ETV Bharat / sports

IND vs AUS: ಆಸಿಸ್​ ಮಣಿಸಿ ಸರಣಿ ಜಯಿಸಿದ ಭಾರತ.. ವಿಶ್ವಕಪ್​ಗೂ ಮುನ್ನ ಆಸ್ಟ್ರೇಲಿಯಾಕ್ಕೆ ಎರಡನೇ ಸರಣಿ ಸೋಲು - ಸೂರ್ಯಕುಮಾರ್​ ಯಾದವ್​

ಆಸ್ಟ್ರೇಲಿಯಾ ವಿರುದ್ಧದ ಮೂರು ಏಕದಿನ ಪಂದ್ಯದ ಸರಣಿಯನ್ನು ಭಾರತ 2-0 ಯಿಂದ ಗೆದ್ದುಕೊಂಡಿದೆ.

India vs Australia
India vs Australia
author img

By ETV Bharat Karnataka Team

Published : Sep 24, 2023, 10:21 PM IST

Updated : Sep 24, 2023, 10:55 PM IST

ಇಂದೋರ್​ (ಮಧ್ಯಪ್ರದೇಶ): ಇಲ್ಲಿನ ಹೋಳ್ಕರ್​ ಮೈದಾನದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ 99 ರನ್​ನಿಂದ ಜಯ ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0 ಯಿಂದ ವಶಪಡಿಸಿಕೊಂಡಿದೆ. ಭಾರತದ ಸ್ಪಿನ್​ ಮೋಡಿಗೆ ಆಸ್ಟ್ರೇಲಿಯಾ ಮತ್ತೆ ಮಣಿದಿದೆ. ಅನುಭವಿ ಬೌಲರ್​ಗಳಾದ ರವಿಚಂದ್ರನ್ ಅಶ್ವಿನ್​ ಮತ್ತು ರವೀಂದ್ರ ಜಡೇಜ ತಲಾ 3 ವಿಕೆಟ್ ಪಡೆದು ಕಾಂಗರೂ ಪಡೆಯನ್ನು ಎರಡನೇ ಏಕದಿನ ಪಂದ್ಯದಲ್ಲಿ 217ಕ್ಕೆ ಕಟ್ಟಿಹಾಕಿದರು. 28.2 ಓವರ್​ಗೆ ಆಸ್ಟ್ರೇಲಿಯಾ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಸತತ ಐದನೇ ಏಕದಿನ ಪಂದ್ಯದ ಸೋಲನುಭವಿಸಿತು.

ಪಂದ್ಯಕ್ಕೆ ಎರಡು ಬಾರಿ ಮಳೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಪಂದ್ಯವನ್ನು 33 ಓವರ್​ಗೆ ಕಡಿತಗೊಳಿಸಲಾಗಿತ್ತು. ಹೀಗಾಗಿ ಆಸ್ಟ್ರೇಲಿಯಾಕ್ಕೆ 317 ನವೀಕೃತ ಗುರಿ ಇತ್ತು. ಭಾರತ ಮೊದಲ ಇನ್ನಿಂಗ್ಸ್​ನಲ್ಲಿ ಶುಭಮನ್​ ಗಿಲ್​, ಶ್ರೇಯಸ್​ ಅಯ್ಯರ್​ ಅವರ ಶತಕ ಮತ್ತು ಸೂರ್ಯಕುಮಾರ್​ ಯಾದವ್​, ಕೆ ಎಲ್​ ರಾಹುಲ್​ ಅವರ ಅರ್ಧಶತಕದ ನೆರವಿನಿಂದ 399 ರನ್​ ಗಳಿಸಿತ್ತು.

