ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ನೆಟ್ ಪ್ರಾಕ್ಟಿಸ್ನಲ್ಲಿ ಬೆವರು ಸುರಿಸಲು ಆರಂಭಿಸಿದೆ. ಈ ನಡುವೆ ಮುಖ್ಯ ಕೋಚ್ ರವಿಶಾಸ್ತ್ರಿ ಫೀಲ್ಡ್ಗೆ ಇಳಿದಿದ್ದು, ಆಟಗಾರರೊಂದಿಗೆ ಕೂಡಿಕೊಂಡಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಶಾಸ್ತ್ರಿ ‘ಗ್ರೇಟ್ ಟು ಗೆಟ್ ಬ್ಯಾಕ್ ಟು ಬ್ಯುಸಿನೆಸ್’ ( ಅಭ್ಯಾಸಕ್ಕೆ ಮರಳಿರುವುದು ಅದ್ಭುತ ಎನಿಸುತ್ತಿದೆ) ಎಂದು ಸಂತಸ ಹಂಚಿಕೊಂಡಿದ್ದಾರೆ. ಭಾರತ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಪಂದ್ಯ, ಮೂರು ಟಿ-20 ಮತ್ತು 4 ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ನ.27ರಿಂದ ಪಂದ್ಯಗಳು ಆರಂಭವಾಗಲಿವೆ.
ಬುಧವಾರ ಮೈದಾನದಲ್ಲಿ ಕಂಡು ಬಂದ ಶಾಸ್ತ್ರಿ, ಹಾರ್ದಿಕ್ ಪಾಂಡ್ಯ, ಶಿಖರ್ ಧವನ್ ಮತ್ತು ಶಾರ್ದೂಲ್ ಠಾಕೂರ್ ಜೊತೆ ಇರುವ ಫೋಟೋ ಹಂಚಿಕೊಂಡಿದ್ದಾರೆ.
-
Great to get back to business - with @hardikpandya7 @SDhawan25 @imShard #TeamIndia #AUSvIND 🇮🇳🙏🏻 pic.twitter.com/yaaFwYOw3d
— Ravi Shastri (@RaviShastriOfc) November 18, 2020 " class="align-text-top noRightClick twitterSection" data="
">Great to get back to business - with @hardikpandya7 @SDhawan25 @imShard #TeamIndia #AUSvIND 🇮🇳🙏🏻 pic.twitter.com/yaaFwYOw3d
— Ravi Shastri (@RaviShastriOfc) November 18, 2020Great to get back to business - with @hardikpandya7 @SDhawan25 @imShard #TeamIndia #AUSvIND 🇮🇳🙏🏻 pic.twitter.com/yaaFwYOw3d
— Ravi Shastri (@RaviShastriOfc) November 18, 2020
ನವೆಂಬರ್ 12ರಂದು ಸಿಡ್ನಿಗೆ ಆಗಮಿಸಿರುವ ಭಾರತ ತಂಡ ಕೋವಿಡ್ ಹಿನ್ನೆಲೆ ಅಲ್ಲಿಯೇ ಕ್ವಾರಂಟೈನ್ ಆಗಿದೆ. ಆಸ್ಟ್ರೇಲಿಯಾ ಪಿಚ್ಗಳು ಹೆಚ್ಚು ಬೌನ್ಸ್ ಆಗುವ ಹಿನ್ನೆಲೆ ಕೆ.ಎಲ್ ರಾಹುಲ್ ಟೆನಿಸ್ ಬಾಲ್ನಲ್ಲಿ ಅಭ್ಯಾಸ ಮಾಡುತ್ತಿರುವುದು ಕಂಡು ಬಂದಿದೆ.
ಬಿಸಿಸಿಐ ಪೋಸ್ಟ್ ಮಾಡಿರುವ ವಿಡಿಯೋವೊಂದರಲ್ಲಿ ಸ್ಪಿನ್ನರ್ ಆರ್ ಅಶ್ವಿನ್ ಟೆನಿಸ್ ಬಾಲ್ನಲ್ಲಿ ನೆಟ್ ಪ್ರಾಕ್ಟಿಸ್ ನಡೆಸುತ್ತಿರುವುದು ಕಂಡು ಬಂದಿದೆ.