ನವದೆಹಲಿ: ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಹರಿಣಗಳು ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದಾರೆ. ಭಾರತೀಯರ ಕರಾರುವಕ್ಕಾದ ದಾಳಿಗೆ 99 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಕುಲ್ದೀಪ್ ಯಾದವ್ 4 ವಿಕೆಟ್ ಕಬಳಿಸಿ ಹರಿಣಗಳನ್ನು ಕಟ್ಟಿ ಹಾಕಿದರು. ಭಾರತಕ್ಕೆ 100 ರನ್ಗಳ ಸಾಧಾರಣ ಗುರಿಯನ್ನು ಹರಿಣಗಳು ನೀಡಿದ್ದಾರೆ.
ಟಾಸ್ ಗೆದ್ದ ಶಿಖರ್ಧವನ್ ದಕ್ಷಿಣ ಆಫ್ರಿಕಾಕ್ಕೆ ಬ್ಯಾಟಿಂಗ್ ಮಾಡುವಂತೆ ಆಹ್ವಾನ ನೀಡಿದರು. ಬ್ಯಾಟಿಂಗ್ಗೆ ಇಳಿದ ಹರಿಣಗಳಿಗೆ ಭಾರತೀಯ ಬೌಲರ್ಗಳು ಕಾಡಿದರು. ಆರಂಭಿಕರಾಗಿ ಬಂದ ಜನ್ನೆಮನ್ ಮಲನ್(15) ಮತ್ತು ಕ್ವಿಂಟನ್ ಡಿ ಕಾಕ್(6) ಸಿರಾಜ್ ಮತ್ತು ವಾಷಿಂಗ್ಟನ್ ಸುಂದರ್ಗೆ ವಿಕೆಟ್ ಒಪ್ಪಿಸಿದರು.
-
Innings Break!
— BCCI (@BCCI) October 11, 2022 " class="align-text-top noRightClick twitterSection" data="
Superb bowling peformance from #TeamIndia! 👏 👏
4⃣ wickets for @imkuldeep18
2⃣ wickets each for Shahbaz Ahmed, @mdsirajofficial & @Sundarwashi5
Over to our batters now. 👍 👍
Scorecard 👉 https://t.co/XyFdjV9BTC #INDvSA pic.twitter.com/B2wUzvis4y
">Innings Break!
— BCCI (@BCCI) October 11, 2022
Superb bowling peformance from #TeamIndia! 👏 👏
4⃣ wickets for @imkuldeep18
2⃣ wickets each for Shahbaz Ahmed, @mdsirajofficial & @Sundarwashi5
Over to our batters now. 👍 👍
Scorecard 👉 https://t.co/XyFdjV9BTC #INDvSA pic.twitter.com/B2wUzvis4yInnings Break!
— BCCI (@BCCI) October 11, 2022
Superb bowling peformance from #TeamIndia! 👏 👏
4⃣ wickets for @imkuldeep18
2⃣ wickets each for Shahbaz Ahmed, @mdsirajofficial & @Sundarwashi5
Over to our batters now. 👍 👍
Scorecard 👉 https://t.co/XyFdjV9BTC #INDvSA pic.twitter.com/B2wUzvis4y
ಹೆನ್ರಿಕ್ ಕ್ಲಾಸೆನ್ 34 ರನ್ ಹೊಡೆದು ಬೌಲರ್ಗಳನ್ನು ಕಾಡಿದ್ದು ಬಿಟ್ಟರೆ ಮತ್ತೆಲ್ಲರೂ ತರಗೆಲೆಗಳಂತೆ ವಿಕೆಟ್ ಒಪ್ಪಸಿದರು. ರೀಜಾ ಹೆಂನ್ಸಿಕ್ಸ್(3), ಐಡೆನ್ ಮಾರ್ಕ್ರಂ(9), ಡೇವಿಡ್ ಮಿಲ್ಲರ್(7), ಆಂಡಿಲೆ ಫೆಲುಕ್ವಾಯೊ(5), ಮಾರ್ಕೊ ಜಾನ್ಸೆನ್(14), ಜಾರ್ನ್ ಫೋರ್ಚುಯಿನ್(1) ಮತ್ತು ಅನ್ರಿಚ್ ನಾರ್ಟ್ಜೆ(0) ಕ್ರಿಸ್ನಲ್ಲಿ ನಿಲ್ಲಲೇ ಇಲ್ಲ.
ಭಾರತದ ಪರ ಕುಲದೀಪ್ ಯಾದವ್ 4 ವಿಕೆಟ್ ಪಡೆದು ಮಿಂಚಿದರೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹಮದ್, ಮೊಹಮದ್ ಸಿರಾಜ್ ತಲಾ ಎರಡು ವಿಕೆಟ್ ಪಡೆದರು.
ಇದನ್ನೂ ಓದಿ : India vs South Africa ODI: ನಿರ್ಣಾಯಕ ಪಂದ್ಯಕ್ಕೆ ಮಳೆ ಅಡ್ಡಿ ಸಾಧ್ಯತೆ.. ಗೆದ್ದವರಿಗೆ ಸರಣಿ ಸಿಹಿ