ETV Bharat / sports

ರವಿಶಾಸ್ತ್ರಿಗಿಂತಲೂ ರಾಹುಲ್​ ಭಾಯ್ ತುಂಬಾ ಭಿನ್ನ, ಪ್ರೇರಣಾ ಶೈಲಿ ವಿಭಿನ್ನ ಎಂದ ಶಿಖರ್​ - ಕೋಚ್​ ರಾಹುಲ್​ ದ್ರಾವಿಡ್​

ಶ್ರೀಲಂಕಾದಲ್ಲಿರುವ ಟೀಂ ಇಂಡಿಯಾಗೆ ರಾಹುಲ್​ ದ್ರಾವಿಡ್​ ಕೋಚ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಕೋಚಿಂಗ್​ ವಿಧಾನ ​ ರವಿಶಾಸ್ತ್ರಿಗಿಂತಲೂ ಹೇಗೆ ಭಿನ್ನ ಎಂಬುದರ ಬಗ್ಗೆ ಶಿಖರ್​ ಧವನ್ ಮಾತನಾಡಿದ್ದಾರೆ.

Dhawan
Dhawan
author img

By

Published : Jul 18, 2021, 2:13 AM IST

ಕೊಲಂಬೊ: ಆತಿಥೇಯ ಶ್ರೀಲಂಕಾ ವಿರುದ್ಧ ಶಿಖರ್​ ಧವನ್ ನೇತೃತ್ವದ ಯಂಗ್ ಇಂಡಿಯಾ ಇಂದಿನಿಂದ ನಿಗದಿತ ಓವರ್​ಗಳ ಕ್ರಿಕೆಟ್​ ಸರಣಿಯಲ್ಲಿ ಭಾಗಿಯಾಗುತ್ತಿದ್ದು, ಗೆಲುವು ಸಾಧಿಸುವ ಇರಾದೆಯೊಂದಿಗೆ ಕಣಕ್ಕಿಳಿಯಲಿದೆ. ತಂಡಕ್ಕೆ ದಿ ವಾಲ್ ಖ್ಯಾತಿಯ ರಾಹುಲ್​ ದ್ರಾವಿಡ್​ ಕೋಚ್​ ಆಗಿದ್ದು, ತಂಡಕ್ಕೆ ಯಾವ ರೀತಿಯಾಗಿ ಪ್ರೇರಣೆ ನೀಡುತ್ತಿದ್ದಾರೆ ಎಂಬುದರ ಬಗ್ಗೆ ಶಿಖರ್​ ಧವನ್ ಮಾತನಾಡಿದ್ದಾರೆ.

IND vs SL 2021
ಇಶಾನ್​ ಕಿಶನ್ ಜೊತೆ ಶಿಖರ್​ ಧವನ್​

ಈಗಾಗಲೇ ಕೋಚ್​ ರವಿಶಾಸ್ತ್ರಿ ಮಾರ್ಗದರ್ಶನ ಪಡೆದು ಟೀಂ ಇಂಡಿಯಾದಲ್ಲಿ ಆಡಿರುವ ಶಿಖರ್​ ಧವನ್,​ ಇದೇ ಮೊದಲ ಸಲ ರಾಹುಲ್​ ದ್ರಾವಿಡ್​ ಕೋಚ್​​ನೊಂದಿಗೆ ತಂಡವನ್ನ ಮುನ್ನಡೆಸಲಿದ್ದಾರೆ. ರವಿಶಾಸ್ತ್ರಿ ಹಾಗೂ ರಾಹುಲ್​ ದ್ರಾವಿಡ್ ನಡುವೆ ಯಾವ ರೀತಿಯ ಭಿನ್ನತೆ ಇದೆ ಎಂಬುದರ ಬಗ್ಗೆ ವಿವರಣೆ ನೀಡಿದ್ದಾರೆ.

IND vs SL 2021
ಹಾರ್ದಿಕ್ ಪಾಂಡ್ಯಾ ಜೊತೆ ಶಿಖರ್​ ಧವನ್​

ರವಿಶಾಸ್ತ್ರಿ ಹಾಗೂ ರಾಹುಲ್​ ದ್ರಾವಿಡ್ ತಮ್ಮದೇ ವಿಶಿಷ್ಟ ಗುಣ ಹೊಂದಿದ್ದು, ಇಬ್ಬರು ತುಂಬಾ ಸಕಾರಾತ್ಮವಾಗಿ ತಂಡಕ್ಕೆ ಪ್ರೇರಣೆ ನೀಡುತ್ತಾರೆ. ನಾನು ಈಗಾಗಲೇ ರವಿ ಭಾಯ್​(ರವಿಶಾಸ್ತ್ರಿ) ಅವರೊಂದಿಗೆ ಸಮಯ ಕಳೆದಿದ್ದೇನೆ. ಅವರ ಪ್ರೇರೇಪಿಸುವ ವಿಧಾನ ಸಂಪೂರ್ಣವಾಗಿ ವಿಭಿನ್ನವಾಗಿದೆ. ರವಿ ಭಾಯ್​ ಏರು ಧ್ವನಿಯಲ್ಲಿ ಮಾತನಾಡುವ ಸ್ವಭಾವ ಹೊಂದಿದ್ದಾರೆ. ಆದರೆ ರಾಹುಲ್​ ಭಾಯ್​(ರಾಹುಲ್​ ದ್ರಾವಿಡ್​) ತುಂಬಾ ಶಾಂತ, ಸಕಾರಾತ್ಮಕವಾಗಿರುತ್ತಾರೆ. ಇವರಿಬ್ಬರ ಅಡಿಯಲ್ಲಿ ಆಟವಾಡುವುದನ್ನ ನಾನು ಆನಂದಿಸುತ್ತೇನೆ ಎಂದಿದ್ದಾರೆ.

IND vs SL 2021
ಅಭ್ಯಾಸದಲ್ಲಿ ನಿರತರಾಗಿರುವ ಟೀಂ ಇಂಡಿಯಾ ಪ್ಲೇಯರ್ಸ್​​

ಇದನ್ನೂ ಓದಿರಿ: ಬೆಂಗಳೂರಿನಿಂದ ಟೋಕಿಯೋಗೆ ಪ್ರಯಾಣ ಬೆಳೆಸಿದ ಪುರುಷ, ಮಹಿಳಾ ಹಾಕಿ ತಂಡ

ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಡುವ 11ರ ಬಳಕ ಈಗಾಗಲೇ ಅಂತಿಮಗೊಂಡಿದೆ. ಆದರೆ ಪಂದ್ಯ ಆರಂಭದ ವೇಳೆ ಹೆಸರು ಬಹಿರಂಗಪಡಿಸಲಿದ್ದೇವೆ ಎಂದು ಧವನ್​ ಇದೇ ವೇಳೆ ಹೇಳಿದರು. ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.