ಶಾರ್ಜಾ: ಅಂಡರ್ 19 ಏಷ್ಯಾಕಪ್ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತ ಅಂಡರ್ 19 ತಂಡ 103 ರನ್ಗಳ ಅಂತರದಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದೆ. ಪ್ರಶಸ್ತಿ ಸುತ್ತಿನಲ್ಲಿ ಶ್ರೀಲಂಕಾ ಅಂಡರ್ 19 ತಂಡವನ್ನು ಎದುರಿಸಲಿದೆ.
ಗುರುವಾರ ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ಉಪನಾಯಕ ಶೇಕ್ ರಶೀದ್ ಅವರ 90 ರನ್ಗಳ ನೆರವಿನಿಂದ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 243 ರನ್ಗಳಿಸಿತ್ತು. ನಾಯಕ ಯಶ್ ಧುಲ್ 26, ವಿಕಿ ಒಸ್ತ್ವಲ್ 28 ಮತ್ತು ರಾಜ್ ಬಾವಾ 23 ರನ್ಗಳಿಸಿ ಭಾರತ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
244 ರನ್ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಭಾರತೀಯ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 140 ರನ್ಗಳಿಸಿ ಸರ್ವಪತನ ಕಂಡಿತು. ಆರಿಫುಲ್ ಇಸ್ಲಾಮ್ 42 ಮತ್ತು ಮಹ್ಜಿಫುಲ್ ಇಸ್ಲಾಮ್ 26 ರನ್ಗಳಿಸಿ ತಂಡ 100ರೊಳಗೆ ಆಲೌಟ್ ಆಗದಂತೆ ತಡೆದು ಹೀನಾಯ ಸೋಲು ತಪ್ಪಿಸಿದರು.
-
A spirited bowling performance from India help them reach the finals of the tournament.
— AsianCricketCouncil (@ACCMedia1) December 30, 2021 " class="align-text-top noRightClick twitterSection" data="
🇮🇳 - 243/8 in 50 overs
🇧🇩 - 140/10 in 38.2 overs#ACC #U19AsiaCup #INDVBAN pic.twitter.com/O5zJnvdxrw
">A spirited bowling performance from India help them reach the finals of the tournament.
— AsianCricketCouncil (@ACCMedia1) December 30, 2021
🇮🇳 - 243/8 in 50 overs
🇧🇩 - 140/10 in 38.2 overs#ACC #U19AsiaCup #INDVBAN pic.twitter.com/O5zJnvdxrwA spirited bowling performance from India help them reach the finals of the tournament.
— AsianCricketCouncil (@ACCMedia1) December 30, 2021
🇮🇳 - 243/8 in 50 overs
🇧🇩 - 140/10 in 38.2 overs#ACC #U19AsiaCup #INDVBAN pic.twitter.com/O5zJnvdxrw
ಟೂರ್ನಿ ಉದ್ದಕ್ಕೂ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ರಾಜವರ್ಧನ್ ಹಂಗಾರ್ಗೆಕರ್ ಈ ಪಂದ್ಯದಲ್ಲೂ 2 ವಿಕೆಟ್ ಪಡೆದು ಮಿಂಚಿದರು. ರವಿಕುಮಾರ್ 2, ರಾಜ್ ಬಾವಾ 2, ವಿಕಿ ಒಸ್ತ್ವಲ್ 2, ನಿಶಾಂತ್ ಮತ್ತು ತಾಂಬೆ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 148 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಲಾಗದೇ ಪಾಕಿಸ್ತಾನ 22 ರನ್ಗಳ ಸೋಲು ಕಂಡಿತು. ಶುಕ್ರವಾರ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಇದನ್ನೂ ಓದಿ:ಸೆಂಚುರಿಯನ್ ಟೆಸ್ಟ್: ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡಕ್ಕೆ 113 ರನ್ಗಳ ಜಯ, 1-0ಯಲ್ಲಿ ಸರಣಿ ಮುನ್ನಡೆ