ETV Bharat / sports

ಟಿ20ಗೆ ಹಾರ್ದಿಕ್​ ಪಾಂಡ್ಯ, ಏಕದಿನಕ್ಕೆ ರೋಹಿತ್​ ಸಾರಥ್ಯ: ಶ್ರೀಲಂಕಾ ಸರಣಿಗೆ ಭಾರತ ತಂಡ ಪ್ರಕಟ

ಶ್ರೀಲಂಕಾ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ- ರವೀಂದ್ರ ಜಡೇಜಾ, ಜಸ್ಪ್ರೀತ್​ ಬೂಮ್ರಾ ಅಲಭ್ಯ- ಟಿ20 ತಂಡಕ್ಕೆ ಹಾರ್ದಿಕ್​ ಪಾಂಡ್ಯ ನಾಯಕ- ಏಕದಿನಕ್ಕೆ ರೋಹಿತ್​​ ಶರ್ಮಾ ಕ್ಯಾಪ್ಟನ್​- ಐಪಿಎಲ್​ ತಾರೆಯರಾದ ಶಿವಂ ಮಾವಿ, ಮುಕೇಶ್​ಕುಮಾರ್​ಗೆ ಅವಕಾಶ

india-announce-squad-against-sri-lanka-series
ಶ್ರೀಲಂಕಾ ಸರಣಿಗೆ ಭಾರತ ತಂಡ ಪ್ರಕಟ
author img

By

Published : Dec 28, 2022, 7:30 AM IST

ಮುಂಬೈ (ಮಹಾರಾಷ್ಟ್ರ): ತವರಿನಲ್ಲಿ ನಡೆಯುವ ಶ್ರೀಲಂಕಾ ವಿರುದ್ಧ ಟಿ20, ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ನಿರೀಕ್ಷೆಯಂತೆ ಟಿ20 ತಂಡಕ್ಕೆ ಹಾರ್ದಿಕ್​ ಪಾಂಡ್ಯ ನಾಯಕರಾದರೆ, ಏಕದಿನ ತಂಡಕ್ಕೆ ರೋಹಿತ್​ ಶರ್ಮಾ ನಾಯಕರಾಗಿ ಮುಂದುವರಿಯಲಿದ್ದಾರೆ. ಗಾಯದ ಕಾರಣಕ್ಕಾಗಿ ಕ್ರಿಕೆಟ್​ನಿಂದ ದೂರವಿರುವ ಆಲ್​ರೌಂಡರ್​ ರವೀಂದ್ರ ಜಡೇಜಾ ಮತ್ತು ವೇಗಿ ಜಸ್ಪ್ರೀತ್​ ಬೂಮ್ರಾರನ್ನು ಪರಿಗಣಿಸಲಾಗಿಲ್ಲ.

ಭಾರತ ಪ್ರವಾಸ ಕೈಗೊಳ್ಳಲಿರುವ ಶ್ರೀಲಂಕಾ ತಲಾ 3 ಟಿ20, ಏಕದಿನ ಪಂದ್ಯವಾಡಲಿದೆ. ಸರಣಿ ಜನವರಿ 3 ರಿಂದ 15 ರವರೆಗೆ ನಡೆಯಲಿದೆ. ಟಿ20 ತಂಡಕ್ಕೆ ಯುವ ಆಟಗಾರರನ್ನು ಪರಿಗಣಿಸಲಾಗಿದ್ದು, ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಕೆಎಲ್​ ರಾಹುಲ್​ರನ್ನು ಕೈಬಿಡಲಾಗಿದೆ. ಕಳಪೆ ಪ್ರದರ್ಶನದಿಂದಾಗಿ ಟೀಕೆಗೆ ಒಳಗಾಗಿರುವ ವಿಕೆಟ್​ ಕೀಪರ್​ ರಿಷಬ್​ ಪಂತ್​ ಸರಣಿಯಿಂದಲೇ ಹೊರಬಿದ್ದಿದ್ದಾರೆ.

ಹಾರ್ದಿಕ್​ ನಾಯಕ, ಸೂರ್ಯ ಉಪನಾಯಕ: ವಿಶ್ವಕಪ್​ ಸೋಲಿನ ಬಳಿಕ ಟಿ20 ತಂಡದ ಬದಲಾವಣೆಗೆ ಬಲವಾದ ಕೂಗು ಕೇಳಿಬಂದಿತ್ತು. ತಂಡದ ನಾಯಕತ್ವದ ಹೊಣೆಯನ್ನು ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಗೆ ನೀಡಬೇಕು ಎಂದು ಒತ್ತಾಯಿಸಲಾಗಿತ್ತು. ಇದೀಗ ಸ್ಟಾರ್​ ಆಲ್​ರೌಂಡರ್​ಗೆ ಆಯ್ಕೆಗಾರರು ನಾಯಕತ್ವ ಪಟ್ಟ ಕಟ್ಟಿದ್ದಾರೆ. ಮಿಂಚಿನ ಬ್ಯಾಟಿಂಗ್​ ಮೂಲಕ ಸಂಚಲನ ಮೂಡಿಸಿರುವ ಸೂರ್ಯಕುಮಾರ್​​ ಯಾದವ್​ಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ.