ಈ ಗುರಿಯನ್ನು ಬೆನ್ನು ಹತ್ತಿದ್ದ ಆಸ್ಟ್ರೇಲಿಯಾಕ್ಕೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆರಂಭಿಕ ಆಘಾತ ನೀಡಿದರು. ಪಂದ್ಯದ ಎರಡನೇ ಓವರ್​ ಮಾಡಲು ಬಂದ ಅವರು ಮ್ಯಾಥ್ಯೂ ಶಾರ್ಟ್, ಸ್ಟೀವನ್ ಸ್ಮಿತ್ ಅವರ ವಿಕೆಟ್​ ಪಡೆದರು. ನಂತರ ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲ್ಯಾಬುಶೇನ್ ಮೂರನೇ ವಿಕೆಟ್​ಗೆ 80 ರನ್​ ಜೊತೆಯಾಟ ಮಾಡಿ ತಂಡಕ್ಕೆ ಆಸರೆ ಆಗಿದ್ದರು. ಆದರೆ ಈ ವೇಳೆ ದಾಳಿಗೆ ಬಂದ ಅಶ್ವಿನ್ 34 ಬಾಲ್​ನಲ್ಲಿ 4 ಬೌಂಡರಿಯ ಸಹಾಯದಿಂದ 27 ರನ್​ ಗಳಿಸಿ ವಿಕೇಟ್​ ಕಾಯ್ದುಕೊಂಡು ಆಡುತ್ತಿದ್ದ ಮಾರ್ನಸ್​ ವಿಕೆಟ್​ ಪಡೆದರು.

ಮಾರ್ನಸ್​ ಔಟ್​ ಆದ ಬೆನ್ನಲ್ಲೇ 12 ರನ್​ ಅಂತರದಲ್ಲಿ ಮತ್ತೆರಡು ವಿಕೆಟ್​ ಅಶ್ವಿನ್​ ಪಾಲಾಯಿತು. 39 ಬಾಲ್​ನಲ್ಲಿ 7 ಬೌಂಡರಿ, 1 ಸಿಕ್ಸ್​ ನಿಂದ 53 ರನ್​ ಗಳಿಸಿ ಆಡುತ್ತಿದ್ದ ವಾರ್ನರ್​ ಎಲ್​ಬಿಡ್ಲ್ಯೂಗೆ ಬಲಿಯಾದರು. ಆದರೆ ಅದು ಔಟ್​ ಆಗಿರಲಿಲ್ಲ. ಅಂಪೈರ್​ ನಿರ್ಧಾರಕ್ಕೆ ರಿವೀವ್​ ಪಡೆಯದೇ ಪೆವಿಲಿಯನ್​ಗೆ ಮರಳಿ ವಾರ್ನರ್​ ದಡ್ಡತನ ಮೆರೆದರು. ಅವರ ಹಿಂದೆಯೇ ಜೋಶ್ ಇಂಗ್ಲಿಸ್ ವಿಕೆಟ್​ ಕೊಟ್ಟರು.

ನಂತರ ಅಲೆಕ್ಸ್ ಕ್ಯಾರಿ ಮತ್ತು ಆಡಮ್ ಝಂಪಾ ಜಡೇಜಾಗೆ ವಿಕೆಟ್​ ಕೊಟ್ಟರು. ಕೊನೆಯಲ್ಲಿ ಸೀನ್ ಅಬಾಟ್ ಮತ್ತು ಜೋಶ್ ಹ್ಯಾಜಲ್ವುಡ್ 77 ರನ್​ನ ಪಾಲುದಾರಿಕೆ ಮಾಡಿದರು. ಇದರಿಂದ ಆಸಿಸ್​ ಗೆಲುವಿನ ಅಂತರವನ್ನು ಕಡಿಮೆ ಮಾಡಿಕೊಂಡಿತು. ಸೀನ್ ಅಬಾಟ್ 36 ಬಾಲ್ ಆಡಿ 4 ಬೌಂಡರಿ, 5 ಸಿಕ್ಸ್​ ಸೇರಿಸಿ 54 ರನ್​ ಕೆಲೆಹಾಕಿದರು. ಆದರೆ ಜಡೇಜಾರ ಕೈಚಳಕಕ್ಕೆ ಅಬಾಟ್​ ಕ್ಲೀನ್​ ಬೌಲ್ಡ್​ ಆದರು. ನಂತರ ಹ್ಯಾಜಲ್ವುಡ್ ವಿಕೆಟ್​ ಶಮಿ ಪಡೆರು. ಇದರಿಂದ ಆಸ್ಟ್ರೇಲಿಯಾ ತಂಡ 28.2 ಓವರ್​ಗೆ 217 ರನ್​ಗೆ ಸರ್ವಪತನ ಕಂಡಿತು.

