ಮುಂಬೈ (ಮಹಾರಾಷ್ಟ್ರ): ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರ ಸಮಯೋಚಿತ ಆಟದಿಂದ ಮೊದಲ ಪಂದ್ಯದಲ್ಲಿ ಭಾರತ ಐದು ವಿಕೆಟ್ಗಳ ಗೆಲುವು ಸಾಧಿಸಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಮೊದಲ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಬಾರಿಗೆ ಏಕದಿನ ತಂಡದ ನಾಯಕತ್ವದ ವಹಿಸಿದ್ದ ಪಾಂಡ್ಯ ನಿರ್ಧಾರ ಸೂಕ್ತವಾಗಿಯೇ ಇತ್ತು. ಉತ್ತಮ ಬೌಲಿಂಗ್ ಮತ್ತು ಫೀಲ್ಡಿಂಗ್ನಿಂದ ಆಸೀಸ್ ತಂಡವನ್ನು ಕೇವಲ 188 ರನ್ಗಳಿಗೆ ಕಟ್ಟಿ ಹಾಕಿತ್ತು. ಈ ಗೆಲುವಿನ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ ಆರಂಭಿಕ ಅಘಾತ ಅನುಭವಿಸಿತ್ತು.
-
What a performance 🔥
— ICC (@ICC) March 17, 2023 " class="align-text-top noRightClick twitterSection" data="
India bowl out Australia for 188!#INDvAUS | 📝: https://t.co/V30MqMCC9U pic.twitter.com/9Aum5WN4sm
">What a performance 🔥
— ICC (@ICC) March 17, 2023
India bowl out Australia for 188!#INDvAUS | 📝: https://t.co/V30MqMCC9U pic.twitter.com/9Aum5WN4smWhat a performance 🔥
— ICC (@ICC) March 17, 2023
India bowl out Australia for 188!#INDvAUS | 📝: https://t.co/V30MqMCC9U pic.twitter.com/9Aum5WN4sm
ಆರಂಭಿಕರಾದ ಕಣಕ್ಕಿಳಿದ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾದರು. ಕಿಶನ್ ಕೇವಲ 3 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿರಾಟ್ ಕೊಹ್ಲಿ ಕೇವಲ 4 ರನ್ಗಳಿಗೆ ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಸೂರ್ಯಕುಮಾರ್ ಯಾದವ್ ಅವರನ್ನೂ ಶೂನ್ಯಕ್ಕೆ ಸ್ಟಾರ್ಕ್ ಎಲ್ಬಿ ಬಲೆಗೆ ಕೆಡವಿದರು. ಇದಾದ ಕೆಲ ಹೊತ್ತಿನಲ್ಲಿ 20 ರನ್ ಗಳಿಸಿದ್ದ ಗಿಲ್ ಪೆವಿಲಿಯನ್ ಸೇರಿಕೊಂಡರು. ಇದರಿಂದ ಟೀಂ ಇಂಡಿಯಾ ಕೇವಲ 39 ರನ್ಗಳಿಗೆ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತ್ತು.
ನಂತರದಲ್ಲಿ ಕೆಎಲ್ ರಾಹುಲ್ ಮತ್ತು ನಾಯಕ ಪಾಂಡ್ಯ ತಂಡಕ್ಕೆ ಚೇತರಿಕೆ ನೀಡಿದರು. 25 ರನ್ಗಳನ್ನು ಬಾರಿಸಿ ಪಾಂಡ್ಯ ಔಟಾದರು. ಇದರ ಬಳಿಕ ಬಂದ ಜಡೇಜಾ, ರಾಹುಲ್ ಜೊತೆಗೂಡಿ ಉತ್ತಮವಾಗಿ ಬ್ಯಾಟ್ ಬೀಸಿ ರನ್ಗಳನ್ನು ಕಲೆ ಹಾಕಿದರು. ಅಲ್ಲದೇ, ಇಬ್ಬರು ಕೂಡ ಸಮಯೋಚಿತ ಆಟ ಪ್ರದರ್ಶಿಸಿ ತಂಡವನ್ನು ಗೆಲುವಿನ ದಡ ಸೇರಿದರು. 91 ಬಾಲ್ಗಳಲ್ಲಿ ಒಂದು ಸಿಕ್ಸರ್ ಮತ್ತು ಏಳು ಬೌಂಡರಿಗಳ ಸಮೇತ ರಾಹುಲ್ 75 ರನ್ ಸಿಡಿಸಿದರೆ, 69 ಎಸೆತಗಳಲ್ಲಿ ಐದು ಬೌಂಡರಿಗಳೊಂದಿಗೆ ಜಡೇಜಾ 45 ರನ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮೂರು ವಿಕೆಟ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಎರಡು ವಿಕೆಟ್ ಪಡೆದರು.