ಟಿ20ಗೆ ಹಿರಿಯ ಆಟಗಾರರಾದ ಕೊಹ್ಲಿ, ರೋಹಿತ್​, ರಾಹುಲ್​ ಅಲ್ಲದೇ ರಿಷಬ್​ ಪಂತ್​ರನ್ನೂ ಕೂಡ ಕೈಬಿಡಲಾಗಿದೆ. ರಾಹುಲ್​ ತ್ರಿಪಾಠಿ, ಸಂಜು ಸ್ಯಾಮ್ಸನ್​ ಉಮ್ರಾನ್​ ಮಲಿಕ್​ ಋತುರಾಜ್​ ಗಾಯಕ್ವಾಡ್​ ಮತ್ತೊಮ್ಮೆ ಅವಕಾಶ ಪಡೆದಿದ್ದಾರೆ. ಆಲ್​ರೌಂಡರ್​ ಕೋಟಾದಲ್ಲಿ ದೀಪಕ್​ ಹೂಡಾ, ವಾಷಿಂಗ್ಟನ್​ ಸುಂದರ್​, ಅಕ್ಸರ್​ ಪಟೇಲ್​ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಐಪಿಎಲ್​ ತಾರೆಯರ ಎಂಟ್ರಿ: ಇಂಡಿಯನ್​ ಪ್ರೀಮಿಯರ್​ ಲೀಗ್​ನ(ಐಪಿಎಲ್​) ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಡ್​ ಆಗಿರುವ ವೇಗಿಗಳಾದ ಶಿವಂ ಮಾವಿ ಮತ್ತು ಮುಕೇಶ್​ಕುಮಾರ್​ ಭಾರತ ತಂಡದ ಕದ ಬಡಿದಿದ್ದಾರೆ. ಇದೇ ಮೊದಲ ಬಾರಿಗೆ ತಂಡದಲ್ಲಿ ಅವಕಾಶ ಪಡೆದಿರುವ ಇಬ್ಬರು ಆಟಗಾರರು ಉತ್ತಮ ಪ್ರದರ್ಶ ನೀಡಿ ಭವಿಷ್ಯ ಭದ್ರಪಡಿಸಿಕೊಳ್ಳಬೇಕಿದೆ.

ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಜನವರಿ 3 ರಂದು ಮುಂಬೈನಲ್ಲಿ ನಡೆದರೆ, 2 ಮತ್ತು 3ನೇ ಪಂದ್ಯ ಕ್ರಮವಾಗಿ 5 ಮತ್ತು 7 ರಂದು ಪುಣೆ ಮತ್ತು ರಾಜ್‌ಕೋಟ್‌ನಲ್ಲಿ ನಡೆಯಲಿದೆ.

ಏಕದಿನ ತಂಡದಿಂದ ಶಿಖರ್​ ಧವನ್​ ಔಟ್​: ಟಿ20 ಬಳಿಕ 3 ಪಂದ್ಯಗಳ ಏಕದಿನ ಸರಣಿ ಕೂಡ ನಡೆಯಲಿದ್ದು, ಅದಕ್ಕೂ ತಂಡ ಪ್ರಕಟಿಸಲಾಗಿದೆ. ನ್ಯೂಜಿಲ್ಯಾಂಡ್​ ಏಕದಿನ ಸರಣಿಯಲ್ಲಿ ತಂಡ ಮುನ್ನಡೆಸಿದ್ದ ಶಿಖರ್​ ಧವನ್​ ಶ್ರೀಲಂಕಾ ಸರಣಿಯಿಂದ ಹೊರಬಿದ್ದಿದ್ದಾರೆ. ರಿಷಬ್​ ಪಂತ್​ರನ್ನೂ ಕೈಬಿಡಲಾಗಿದೆ. ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ನಾಯಕ ರೋಹಿತ್​ ಶರ್ಮಾ ತಂಡಕ್ಕೆ ಮರಳಿದ್ದು, ತಂಡದ ಸಾರಥ್ಯ ವಹಿಸಲಿದ್ದಾರೆ.

ಹಾರ್ದಿಕ್​ ಪಾಂಡ್ಯಗೆ ಉಪನಾಯಕನಾಗಿ ಬಡ್ತಿ ನೀಡಲಾಗಿದೆ. ವಿರಾಟ್​ ಕೊಹ್ಲಿ, ಕೆಎಲ್​ ರಾಹುಲ್​, ಮೊಹಮದ್​ ಶಮಿ, ಸೂರ್ಯಕುಮಾರ್​ ಯಾದವ್​ ಮುಂದುವರಿಯಲಿದ್ದಾರೆ. ಬಾಂಗ್ಲಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಶುಭ್​ಮನ್ ಗಿಲ್​, ಶ್ರೇಯಸ್​ ಅಯ್ಯರ್​ಗೆ ಸ್ಥಾನ ನೀಡಲಾಗಿದೆ. ಜನವರಿ 10, 12 ಮತ್ತು 15 ರಂದು ಕ್ರಮವಾಗಿ ಗುವಾಹಟಿ, ಕೋಲ್ಕತ್ತಾ ಮತ್ತು ತಿರುವನಂತಪುರದಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ.

ಟಿ20 ಸರಣಿಗೆ ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್​ ಕೀಪರ್​), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಅಕ್ಸರ್ ಪಟೇಲ್, ಅರ್ಷದೀಪ್​ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ ಮತ್ತು ಮುಕೇಶ್​ಕುಮಾರ್.

ಏಕದಿನ ಸರಣಿಯ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್ (ವಿಕೆಟ್​ ಕೀಪರ್​), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ಮೊಹಮದ್​ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಅರ್ಷದೀಪ್ ಸಿಂಗ್.

ಓದಿ: ಭಾರತ-ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್! ಸದ್ಯದ ಲೆಕ್ಕ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.