ETV Bharat / sports

ಸೌತಾಂಪ್ಟನ್​ನಲ್ಲಿ ನಿರಂತರ ಮಳೆ.. 4ನೇ ದಿನದಾಟ ವಿಳಂಬ ಸಾಧ್ಯತೆ - India vs New Zealand WTC final

ಮೊದಲ ದಿನದ ಆಟ ಕೂಡ ಮಳೆಯಿಂದ ರದ್ದಾಗಿತ್ತು. ಎರಡನೇ ದಿನ ಮಂದ ಬೆಳಕಿನ ಕಾರಣ ಕೇವಲ 65 ಓವರ್​ಗಳ ಆಟ ಮಾತ್ರ ನಡೆದಿತ್ತು. 3ನೇ ದಿನ ಇನ್ನು 19 ಓವರ್​ಗಳ ಆಟ ಬಾಕಿಯಿದ್ದಾಗ ಮಂದಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.

India vs New Zealand WTC final
India vs New Zealand WTC final
author img

By

Published : Jun 21, 2021, 5:11 PM IST

ಸೌತಾಂಪ್ಟನ್​: ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆಯುತ್ತಿರುವ ಚೊಚ್ಚಲ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯದ ನಾಲ್ಕನೇ ದಿನ ಮಳೆಯಿಂದ ಆರಂಭ ವಿಳಂಬವಾಗಿದೆ. ಪ್ರಸ್ತುತ ಸೌತಾಂಪ್ಟನ್​ನಲ್ಲಿ ಕಳೆದ 5-6 ಗಂಟೆಗಳಿಂದ ನಿರಂತರ ಮಳೆಯಾಗಿದ್ದು, ಇಂದು ಪಂದ್ಯ ಆರಂಭವಾಗುವ ಯಾವುದೇ ಮುನ್ಸೂಚನೆ ಕಂಡುಬಂದಿಲ್ಲ.

ಮೊದಲ ದಿನದ ಆಟ ಕೂಡ ಮಳೆಯಿಂದ ರದ್ದಾಗಿತ್ತು. ಎರಡನೇ ದಿನ ಮಂದ ಬೆಳಕಿನ ಕಾರಣ ಕೇವಲ 65 ಓವರ್​ಗಳ ಆಟ ಮಾತ್ರ ನಡೆದಿತ್ತು. 3ನೇ ದಿನ ಇನ್ನು 19 ಓವರ್​ಗಳ ಆಟ ಬಾಕಿಯಿದ್ದಾಗ ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ನಾಲ್ಕನೇ ದಿನದಾಟ ಆರಂಭವಾಗುವುದೇ ಅನುಮಾನವಾಗಿದೆ. ನಿನ್ನೆ ರಾತ್ರಿಯೂ ಮಳೆಯಾಗಿದೆ, ಇಂದು ಕೂಡ 5ರಿಂದ 6 ಗಂಟೆಗಳ ಕಾಲ ನಿರಂತರ ಮಳೆಯಾಗಿದೆ. ಹಾಗಾಗಿ ಇಂದು ಒಂದು ಸೆಷನ್ ಆಟ ನಡೆದರೂ ಅದೃಷ್ಟ ಎನ್ನಲಾಗುತ್ತಿದೆ.

ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 217 ರನ್​ಗಳಿಗೆ ಆಲೌಟ್ ಆದರೆ, ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್​ನಲ್ಲಿ 2 ವಿಕೆಟ್ ಕಳೆದುಕೊಂಡು 102 ರನ್​ಗಳಿಸಿದೆ. ಡಿವೋನ್ ಕಾನ್ವೆ 54 ಮತ್ತು ಟಾಮ್ ಲಾಥಮ್ 30 ರನ್​ಗಳಿಸಿ ವಿಕೆಟ್​ ಒಪ್ಪಿಸಿದರೆ, ವಿಲಿಯಮ್ಸನ್ ಅಜೇಯ 12 ಮತ್ತು ರಾಸ್ ಟೇಲರ್ ಖಾತೆ ತೆರೆಯದೇ ಕ್ರೀಸ್​ನಲ್ಲಿದ್ದಾರೆ.

ಇದನ್ನು ಓದಿ: ವಿರಾಟ್​​ ಕೊಹ್ಲಿ ವಿಕೆಟ್​​ ಪಡೆದಿದ್ದು ನಮಗೆ ದೊಡ್ಡ ತಿರುವು ನೀಡಿತು: ಜೆಮೀಸನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.