ನಾಗ್ಪುರ(ಮಹಾರಾಷ್ಟ್ರ): ಮೊದಲ ಟೆಸ್ಟ್ನ ಮೂರನೇ ದಿನದಾಟದಲ್ಲಿ ದೊಡ್ಡ ಮೊತ್ತ ಪೇರಿಸುವ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತವನ್ನು ಆಸ್ಟ್ರೇಲಿಯಾದ ಯುವ ಸ್ಪಿನ್ನರ್ ಟಾಡ್ ಮೊರ್ಪಿ ಮತ್ತೆ ಕಾಡಿದರು. ಇದರಿಂದ ಭಾರತ 139.3 ಓವರ್ಗಳಲ್ಲಿ 400 ರನ್ ಗಳಿಸಿ ಮೊದಲ ಇನಿಂಗ್ಸ್ ಮುಗಿಸಿತು. ಶತಕದ ಸನಿಹದಲ್ಲಿದ್ದ ಆಲ್ರೌಂಡರ್ ಅಕ್ಷರ್ ಪಟೇಲ್ ಔಟಾಗಿ ನಿರಾಸೆ ಅನುಭವಿಸಿದರು.
ನಿನ್ನೆ ಕ್ರೀಸ್ ಕಾಯ್ದುಕೊಂಡಿದ್ದ ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ದೊಡ್ಡ ಮೊತ್ತ ಗಳಿಸುವ ಗುರಿಯೊಂದಿಗೆ ಮೂರನೇ ದಿನದಾಟ ಆರಂಭಿಸಿದರು. ಆದರೆ, ಆಸೀಸ್ ಮೊರ್ಪಿ ಆರಂಭದಲ್ಲೇ ಆಘಾತ ನೀಡಿದರು. 66 ರನ್ ಗಳಿಸಿದ್ದ ಜಡೇಜಾ ಇನ್ನೆರಡು ರನ್ ಸೇರಿಸುವಷ್ಟರಲ್ಲಿ ವಿಕೆಟ್ ನೀಡಿದರು.
-
Lunch on Day 3 of the 1st Test.#TeamIndia all out for 400. Lead by 223 runs.
— BCCI (@BCCI) February 11, 2023 " class="align-text-top noRightClick twitterSection" data="
Rohit Sharma (120)
Axar Patel (84)
Ravindra Jadeja (70)
Scorecard - https://t.co/edMqDi4dkU #INDvAUS @mastercardindia pic.twitter.com/iUvZhUrGL1
">Lunch on Day 3 of the 1st Test.#TeamIndia all out for 400. Lead by 223 runs.
— BCCI (@BCCI) February 11, 2023
Rohit Sharma (120)
Axar Patel (84)
Ravindra Jadeja (70)
Scorecard - https://t.co/edMqDi4dkU #INDvAUS @mastercardindia pic.twitter.com/iUvZhUrGL1Lunch on Day 3 of the 1st Test.#TeamIndia all out for 400. Lead by 223 runs.
— BCCI (@BCCI) February 11, 2023
Rohit Sharma (120)
Axar Patel (84)
Ravindra Jadeja (70)
Scorecard - https://t.co/edMqDi4dkU #INDvAUS @mastercardindia pic.twitter.com/iUvZhUrGL1
ಉಳಿದ ಇಬ್ಬರು ಬೌಲರ್ಗಳನ್ನು ಕಟ್ಟಿಹಾಕಿ ಇನಿಂಗ್ಸ್ಗೆ ಬೇಗನೆ ಅಂತ್ಯವಾಡಬೇಕೆಂದುಕೊಂಡಿದ್ದ ಆಸೀಸ್ಗೆ ಬೌಲರ್ ಮೊಹಮದ್ ಶಮಿ ಸವಾಲಾದರು. ಅಬ್ಬರಿಸಿದ ಶಮಿ 47 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್ ಸಮೇತ 37 ರನ್ ಮಾಡಿದರು. ಇನ್ನೊಂದು ತುದಿಯಲ್ಲಿ ಅಕ್ಷರ್ ಪಟೇಲ್ ಗಟ್ಟಿಯಾಗಿ ನಿಂತಿದ್ದರು.
ಟಾಡ್ ಮೊರ್ಪಿ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಶಮಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ವಿಕೆಟ್ ನೀಡಿದರು. ಇದರ ಬಳಿಕ ರನ್ ಪೇರಿಸುವ ಹೊಣೆ ಹೊತ್ತ ಅಕ್ಷರ್ ಪಟೇಲ್ ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ಮೊರೆ ಹೋದರು. 84 ರನ್ ಗಳಿಸಿದ್ದ ವೇಳೆ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಬೌಲ್ಡ್ ಆದರು. ಈ ಮೂಲಕ ಭಾರತದ ಇನಿಂಗ್ಸ್ಗೆ ತೆರೆ ಬಿತ್ತು.
-
Edged & taken! @ashwinravi99 strikes in his first over 👌 👌
— BCCI (@BCCI) February 11, 2023 " class="align-text-top noRightClick twitterSection" data="
Virat Kohli takes the catch 👍 👍
Australia lose Usman Khawaja.
Follow the match ▶️ https://t.co/SwTGoyHfZx#TeamIndia | #INDvAUS pic.twitter.com/gAUfWqe4YR
">Edged & taken! @ashwinravi99 strikes in his first over 👌 👌
— BCCI (@BCCI) February 11, 2023
Virat Kohli takes the catch 👍 👍
Australia lose Usman Khawaja.
Follow the match ▶️ https://t.co/SwTGoyHfZx#TeamIndia | #INDvAUS pic.twitter.com/gAUfWqe4YREdged & taken! @ashwinravi99 strikes in his first over 👌 👌
— BCCI (@BCCI) February 11, 2023
Virat Kohli takes the catch 👍 👍
Australia lose Usman Khawaja.
Follow the match ▶️ https://t.co/SwTGoyHfZx#TeamIndia | #INDvAUS pic.twitter.com/gAUfWqe4YR
ಆಸೀಸ್ ಪರವಾಗಿ ಭಾರತದ ಬ್ಯಾಟರ್ಗಳ ಕಾಡಿದ ಟಾಡ್ ಮೊರ್ಪಿ 7 ವಿಕೆಟ್ ಕಿತ್ತರು. ಪ್ಯಾಟ್ ಕಮಿನ್ಸ್ 2, ನಾಥನ್ ಲಿಯಾನ್ 1 ವಿಕೆಟ್ ಪಡೆದರು. ಎರಡನೇ ಇನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿತು. ಅಶ್ವಿನ್ ಎಸೆದ 2 ನೇ ಓವರ್ನಲ್ಲಿ ಹೊರಹೋಗುತ್ತಿದ್ದ ಬೌಲನ್ನು ದಂಡಿದಲು ಮುಂದಾದ ಉಸ್ಮಾನ್ ಖವಾಜಾ ಸ್ಲಿಪ್ನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಓದಿ: ನಡೆದಾಡಲು ಶುರು ಮಾಡಿದ ರಿಷಬ್ ಪಂತ್; ಫೋಟೋ ಹಂಚಿಕೊಂಡ ಕ್ರಿಕೆಟಿಗ