್ ಕೊಟ್ಟು 1 ವಿಕೆಟ್ ಉರುಳಿಸಿದರು. ಕಸುನ್ ರಜಿತ 8.8ರ ಎಕಾನಮಿಯಲ್ಲಿ ಬೌಲ್ ಮಾಡಿ 1 ವಿಕೆಟ್ ಮತ್ತು ಹಸರಂಗ ಒಂದು ವಿಕೆಟ್ ಪಡೆದರು.
ಭಾರತದ ಸಂಕ್ಷಪ್ತ ಸ್ಕೋರ್: ಕಿಶನ್ 1, ಗಿಲ್ 45, ತ್ರಿಪಾಠಿ 35, ಹಾರ್ದಿಕ್ ಪಾಂಡ್ಯ 4, ಹೂಡ 4 ಮತ್ತು ಸೂರ್ಯ ಕುಮಾರ್ ಯಾದವ್ 112 ಹಾಗೂ ಅಕ್ಷರ್ 21 ಅಜೇಯರಾಗಿ ಉಳಿದರು.
ಇದನ್ನೂ ಓದಿ: IND VS SL 3rd T20: ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಹಾರ್ದಿಕ್