ಭಾರತದ ಪರ ಜಡೇಜಾ, ಅಶ್ವಿನ್ ತಲಾ ಮೂರು ವಿಕೆಟ್​ ಪಡೆದರೆ, ಪ್ರಸಿದ್ಧ್ ಕೃಷ್ಣ 2 ಮತ್ತು ಶಮಿ 1 ವಿಕೆಟ್​ ಉರುಳಿಸಿದರು. 8 ವಿಕೆಟ್​ ಪತನವಾದ ನಂತರ ಮಾಡಿದ ಕಳಪೆ ಕ್ಷೇತ್ರ ರಕ್ಷಣೆಯ ಪರಿಣಾಮ ಗೆಲುವಿನ ಅಂತರ ಕಡಿಮೆ ಆಯಿತು. ಕೊನೆಯಲ್ಲಿ ಟೀಮ್​ ಇಂಡಿಯಾ ಎರಡು ಕ್ಯಾಚ್​ ಕೈಚೆಲ್ಲಿದ್ದರಿಂದ 9ನೇ ವಿಕೆಟ್​ 77 ರನ್​ ಜೊತೆಯಾಟ ಮೂಡಿಬಂತು. ಇನ್ನು ಭಾರತ ವಿಶ್ವಕಪ್​ ಆಡಲಿದರುವುದರಿಂದ ಫೀಲ್ಡಿಂಗ್​ ಸುಧಾರಿಸುವ ಅಗತ್ಯ ಇದೆ. ಗಾಯದಿಂದ ಚೇತರಿಸಿಕೊಂಡ ನಂತರ ಶತಕ ಗಳಿಸಿದ ಅಯ್ಯರ್​ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಪಂದ್ಯದ ದಾಖಲೆಗಳು:

  • ಈ ಪಂದ್ಯದ ಜಯದಿಂದ ಇಂದೋರ್​ ಮೈದಾನದಲ್ಲಿ ಭಾರತ ತಂಡ ಸತತ 7ನೇ ಗೆಲುವು ದಾಖಲಿಸಿದೆ.
  • 3 ವಿಕೆಟ್​ ಪಡೆದ ರವಿಚಂದ್ರನ್​ ಅಶ್ವಿನ್​ ಆಸ್ಟ್ರೇಲಿಯಾದ 144 ವಿಕೆಟ್​ ಪಡೆದ ದಾಖಲೆ ಮಾಡಿದರು. ಇದು ವೈಯುಕ್ತಿಕ ಅತಿ ಹೆಚ್ಚು ವಿಕೆಟ್​ ಪಡೆದ ದಾಖಲೆ ಆಗಿದೆ.
  • 9ನೇ ವಿಕೆಟ್​ಗೆ ಸೀನ್ ಅಬಾಟ್ ಮತ್ತು ಜೋಶ್ ಹ್ಯಾಜಲ್ವುಡ್ ಮಾಡಿದ 77 ರನ್​ನ ಜೊತೆಯಾಟ ನಾಲ್ಕನೇ ದೊಡ್ಡ ಪಾಲುದಾರಿಕೆ ಆಗಿದೆ.

ಇದನ್ನೂ ಓದಿ: Asian Games: ನಾಳೆ ಭಾರತಕ್ಕೆ ಚಿನ್ನದ ಕನಸು.. ವನಿತೆಯರ ಕ್ರಿಕೆಟ್​ ತಂಡ ಲಂಕಾ ಮಣಿಸಿ ಗೆಲ್ಲುತ್ತಾ ಸ್ವರ್ಣ ಪದಕ?

Last Updated : Sep 24, 2023, 10:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.