ಆಸೀಸ್ ಇನ್ನಿಂಗ್ಸ್: ಇದಕ್ಕೂ ಮೊದಲ ಬ್ಯಾಟಿಂಗ್ ಮಾಡಿದ ಬ್ಯಾಟಿಂಗ್ ಮಾಡಿದ ಆಸೀಸ್ ಬ್ಯಾಟರ್ಗಳನ್ನು ಮೊಹಮ್ಮದ್ ಶಮಿ ಮತ್ತು ಸಿರಾಜ್ ಕಾಡಿದರು. ಇಬ್ಬರು ತಲಾ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಐದು ರನ್ ಗಳಿಸಿ ಆಡುತ್ತಿದ್ದ ಟ್ರಾವಿಸ್ ಹೆಡ್ ಸಿರಾಜ್ ದಾಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಸ್ಟೀವನ್ ಸ್ಮಿತ್ ಮಿಚೆಲ್ ಮಾರ್ಷ್ ಜೊತೆಗೆ ರನ್ ಕಲೆ ಹಾಕಿದರು. ಇಬ್ಬರು 50+ ರನ್ ಜೊತೆಯಾಟವಾಡಿದರು. 22 ರನ್ ಗಳಿಸಿದ್ದ ಸ್ಮಿತ್ ಅವರು ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.
ಒಂದೆಡೆ ವಿಕೆಟ್ ಹೋಗುತ್ತಿದ್ದರು ಮಿಚೆಲ್ ಮಾರ್ಷ್ ತಮ್ಮ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದರು. ತಮ್ಮ 14ನೇ ಏಕದಿನ ಅರ್ಧಶತಕವನ್ನೂ ದಾಖಲಿಸಿದರು. ಅರ್ಧಶತಕದ ನಂತರ ಇನ್ನಷ್ಟು ವೇಗವಾಗಿ ಬ್ಯಾಟ್ ಬೀಸಿದ ಮಾರ್ಷ್ ಶತಕಕ್ಕೆ 19 ರನ್ ದೂರ ಇದ್ದಾಗ ವಿಕೆಟ್ ಕಳೆದುಕೊಂಡರು. 81 ರನ್ ಗಳಿಸಿ ಆಡುತ್ತಿದ್ದ ಮಾರ್ಷ ಅವರನ್ನು ರವೀಂದ್ರ ಜಡೇಜಾ ತಮ್ಮ ಸ್ಪಿನ್ ಬಲೆಗೆ ಬೀಳಿಸಿದರು.
ನಂತರ ಬಂದ ಮಾರ್ನಸ್ ಲಬುಶೇನ್ (15), ಜೋಶ್ ಇಂಗ್ಲಿಷ್ (26) ಕೆಲ ಹೊತ್ತು ಬ್ಯಾಟಿಂಗ್ ಮಾಡಿದರಾದರೂ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಟೆಸ್ಟ್ನಲ್ಲಿ ಶತಕ ಗಳಿಸಿ ಫಾರ್ಮ್ಗೆ ಮರಳಿದ್ದ ಕ್ಯಾಮರಾನ್ ಗ್ರೀನ್ (12) ಕೂಡಾ ವೈಫಲ್ಯ ಕಂಡರು. ಬಹಳಾ ದಿನಗಳ ನಂತರ ಏಕದಿನ ಕ್ರಿಕೆಟ್ ಮರಳಿದ ಗ್ಲೆನ್ ಮ್ಯಾಕ್ಸ್‌ವೆಲ್ 8 ರನ್ ಗಳಿಸುವಷ್ಟರಲ್ಲಿ ಸುಸ್ತಾದರು. ಮಾರ್ಕಸ್ ಸ್ಟೊಯಿನಿಸ್ (5) ಸೀನ್ ಅಬಾಟ್ (0) ಮತ್ತು ಆಡಂ ಝಂಪಾ (0) ಕ್ರೀಸ್ಗೆ ಬಂದು ಹೋದದ್ದೇ ಅರಿವಿಗೆ ಬರಲಿಲ್ಲ. ಮಾರ್ಷ್ ಅವರ 81 ರನ್ ಬಿಟ್ಟರೆ ಸ್ಮಿತ್ 22 ಮತ್ತು ಇಂಗ್ಲಿಷ್ 26 ಗಳಿಸಿದರು. ಬಾಕಿ ಯಾರು 20ರ ಗಡಿ ದಾಟಲಿಲ್ಲ.
ಭಾರತದ ಪರ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ತಲಾ ಮೂರು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 2 ವಿಕೆಟ್ ಗಳಿಸಿದರು. ಹಾರ್ದಿಕ್ ಪಾಂಡ್ಯ ಮತ್ತು ಕುಲದೀಪ್ ಯಾದವ್ ಒಂದೊಂದು ವಿಕೆಟ್ ಉರುಳಿಸಿದರು. ಕೀಪಿಂಗ್ನಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದರು. ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ 22 ರನ್ ಗಳಿಸಿ ಆಡುತ್ತಿದ್ದ ಆಸಿಸ್ ನಾಯಕ ಸ್ಟೀವ್ ಸ್ಮಿತ್ ಕೊಟ್ಟ ಕ್ಯಾಚ್ ಅನ್ನು ಅದ್ಭುತವಾಗಿ ಹಿಡಿದರು. ಅಲ್ಲದೇ ಕೆಲ ವೈಡ್ ಬಾಲ್ಗಳನ್ನು ರಕ್ಷಿಸಿ ಬೌಂಡರಿ ಹೋಗುವುದನ್ನು ತಡೆದು ಹೆಚ್ಚಿನ ರನ್ ಉಳಿಸಿದರು.
ಇದನ್ನೂ ಓದಿ: IND vs AUS 1st ODI: ಟಾಸ್ ಗೆದ್ದ ಭಾರತ ಫೀಲ್ಡಿಂಗ್, ಹಾರ್ದಿಕ್ ಸೇರಿ ನಾಲ್ವರು ವೇಗಿಗಳ ಬಲ