ಕೊಲಂಬೊ (ಶ್ರೀಲಂಕಾ) : ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ನಡೆದ ಉದಯೋನ್ಮುಖ ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಪಾಕ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಪ್ ಎತ್ತಿ ಹಿಡಿಯಲು ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಪಾಕ್ ಎದುರು ಎಡುವಿದ ಭಾರತದ ಆಲೌಟ್ ಆಗುವ ಮೂಲಕ ಕಪ್ ಗೆಲ್ಲುವ ಕನಸು ಛದ್ರಗೊಂಡಿದೆ. ಪಾಕ್ ಪರ ತಯ್ಯಬ್ ತಾಹಿರ್ ಶತಕ ಸಿಡಿಸಿ ತಂಡ ಚಾಂಪಿಯನ್ ಆಗಲು ಕೊಡುಗೆ ನೀಡಿದರು.
ಭಾರತ ಎ ತಂಡ ನಾಯಕ ಯಶ್ ಧುಲ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗೆ ಇಳಿದ ಪಾಕ್ ಸೈಮ್ ಅಯೂಬ್ (59) ಮತ್ತು ಸಾಹಿಬ್ಜಾದಾ ಫರ್ಹಾನ್ (65) ಶತಕದ ಜೊತೆಯಾಟದಿಂದ ಉತ್ತಮ ಆರಂಭಪಡೆದುಕೊಂಡಿತ್ತು. ಬಳಿಕ ಬಂದಂತ ಬ್ಯಾಟರ್ಸ್ ಉತ್ತಮ ಆಟ ಪ್ರದರ್ಶನ ಮಾಡಿದರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಬಂದ ತಯ್ಯಬ್ ತಾಹಿರ್ (108) ಅಮೋಘವಾದ ಶತಕ ಸಿಡಿಸಿ ಮಿಂಚಿದರು. ಈ ಮೂಲಕ 50 ಓವರ್ಗಳಲ್ಲಿ 352 ರನ್ ಗಳಿಸಿ ಭಾರತಕ್ಕೆ 353 ರನ್ ಟಾರ್ಗೆಟ್ ನೀಡಿತ್ತು.
-
India 'A' fought hard with the bat but fall short in the chase.
— BCCI (@BCCI) July 23, 2023 " class="align-text-top noRightClick twitterSection" data="
They finish the #ACCMensEmergingTeamsAsiaCup as Runners-up 👏👏
Scorecard - https://t.co/qztT65tDLs #ACC pic.twitter.com/e4x0usYIma
">India 'A' fought hard with the bat but fall short in the chase.
— BCCI (@BCCI) July 23, 2023
They finish the #ACCMensEmergingTeamsAsiaCup as Runners-up 👏👏
Scorecard - https://t.co/qztT65tDLs #ACC pic.twitter.com/e4x0usYImaIndia 'A' fought hard with the bat but fall short in the chase.
— BCCI (@BCCI) July 23, 2023
They finish the #ACCMensEmergingTeamsAsiaCup as Runners-up 👏👏
Scorecard - https://t.co/qztT65tDLs #ACC pic.twitter.com/e4x0usYIma
ಬಳಿಕ ಗುರಿ ಬೆನ್ನತ್ತಿದ್ದ ಭಾರತ ತಂಡದ ಪರ ಸಾಯಿ ಸುದರ್ಶನ್ (29) ಅರ್ಷದ್ ಇಕ್ಬಾಲ್ಗೆ ಔಟ್ ಆದರೆ, ಅಭಿಷೇಕ್ ಶರ್ಮಾ (61) ಅರ್ಧಶತಕ ಹೊಡೆದು ಗೆಲುವಿನ ಆಸೆ ಚಿಗುರೊಡಿಸಿದರಾದರೂ, ಸೂಫಿಯಾನ್ ಮುಖೀಮ್ ಬೌಲಿಂಗ್ನಲ್ಲಿ ವಿಕೆಟ್ ನೀಡಿದರು. ನಿಕಿನ್ ಜೋಸ್ (11) ಮೊಹಮ್ಮದ್ ವಾಸಿಂ ಜೂ ಬೌಲಿಂಗ್ನಲ್ಲಿ ಪೆವಿಲಿಯನ್ಯತ್ತ ಹೆಜ್ಜೆ ಹಾಕಿದರು. ಇನ್ನು ಕಳೆದ ಎರಡು ಪಂದ್ಯಗಳಿಂದ ನಾಯಕನ ಆಟವಾಡಿ ತಂಡವನ್ನು ಫೈನಲ್ಗೆ ತಂದಿದ್ದ ಯಶ್ ಧುಲ್ (39) ಪಾಕ್ ಎದುರು ಸಾಮಾನ್ಯ ಆಟವಾಡಿ ಸೂಫಿಯಾನ್ ಮುಖೀಮ್ಗೆ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ಯಾವೊಬ್ಬ ಆಟಗಾರ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ನಿಶಾಂತ್ ಸಿಂಧು (10) ಮುಬಾಸಿರ್ ಖಾನ್ಗೆ ವಿಕೆಟ್ ಕೊಟ್ಟರೇ, ಧ್ರುವ್ ಜುರೆಲ್ (9) ಹಾಗು ರಿಯಾನ್ ಪರಾಗ್ (14) ಮೆಹ್ರಾನ್ ಮುಮ್ತಾಜ್ ಬೌಲಿಂಗ್ನಲ್ಲಿ ಆಟ ನಿಲ್ಲಿಸಿದರೆ, ರಾಜವರ್ಧನ್ ಹಂಗಾರಗೇಕರ (11) ಅರ್ಷದ್ ಇಕ್ಬಾಲ್ ಬೌಲಿಂಗ್ ಬೌಲ್ಡ್ ಆದರು. ಯುವರಾಜ್‌ಸಿನ್ಹ್ ದೋಡಿಯಾ (5) ಮೊಹಮ್ಮದ್ ವಾಸಿಂ ಜೂ ಬೌಲಿಂಗ್ ಹೊಒ ನಡೆದಿದ್ದು, ಮಾನವ್ ಸುತಾರ್ (7) ಅಜೇಯರಾಗಿ ಉಳಿದು ಭಾರತ ಅಲೌಟ್ ಆಗುವ ಮೂಲಕ ಹೀನಾಯ ಸೋಲಿ ಕಂಡಿತ್ತು.
ಪಾಕ್ ಪರ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಸೂಫಿಯಾನ್ ಮುಖೀಮ್ 3 ವಿಕೆಟ್ ಪಡೆದುಕೊಂಡರು. ಮೆಹ್ರಾನ್ ಮುಮ್ತಾಜ್, ಅರ್ಷದ್ ಇಕ್ಬಾಲ್ ಮತ್ತು ಮೊಹಮ್ಮದ್ ವಾಸಿಂ ಜೂ ತಲಾ 2 ವಿಕೆಟ್ ಪಡೆದು ಮಿಂಚಿನ ದಾಳಿ ನಡೆಸಿದರು. ಇನ್ನೊಂದೆಡೆ ಮುಬಾಸಿರ್ ಖಾನ್ ಒಂದು ವಿಕೆಟ್ ತನ್ನ ಖಾತೆಗೆ ಹಾಕಿಕೊಂಡರು.
ಇದನ್ನೂ ಓದಿ : ಉದಯೋನ್ಮುಖ ಏಷ್ಯಾಕಪ್ ಫೈನಲ್: ಭಾರತಕ್ಕೆ 353 ರನ್ ಗೆಲುವಿನ ಗುರಿ ನೀಡಿದ ಪಾಕ್