ಮೌಂಟ್ ಮೌಂಗನ್ಯುಯಿ: ಭಾರತ ನ್ಯೂಜಿಲೆಂಡ್ ವಿರುದ್ಧ ಎರಡನೇ ಟಿ 20 ಪಂದ್ಯದಲ್ಲಿ ಕಿವೀಸ್ನ್ನು 126ರನ್ಗೆ ಆಲ್ ಔಟ್ ಮಾಡುವ ಮೂಲಕ 65 ರನ್ಗಳಿಂದ ಭರ್ಜರಿ ಜಯ ಸಾಧಿಸಿದೆ. ದೀಪಕ್ ಹೂಡ 2.5 ಓವರ್ಗೆ 10 ಕೊಟ್ಟು 4 ವಿಕೆಟ್ ಕಬಳಿಸಿ ಕೈ ಚಳಕಕ್ಕೆ ಮೆರೆದಿದ್ದಾರೆ.
ಭಾರತ ನೀಡಿದ್ದ 192 ರನ್ನ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ 125ರನ್ಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ನಾಯಕ ವಿಲಿಯಮ್ಸನ್ ಅರ್ಧ ಶತಕ(61) ಮತ್ತು ಡೆವೊನ್ ಕಾನ್ವೇ (25) ಸಾಧಾರಣ ಆಟ ಪ್ರದರ್ಶಿಸಿದರು. ನ್ಯೂಜಿಲೆಂಡ್ ಪರ ಮತ್ತಾವ ಆಟಗಾರನೂ ಉತ್ತಮ ಆಟ ಪ್ರದರ್ಶಿಸಲಿಲ್ಲ. ಆರಂಭಿಕ ಫಿನ್ ಅಲೆನ್ ಡಕ್ ಔಟ್ ಆದರು. ಗ್ಲೆನ್ ಫಿಲಿಪ್ಸ್(12), ಡೇರಿಲ್ ಮಿಚೆಲ್(10) ಕೊಂಚ ಹೋರಾಡಿದರು.
ಭಾರತದ ಪರ ದೀಪಕ್ ಹೂಡ 4 ವಿಕೆಟ್ ಕಬಳಿಸಿದರು. ಸಿರಾಜ್ ಮತ್ತು ಚಹಾಲ್ ತಲಾ ಎರಡು ಮತ್ತು ಭೂವನೇಶ್ವರ್ ಮತ್ತು ಸುಂದರ್ ತಲಾ ಒಂದು ವಿಕೆಟ್ ಪಡೆದರು.
-
India take a 1-0 lead in the T20I series with a convincing win at the Bay Oval 🙌
— ICC (@ICC) November 20, 2022 " class="align-text-top noRightClick twitterSection" data="
Watch the #NZvIND series live on https://t.co/MHHfZPyHf9 (in select regions) 📺 pic.twitter.com/VZLav2DFQh
">India take a 1-0 lead in the T20I series with a convincing win at the Bay Oval 🙌
— ICC (@ICC) November 20, 2022
Watch the #NZvIND series live on https://t.co/MHHfZPyHf9 (in select regions) 📺 pic.twitter.com/VZLav2DFQhIndia take a 1-0 lead in the T20I series with a convincing win at the Bay Oval 🙌
— ICC (@ICC) November 20, 2022
Watch the #NZvIND series live on https://t.co/MHHfZPyHf9 (in select regions) 📺 pic.twitter.com/VZLav2DFQh
ಮೊದಲ ಇನ್ನಿಂಗ್ಸ್ : ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಸೂರ್ಯ ಕುಮಾರ್ ಅವರ ಶತಕ ನೆರವಾಯಿತು. 51 ಬಾಲ್ನಲ್ಲಿ 7 ಸಿಕ್ಸ್ ಮತ್ತು 11 ಬೌಂಡರಿಯಿಂದ ಸ್ಕೈ ಅವರು 111 ರನ್ ಗಳಿಸಿದ್ದರಿಂದ ಭಾರತ 192ರನ್ಗಳ ಬೃಹತ್ ಮೊತ್ತ ದಾಖಲಿಸಿತು.
ಆರಂಭಿಕ ಇಶಾನ್ ಕಿಶನ್ 36 ರನ್, ಅಯ್ಯರ್ ಮತ್ತು ನಾಯಕ ಹಾರ್ದಿಕ್ 13 ರನ್ ಗಳಿಸಿದ್ದು ಬಿಟ್ಟರೆ, ಮತ್ತಾರು ಉತ್ತಮ ಪ್ರದರ್ಶನ ನೀಡಲಿಲ್ಲ. ಆರಂಭಿಕರಾಗಿ ಪಂತ್ ಕೂಡ ವಿಫಲತೆ ಕಂಡರು.
ನ್ಯೂಜಿಲೆಂಡ್ ಪರ ಸೌಥಿ 3, ಲಾಕಿ ಫರ್ಗುಸನ್ 2 ಮತ್ತು ಇಶ್ ಸೋಧಿ 1 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ :ಸ್ಕೈ ಅಬ್ಬರದ ಶತಕ.. ಪಾಕಿಸ್ತಾನದ ಬಾಬರ್ ದಾಖಲೆ ಹಿಂದಿಕ್ಕಿದ ಸೂರ್ಯ