ETV Bharat / sports

ನಾಥನ್ ಲಿಯಾನ್​ ಚಾಣಾಕ್ಷ ಬೌನ್ಸಿಂಗ್ ಬ್ಯಾಟ್ಸ್​​ಮನ್​​ಗಳಿಗೆ ಮಾರಕ: ಹರಭಜನ್ ಸಿಂಗ್​

33 ವರ್ಷದ ನಾಥನ್ ಲಿಯಾನ್​ ಅವರು​​ ಭಾರತದ ವಿರುದ್ಧ ಟೆಸ್ಟ್​ ಪಂದ್ಯಗಳಲ್ಲಿ ಅದ್ಭುತ ಯಶಸ್ಸು ಕಂಡಿದ್ದು, 18 ಪಂದ್ಯಗಳಲ್ಲಿ 85 ವಿಕೆಟ್​​​ ಉರುಳಿಸಿದ್ದಾರೆ. ಹರಭಜನ್ ಸಿಂಗ್​ ಅವರ ಕುರಿತು ಮಾತನಾಡಿ, ಆಸೀಸ್​ ತಂಡದ ಪ್ರಮುಖ ಅಸ್ತ್ರ ಎಂದಿದ್ದಾರೆ.

Harbhajan Singh
ಹರಭಜನ್ ಸಿಂಗ್​
author img

By

Published : Dec 14, 2020, 10:55 PM IST

ನವದೆಹಲಿ: ಆಸೀಸ್​ ಆಫ್​ ಸ್ಪಿನ್ನರ್​​ ನಾಥನ್ ಲಿಯಾನ್​ ಅವರ ಚಾಣಾಕ್ಷತನದ ಬೌನ್ಸಿಂಗ್​​ ಮತ್ತು ಸಾಂಪ್ರದಾಯಿಕ ಆಫ್ - ಸ್ಪಿನ್​​​​ ಬಳಸಿ ಬ್ಯಾಟ್ಸ್​​ಮನ್​​ಗಳನ್ನು ಪೆವಿಲಿಯನ್​ಗೆ​​​​ ಕಳುಹಿಸುವುದನ್ನು ನೋಡಲು ಅತ್ಯಂತ ಖುಷಿಯಾಗುತ್ತದೆ ಎಂದು ಟೆಸ್ಟ್ ಇತಿಹಾಸದ 2ನೇ ಅತ್ಯಂತ ಯಶಸ್ವಿ ಆಫ್​​​ ಸ್ಪಿನ್ನರ್ ಹರಭಜನ್ ಸಿಂಗ್​ ಹೇಳಿದರು.

33 ವರ್ಷದ ನಾಥನ್​​ ಭಾರತದ ವಿರುದ್ಧ ಟೆಸ್ಟ್​ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ತೋರಿದ್ದು, 18 ಪಂದ್ಯಗಳಲ್ಲಿ 85 ವಿಕೆಟ್​​​ ಉರುಳಿಸಿದ್ದಾರೆ. ಅವರ ಬೌಲಿಂಗ್​​ ಮತ್ತು ಕಾರ್ಯನಿರ್ವಹಿಸುವ ರೀತಿ ಕಣ್ತುಂಬಿಕೊಳ್ಳಲು ಹೆಚ್ಚು ಇಷ್ಟಪಡುತ್ತೇನೆ. ಎಲ್ಲರಿಗಿಂತ ಪರಿಸ್ಥಿತಿಗಳನ್ನು ತುಂಬಾ ಚೆನ್ನಾಗಿ ಅರಿತುಕೊಂಡಿದ್ದಾರೆ. ಆಸ್ಟ್ರೇಲಿಯಾದ ತಂಡದ ಪ್ರಮುಖ ಅಸ್ತ್ರ ಎಂದು ಭಜ್ಜಿ ಹೇಳಿದರು.

ಚೆಂಡನ್ನು ತಿರುಗಿಸುವ ಮತ್ತು ಹಾರಿಸುವ ವಿಧಾನ ನೋಡಲು ತುಂಬಾ ವಿಶೇಷ ಮತ್ತು ಅದ್ಭುತವಾಗಿರುತ್ತದೆ. ಬೆರಳುಗಳ ಮೂಲಕ ಅವರು ಮಾಡುವ ಸ್ಪಿನ್​ ಮೋಡಿ ಆಕರ್ಷಕವಾಗಿರುತ್ತದೆ. ಹಾಗೆಯೇ ವೇಗವಾಗಿ ಬೀಸುವ ಬ್ಯಾಟ್ಸ್​​ಮನ್​​ಗಳಿಗೆ ಅದು ಸಂಕಷ್ಟ ತರುತ್ತದೆ. ಅವರು ಎಸೆದ ಬಾಲ್​ ನೆಲಕ್ಕೆ ಬಿದ್ದ ನಂತರ ಮತ್ತೊಂದು ಕಡೆ ಹೊರಳುವಂತೆ ಮಾಡುತ್ತಾರೆ. ಎಷ್ಟೋ ಬ್ಯಾಟ್ಸ್​​​ಮನ್​​ಗಳು ಅವರ ಬೌಲಿಂಗ್​​​ನಲ್ಲಿ ಕಕ್ಕಾಬಿಕ್ಕಿಯಾಗಿದ್ದಾರೆ ಎಂದು ಹಾಡಿ ಹೊಗಳಿದರು.

ನಾಥನ್​ ಪ್ರಸ್ತುತ ಆಡುತ್ತಿರುವ ಎಲ್ಲ ಬೌಲರ್‌ಗಳಿಗಿಂತ ಉತ್ತಮವಾಗಿ ಎಲ್ಲ ಸಂದರ್ಭಗಳ ಪರಿಸ್ಥಿತಿಗಳನ್ನು ಬಲ್ಲವರಾಗಿದ್ದಾರೆ. ಒತ್ತಡದ ಸಂದರ್ಭದಲ್ಲಿ ಬೌಲಿಂಗ್ ಮಾಡುವುದು ಹೇಗೆ ಎಂಬುದನ್ನು ಕಂಡುಹಿಡಿಯಲು ಒಂದು ಮಾರ್ಗ ಇದ್ದೇ ಇರುತ್ತದೆ. ಅದನ್ನು ಬೇಗನೇ ಕಂಡುಕೊಂಡರೆ ಅವರ ಕಾರ್ಯಕ್ಷಮತೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಿದರು.

390 ಟೆಸ್ಟ್ ವಿಕೆಟ್​​ಗಳನ್ನು ಗಳಿಸಿರುವ ಲಿಯಾನ್, ಮುಂಬರುವ ಭಾರತ - ಆಸ್ಟ್ರೇಲಿಯಾ ಸರಣಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800) ಮತ್ತು ಭಾರತದ ಹರಭಜನ್ (417) ನಂತರ 400 ವಿಕೆಟ್ ಪಡೆಯುವ ಟೆಸ್ಟ್ ಇತಿಹಾಸದಲ್ಲಿ ಮೂರನೇ ಸ್ಪಿನ್ನರ್ ಎಂಬ ದಾಖಲೆಗೆ ಬರೆಯಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.