ಹ್ಯಾಮಿಲ್ಟನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಏಕದಿನ ಸರಣಿಯ 2 ನೇ ಪಂದ್ಯ ಇಂದು ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು ಮಳೆ ಅಡ್ಡಿಪಡಿಸಿದೆ. ಇದಕ್ಕೂ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ಕ್ಯಾಪ್ಟನ್ ಕೇನ್ ವಿಲಿಯಮ್ಸನ್ ಫೀಲ್ಡಿಂಗ್ ಆಯ್ದುಕೊಂಡರು. ಈ ಮೂಲಕ 2ನೇ ಪಂದ್ಯದಲ್ಲೂ ಟಾಸ್ ಸೋತು ಭಾರತ ತಂಡ ಬ್ಯಾಟಿಂಗ್‌ಗೆ ಕ್ರೀಸಿಗಿಳಿಯಿತು. ಪಂದ್ಯ ಶುರುವಾಗಿ ನಾಲ್ಕು ಓವರ್‌ಗಳಾಗುತ್ತಲೇ ಮಳೆ ಸುರಿಯಿತು. ಹೀಗಾಗಿ, ಪಂದ್ಯವನ್ನು ಸದ್ಯಕ್ಕೆ ಮೊಟಕುಗೊಳಿಸಲಾಗಿದೆ.
ಈಗಾಗಲೇ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಿವೀಸ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಏಕದಿನ ಸರಣಿ ಗೆಲ್ಲಬೇಕಿದ್ದರೆ ಈ ಪಂದ್ಯ ಶಿಖರ್ ಧವನ್ ಟೀಂಗೆ ಮಹತ್ವದ್ದು.
ಇಂದಿನ ಪಂದ್ಯಕ್ಕಾಗಿ ಭಾರತ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಸಂಜು ಸ್ಯಾಮ್ಸನ್ ಬದಲಿಗೆ ಆಲ್‌ರೌಂಡರ್ ದೀಪಕ್ ಹೂಡಾ ಅವರನ್ನು ಕಣಕ್ಕಿಳಿಸಲಾಗಿದೆ. ಅದೇ ರೀತಿ ಶಾರ್ದೂಲ್ ಠಾಕೂರ್ ಅವರನ್ನು ಕೈಬಿಟ್ಟು ದೀಪಕ್ ಚಹಾರ್‌ಗೆ ಚಾನ್ಸ್ ನೀಡಲಾಗಿದೆ. ಅದೇ ರೀತಿ ನ್ಯೂಜಿಲೆಂಡ್ ಕೂಡಾ ತಂಡದಲ್ಲಿ ಮಿಲ್ನೆ ಬದಲಿಗೆ ಬ್ರೇಸ್‌ವೆಲ್‌ಗೆ ಅವಕಾಶ ನೀಡಿದೆ. ಪಂದ್ಯದ ನೇರಪ್ರಸಾರವನ್ನು ಡಿಡಿ ಸ್ಪೋರ್ಟ್ಸ್‌ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ: ನಾಳೆ 2ನೇ ಏಕದಿನ ಪಂದ್ಯ: ನ್ಯೂಜಿಲ್ಯಾಂಡ್ ವಿರುದ್ಧ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