ಮುಂಬೈ: 2024ರಿಂದ 2027ರ ಅವಧಿಯಲ್ಲಿ ಒಟ್ಟು ನಾಲ್ಕು ಮಹಿಳಾ ವಿಶ್ವಕಪ್ಗಳು ನಡೆಯಲಿದ್ದು, ಇದರಲ್ಲಿ 2025ರ ಮಹಿಳಾ ಏಕದಿನ ವಿಶ್ವಕಪ್ ಭಾರತದಲ್ಲಿ ಆಯೋಜನೆಗೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ ಐಸಿಸಿ ಮಾಹಿತಿ ಹಂಚಿಕೊಂಡಿದೆ. ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಕಾರ್ಯಕ್ರಮಕ್ಕೆ ಅನುಮೋದನೆ ಸಿಕ್ಕಿದ್ದು, ಶ್ರೀಲಂಕಾದಲ್ಲಿ ಮಹಿಳಾ ಚಾಂಪಿಯನ್ಸ್ ಟ್ರೋಫಿ ನಡೆಸಲು ನಿರ್ಧರಿಸಲಾಗಿದೆ.
-
The hosts for the ICC Women's tournaments between 2024-2027 have now been confirmed 🤩
— ICC (@ICC) July 26, 2022 " class="align-text-top noRightClick twitterSection" data="
Details 👇https://t.co/Auw0YAMRLD
">The hosts for the ICC Women's tournaments between 2024-2027 have now been confirmed 🤩
— ICC (@ICC) July 26, 2022
Details 👇https://t.co/Auw0YAMRLDThe hosts for the ICC Women's tournaments between 2024-2027 have now been confirmed 🤩
— ICC (@ICC) July 26, 2022
Details 👇https://t.co/Auw0YAMRLD
ಉಳಿದ ವಿಶ್ವಕಪ್ಗಳಿಗೋಸ್ಕರ ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ಶ್ರೀಲಂಕಾ ಆತಿಥ್ಯ ಪಡೆದುಕೊಂಡಿವೆ. ICC ಮಹಿಳಾ T-20 ವಿಶ್ವಕಪ್ 2024 ಬಾಂಗ್ಲಾದೇಶ, 2026ರ ಆವೃತ್ತಿಯ ವಿಶ್ವಕಪ್ ಇಂಗ್ಲೆಂಡ್ ಹಾಗೂ 2025ರಲ್ಲಿ ಭಾರತದಲ್ಲಿ ವಿಶ್ವಕಪ್ ಆಯೋಜನೆಗೊಳ್ಳಲಿದೆ. ಇದರ ಬಗ್ಗೆ ಮಾತನಾಡಿರುವ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ, ಬಾಂಗ್ಲಾದೇಶ, ಭಾರತ, ಇಂಗ್ಲೆಂಡ್ ಮತ್ತು ಶ್ರೀಲಂಕಾದಲ್ಲಿ ಐಸಿಸಿ ಮಹಿಳಾ ವಿಶ್ವಕಪ್ ಆಯೋಜನೆಯ ಆತಿಥ್ಯ ವಹಿಸಿಕೊಂಡಿದ್ದು, ಇದಕ್ಕೆ ನಾವು ಸಂತೋಷಪಡುತ್ತೇವೆ. ಮಹಿಳಾ ಕ್ರಿಕೆಟ್ ಮತ್ತಷ್ಟು ಉತ್ತುಂಗಕ್ಕೆ ತೆಗೆದುಕೊಂಡು ಹೋಗಲು ಇದು ಉತ್ತಮ ವೇದಿಕೆಯಾಗಲಿದೆ ಎಂದರು.
ಇದನ್ನೂ ಓದಿರಿ: "India And...": T-20 ವಿಶ್ವಕಪ್ ಫೈನಲ್ನಲ್ಲಿ ಮುಖಾಮುಖಿಯಾಗುವ ತಂಡ ಹೆಸರಿಸಿದ ಪಾಂಟಿಂಗ್
ಇದೇ ವೇಳೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಗಂಗೂಲಿ, 2025ರ ಐಸಿಸಿ ಮಹಿಳಾ ವಿಶ್ವಕಪ್ ಆಯೋಜನೆ ಮಾಡಲು ನಾವು ಉತ್ಸುಕರಾಗಿದ್ದೇವೆ. ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್ ವೇಗವಾಗಿ ಬೆಳೆಯುತ್ತಿದ್ದು, ಐಸಿಸಿ ಜೊತೆ ನಾವು ನಿಕಟವಾಗಿ ಕೆಲಸ ಮಾಡ್ತಿದ್ದೇವೆ ಎಂದರು.